ETV Bharat / entertainment

ಸೂಪರ್‌ ಸ್ಟಾರ್ ಶಾರುಖ್ ಖಾನ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಕಾಶ್ಮೀರಿ ಜನತೆ - ಶಾರುಖ್​ ಖಾನ್​ ಫೋಟೋ

ನಟ ಶಾರುಖ್​ ಖಾನ್​ ಕಾಶ್ಮೀರದಿಂದ ವಾಪಸಾಗುವ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು.

Shah Rukh Khan at Srinagar airport
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಸ್​ಆರ್​ಕೆ
author img

By

Published : Apr 29, 2023, 5:17 PM IST

ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಅವರ ಚಿಕ್ಕ ನೋಟವೂ ಕೂಡ ಅಭಿಮಾನಿಗಳಿಗೆ ಹಬ್ಬ. ಅವರನ್ನು ನೋಡೋದೆ ಸಂಭ್ರಮ. ಮುಂಬೈಗೆ ಹಿಂದಿರುಗುವ ಸಲುವಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಪಠಾಣ್​ ನಟ ಕಾಣಿಸಿಕೊಂಡರು. ಅಭಿಮಾನಿಗಳು ನಟನನ್ನು ನೋಡಲು ಏರ್​ಪೋರ್ಟ್​ ಬಳಿ ಜಮಾಯಿಸಿದ ವಿಡಿಯೋಗಳು ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿವೆ.

ವೈರಲ್ ವಿಡಿಯೋದಲ್ಲಿ, ಶುಕ್ರವಾರದಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಸ್​ಆರ್​ಕೆ ಕಾಣಿಸಿಕೊಂಡರು. ನಟನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಪ್ರಯತ್ನಿಸಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣ ಅಭಿಮಾನಿಗಳ ಸಮುದ್ರದಿಂದ ತುಂಬಿತ್ತು. ಜನರು ಶಾರುಖ್ ಖಾನ್ ಸುತ್ತುವರೆದಿದ್ದರು. ಸೆಲ್ಫಿ ತೆಗಿಸಿಕೊಳ್ಳಲು ವಿನಂತಿಸುತ್ತಲೇ ಇದ್ದರು. ಅಭಿಮಾನಿಗಳು ಕೆಲ ಕಾಲ ನಟನನ್ನು ಹೋಗಲು ಬಿಟ್ಟಿಲ್ಲ. ಜನಸಾಗರದ ನಡುವೆ ಬಾಲಿವುಡ್​ ಕಿಂಗ್​ ಖಾನ್​​ ಹೆಣಗಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.

ಮತ್ತೊಂದು ವಿಡಿಯೋದಲ್ಲಿ, ಶಾರುಖ್ ಖಾನ್ ಅವರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ. ನಗುಮೊಗದಲ್ಲಿ ಸಂಭಾಷಣೆ ನಡೆಸಿದ್ದರೂ ಕೂಡ ನಟ ದಣಿದಂತೆ ಕಂಡಿದ್ದಾರೆ. ಆದರೂ ಅಭಿಮಾನಿಗಳಿಗೆ ಸ್ಪಂದಿಸಿ ತೆರಳಿದ್ದಾರೆ.

ಶಾರುಖ್​ ಖಾನ್​ ಅವರ ಏರ್​ಪೋರ್ಟ್ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಏನೇ ಬ್ಯುಸಿ ಶೆಡ್ಯೂಲ್​​ ಇರಲಿ, ಎಷ್ಟೇ ದಣಿದಿರಲಿ, ಎಂದಿನಂತೆ ಅಭಿಮಾನಿಗಳಿಗೆ ಆತ್ಮೀಯವಾಗಿ ಸ್ಪಂದಿಸಿದ್ದಾರೆಂದು ಅಭಿಮಾನಿಗಳು ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. "ಶ್ರೀನಗರ ಏರ್‌ಪೋರ್ಟ್‌ನಲ್ಲೊಂದು ಶಾರುಖ್‌ ಖಾನ್‌ಗೆ ರೆಗ್ಯುಲರ್​ ಡೇ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. "ಅವರು ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ, ಅವರು ಇತರೆ ಫೋಟೋಗಳಲ್ಲಿ ದಣಿದಿದ್ದಾರೆ, ಆದರೆ ಅವರು ತಮ್ಮ ಅಭಿಮಾನಿಗಳಿಗೆ ಸ್ಪಂದಿಸಿದ್ದಾರೆಂದು" ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: 32 ಕೋಟಿ ರೂ. ಬಾಚಿಕೊಂಡ ಐಶ್ವರ್ಯಾ ರೈ ಸಿನಿಮಾ: 'ಪೊನ್ನಿಯಿನ್ ಸೆಲ್ವನ್ 2'ಕ್ಕೆ ಭಾರಿ ಮೆಚ್ಚುಗೆ

ಎಸ್​ಆರ್​ಕೆ ಬಿಳಿ ಟಿ ಶರ್ಟ್, ಜೀನ್ಸ್ ಮತ್ತು ಬ್ಲ್ಯಾಕ್​​ ಜಾಕೆಟ್‌ ಧರಿಸಿದ್ದರು. ಅವರು ತಮ್ಮ ಮುಂಬರುವ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಶೂಟಿಂಗ್​ ಸಲುವಾಗಿ ಕೆಲ ದಿನಗಳ ಹಿಂದೆ ಕಾಶ್ಮೀರಕ್ಕೆ ಭೇಟಿ ಕೊಟ್ಟರು. ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಅವರನ್ನೊಳಗೊಂಡ ಹಾಡಿನ ಸೀಕ್ವೆನ್ಸ್ ಮುಗಿದಿದ್ದು, ಇಡೀ ಚಿತ್ರತಂಡ ಮುಂಬೈಗೆ ಮರಳಿದೆ. ಡಂಕಿಯಲ್ಲಿ ತಾಪ್ಸಿ ಪನ್ನು ಅಲ್ಲದೇ ವಿಕ್ಕಿ ಕೌಶಲ್​ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಾಲಿನ ಡಿಸೆಂಬರ್​ನಲ್ಲಿ ಚಿತ್ರ ತೆರೆಕಾಣಲು ಸಜ್ಜಾಗುತ್ತಿದೆ.

ಇದನ್ನೂ ಓದಿ: 11 ವರ್ಷಗಳ ಬಳಿಕ ಕಾಶ್ಮೀರಕ್ಕೆ ಶಾರುಖ್​​ ಭೇಟಿ: ಡಂಕಿ ಶೂಟಿಂಗ್​ ಚುರುಕು

ಈ ಭೇಟಿಗೂ ಮುನ್ನ ಎಸ್​​ಆರ್​ಕೆ​ 11 ವರ್ಷಗಳ ಹಿಂದೆ ಕಾಶ್ಮೀರಕ್ಕೆ ಬಂದಿದ್ದರು. ಯಶ್ ಚೋಪ್ರಾ ಅವರ ಕೊನೆಯ ಸಿನಿಮಾ ಜಬ್ ತಕ್ ಹೈ ಜಾನ್ ಚಿತ್ರೀಕರಣಕ್ಕಾಗಿ ಭೇಟಿ ಕೊಟ್ಟಿದ್ದರು. ಆ ಚಿತ್ರದಲ್ಲಿ ಕತ್ರಿನಾ ಕೈಫ್​, ಅನುಷ್ಕಾ ಶರ್ಮಾ ಜೊತೆ ತೆರೆ ಹಂಚಿಕೊಂಡಿದ್ದಾರೆ ಎಸ್​ಆರ್​ಕೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.