ETV Bharat / entertainment

ನಯನತಾರಾ ಮನೆಗೆ ಶಾರುಖ್​ ಖಾನ್ ಭೇಟಿ: 'ಜವಾನ್' ನಟನನ್ನು ಕಂಡು ಅಭಿಮಾನಿಗಳು ಖುಷ್ - pathaan

ಜವಾನ್ ಚಿತ್ರೀಕರಣಕ್ಕಾಗಿ ಶಾರುಖ್ ಖಾನ್ ಚೆನ್ನೈನಲ್ಲಿದ್ದು, ಸಹ ನಟಿ ನಯನತಾರಾ ಮನೆಗೆ ಭೇಟಿ ಕೊಟ್ಟಿದ್ದಾರೆ.

Shah Rukh Khan at Chennai
ನಯನತಾರಾ ಮನೆಗೆ ಶಾರುಖ್​ ಖಾನ್ ಭೇಟಿ
author img

By

Published : Feb 12, 2023, 6:18 PM IST

Updated : Feb 12, 2023, 6:36 PM IST

ವಿವಾದಗಳ ನಡುವೆ ತೆರೆಕಂಡಿದ್ದ ಪಠಾಣ್ ಸಿನಿಮಾ ಬಾಕ್ಸ್ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಮಟ್ಟದ ಕಲೆಕ್ಷನ್​ ಮಾಡಿದ್ದು, ಪಠಾಣ್​ ಕ್ರೇಜ್​ ಕಡಿಮೆಯಾಗಿಲ್ಲ. ಆ್ಯಕ್ಷನ್​ ಅವತಾರದಲ್ಲಿ ಅಬ್ಬರಿಸಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಸದ್ಯ ತಮ್ಮ ಮುಂದಿನ ಪ್ರೊಜೆಕ್ಟ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ನಟ ಶಾರುಖ್​ ಖಾನ್​, ಸದ್ಯ ಸೌತ್​ ಡೈರೆಕ್ಟರ್ ಅಟ್ಲೀ ಕುಮಾರ್ ನಿರ್ದೇಶನದ ಜವಾನ್ ಚಿತ್ರೀಕರಣಕ್ಕಾಗಿ ಚೆನ್ನೈನಲ್ಲಿದ್ದಾರೆ.

ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಅವರ ಹಲವಾರು ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗಿದೆ. ಇದರಲ್ಲಿ ನಟ, ಚೆನ್ನೈನಲ್ಲಿ ಅಭಿಮಾನಿಗಳ ಗುಂಪಿನ ನಡುವೆ ಕಾಣಿಸಿಕೊಂಡಿದ್ದಾರೆ. ತಮ್ಮ ಜವಾನ್ ಚಿತ್ರದ ಸಹನಟಿ, ಬಹುಬೇಡಿಕೆ ತಾರೆ ನಯನತಾರಾ ಅವರ ಚೆನ್ನೈನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆ ವೇಳೆ ಸಾಕಷ್ಟು ಅಭಿಮಾನಿಗಳು ಬಂದು ಸೇರಿದ್ದರು. ನಟಿ ನಯನತಾರಾ ಅವರ ಮನೆಯಿಂದ ನಿರ್ಗಮಿಸುವ ವೇಳೆ ಅಭಿಮಾನಿಗಳು ಶಾರುಖ್​ ಖಾನ್​ ಅವರನ್ನು ಸುತ್ತುವರೆದರು. ತಮ್ಮ ಮೆಚ್ಚಿನ ನಟನನ್ನು ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.

  • Exclusive Pics: It was GOOSEBUMPS for Our #Chennai team being so close to King 👑 Khan today & captured these beautiful pics in our camera 📸

    We welcome our superstar & our Idol in our Hometown Namma #CHENNAI ❤️😍🥰🥺

    We clicked @iamsrk sir leaving from #Nayanthara’s apartment pic.twitter.com/elhelSRyRE

    — ♡♔SRKCFC♔♡™ (@SRKCHENNAIFC) February 11, 2023 " class="align-text-top noRightClick twitterSection" data=" ">

