ಪಠಾಣ್ ಬಾಲಿವುಡ್ನ ಬಹು ನೀರೀಕ್ಷಿತ ಚಿತ್ರ. ಕಳೆದ ಸೋಮವಾರ ಬೇಶರಂ ರಂಗ್ ಹಾಡು ಬಿಡುಗಡೆ ಆಗಿ ವಿವಾದಕ್ಕೆ ಗುರಿಯಾಗಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಮೈ ಚಳಿ ಬಿಟ್ಟು ಕುಣಿದಿದ್ದರೆ, ಶಾರುಖ್ ಖಾನ್ ಸಿಕ್ಸ್ ಪ್ಯಾಕ್ನಲ್ಲಿ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಪ್ಲೀಟ್ ಸಾಂಗ್ ಸಖತ್ ಹಾಟ್ ಆಗಿ ಮೂಡಿಬಂದಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಈ ಬಹು ನಿರೀಕ್ಷಿತ ಚಿತ್ರ 'ಪಠಾಣ್'ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಜನವರಿ 25ರಂದು ಬಿಡುಗಡೆ ಆಗಲಿದೆ. ಚಿತ್ರದ ಟೀಸರ್, ಹಲವು ಪೋಸ್ಟರ್, ಹಾಡು ರಿಲೀಸ್ ಆಗಿದೆ. ಅದರಲ್ಲೂ ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ 'ಬೇಷರಂ ರಂಗ್' ಹಾಡಿನಲ್ಲಿ ಶಾರುಖ್ ಖಾನ್ ದೇಹ ಹುರಿಗೊಳಿಸಿದ್ದನ್ನು ಕಾಣಬಹುದು. 'ಪಠಾಣ್' ಚಿತ್ರಕ್ಕಾಗಿ ಶಾರುಖ್ ತಮ್ಮ ದೇಹವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಮತ್ತು ಫಿಟ್ ಆಗಿರಲು ಬಟ್ಟೆ ಒಗೆದು, ಪಾತ್ರೆಗಳನ್ನು ತೊಳೆದಿದ್ದಾರೆ ಎಂದು ಈಗ ವರದಿಯಾಗಿದೆ.
ವರದಿಗಳ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಕ್ಷೇತ್ರಗಳು ಬಂದ್ ಆಗಿದ್ದವು. ನಾನು ನನ್ನ ತರಬೇತುದಾರರೊಂದಿಗೆ ಜಿಮ್‌ನಲ್ಲಿ ಬೆವರಿಳಿಸಿದೆ. ಆ ಸಮಯದಲ್ಲಿ, ನಾನು ಫಿಟ್ ಆಗಿರಲು ಅಡುಗೆ ಮನೆ ಕೆಲಸವನ್ನೂ ಮಾಡಿದ್ದೇನೆ. ಮನೆಯಲ್ಲಿನ ಎಲ್ಲಾ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದೆ. ಬಟ್ಟೆಗಳನ್ನು ಸಹ ಒಗೆಯುತ್ತಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'little unwell'..ಪಠಾಣ್ ಬಾಯ್ಕಾಟ್ ಬಿಸಿ-ಅಭಿಮಾನಿಗಳ ಚಿಂತೆಗೆ ಕಾರಣವಾಯ್ತು ಶಾರುಖ್ ಹೇಳಿಕೆ
ಈ ಚಲನಚಿತ್ರಕ್ಕಾಗಿ ವಿಶ್ವದ ಎಂಟು ದೇಶಗಳಿಗೆ ಭೇಟಿ ನೀಡಿದ್ದೇನೆ ಎಂದು ನಿರ್ದೇಶಕ ಸಿದ್ಧಾರ್ಥ್ ಆನಂದ್ ಇತ್ತೀಚೆಗೆ ಹೇಳಿದ್ದರು. ಭಾರತ, ಸ್ಪೇನ್, ಯುಎಇ, ಟರ್ಕಿ, ರಷ್ಯಾ, ಸೈಬೀರಿಯಾ, ಇಟಲಿ ಮತ್ತು ಫ್ರಾನ್ಸ್ನಲ್ಲಿ ಪಠಾಣ್ ಶೂಟಿಂಗ್ ನಡೆದಿದೆ. ಆ್ಯಕ್ಷನ್-ಡ್ರಾಮಾ ಮತ್ತು ರೊಮ್ಯಾನ್ಸ್ ತುಂಬಿರುವ 'ಪಠಾಣ್' ಚಿತ್ರ ಜಗತ್ತಿನ ಎಂಟು ದೇಶಗಳನ್ನು ಸುತ್ತಿ ತೆರೆ ಮೇಲೆ ಬರುತ್ತಿದೆ. ಇದರೊಂದಿಗೆ ಚಿತ್ರದ ಸಾಹಸ ದೃಶ್ಯದ ಪೋಸ್ಟರ್ಗಳನ್ನೂ ಶೇರ್ ಮಾಡಲಾಗಿದೆ.