ಸೂಪರ್‌ಸ್ಟಾರ್ ಶಾರುಖ್​ ಖಾನ್​ ಅವರು ಬ್ಲ್ಯಾಕ್​ ಟೀ ಶರ್ಟ್, ಜಾಕೆಟ್, ಡೆನಿಮ್‌ ಧರಿಸಿ ಸಖತ್​ ಹ್ಯಾಂಡ್​ಸಂ ಆಗಿ ಕಾಣಿಸಿಕೊಂಡಿದ್ದಾರೆ. ಕಾರು ಹತ್ತುವವರೆಗೂ ಅಭಿಮಾನಿಗಳು ಹರ್ಷೋದ್ಘಾರ ಹಾಕಿದ್ದಾರೆ. ನಟನು ಸಹ ಅಭಿಮಾನಿಗಳಲ್ಲಿ ನಯವಾಗಿ ಪ್ರತಿಕ್ರಿಯಿಸಿ ಹೊರಟರು.

ಈಗಾಗಲೇ ಜವಾನ್​ ಸಿನಿಮಾದ ಬಹುತೇಕ ಕೆಲಸಗಳು ಆಗಿವೆ. ಸದ್ಯದ ಮಾಹಿತಿ ಪ್ರಕಾರ ಇದೇ ಜೂನ್​ನಲ್ಲಿ ಸಿನಿಮಾ ಬಿಡುಗಡೆ ಆಗಲು ತಯಾರಿ ನಡೆಸುತ್ತಿದೆ. ಈ ಹಿಂದೆ ಚೆನ್ನೈನಲ್ಲಿ ಒಂದು ತಿಂಗಳ ಕಾಲ ಶೂಟಿಂಗ್​ ನಡೆಸಿದ ಅನುಭವವನ್ನು ಶಾರುಖ್​ ಹಂಚಿಕೊಂಡಿದ್ದರು. ಇದೀಗ ಪಠಾಣ್​ ಯಶಸ್ಸಿನಲ್ಲಿರುವ ಖಾನ್​ ಮತ್ತೆ ಜವಾನ್​ ಚಿತ್ರತಂಡದೊಂದಿಗೆ ಸೇರಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಂದ ಜವಾನ್​ ಸಿನಿಮಾ ಫೋಟೋಗಳು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: 16 ದಿನ, ₹888 ಕೋಟಿ- ಪಠಾಣ್​ ಕಲೆಕ್ಷನ್​ ಕಮಾಲ್​​: 1,000 ಕೋಟಿಯತ್ತ ಓಟ

ಶಾರುಖ್ ಅವರ ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಎಸ್‌ಆರ್‌ಕೆ ಮತ್ತು ನಯನತಾರಾ ಜೊತೆಗೆ ನಟ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾಹಿತಿ ಪ್ರಕಾರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ಜೂನ್ 2 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶ್ರೀನಗರದಲ್ಲಿ ದಶಕದ ನಂತರ ಥಿಯೇಟರ್‌ಗಳು ಭರ್ತಿ ಎಂದ ಮೋದಿ: ಶಾರುಖ್​ ಅಭಿಮಾನಿಗಳು ಖುಷ್‌!

ಕಳೆದ ಬಾರಿ ಚೆನ್ನೈನಲ್ಲಿ ಶೂಟಿಂಗ್​ ನಡೆಸಿದ್ದ ಎಸ್​ಆರ್​ಕೆ ತಮ್ಮ 30 ದಿನಗಳು ಹೇಗಿದ್ದವು ಎಂಬುದನ್ನು ಟ್ವೀಟ್ ಮೂಲಕ ಹಂಚಿಕೊಂಡು ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ''ಅದ್ಭುತ ದಿನಗಳು, ನಯನತಾರಾ ಅವರೊಂದಿಗೆ ಸಿನಿಮಾ ನೋಡಿದ್ದು, ನಟ ವಿಜಯ್​ ಸೇತುಪತಿ ಜೊತೆಗಿನ ಚರ್ಚೆ, ವಿಜಯ್​ ಊಟ ಕೊಟ್ಟಿದ್ದು ಎಲ್ಲವೂ ಸುಂದರ ಕ್ಷಣಗಳು'' ಎಂದು ಶಾರುಖ್​ ಖಾನ್​​ ಟ್ವೀಟ್ ಮಾಡಿದ್ದರು.

Last Updated : Feb 12, 2023, 6:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.