ETV Bharat / entertainment

'ಜವಾನ್'​ ಸೆಟ್​ನಿಂದ ಶಾರುಖ್, ದೀಪಿಕಾ ಫೋಟೋ ಸೋರಿಕೆ - ಜವಾನ್ ಲೇಟೆಸ್ಟ್ ನ್ಯೂಸ್

ಬಾಲಿವುಡ್‌ನ ಬಹುನಿರೀಕ್ಷಿತ 'ಜವಾನ್'​ ಸಿನಿಮಾದ ಫೋಟೋ ವೈರಲ್ ಆಗುತ್ತಿದೆ.

Shah Rukh Khan Deepika Padukone
ಶಾರುಖ್ ದೀಪಿಕಾ ಶೂಟಿಂಗ್
author img

By

Published : Apr 18, 2023, 5:53 PM IST

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ತೆರೆ ಮೇಲೆ ಫರ್ಪೆಕ್ಟ್​​ ಜೋಡಿ. ಬಾಲಿವುಡ್​ನ ಫೇಮಸ್​ ಕಪಲ್​​ ಜವಾನ್​ ಚಿತ್ರದಲ್ಲಿ ಮತ್ತೆ ಒಂದಾಗಿರೋದು ತಿಳಿದ ವಿಚಾರ. ಪರದೆ ಮೇಲಿನ ಈ ಜೋಡಿಯ ಕೆಮಿಸ್ಟ್ರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಇವರು ಜೋಡಿಯಾಗಿ ನಟಿಸಿದ ಮೊದಲ ಚಿತ್ರ 'ಓಂ ಶಾಂತಿ ಓಂ'ನಿಂದ ಹಿಡಿದು ಇತ್ತೀಚೆಗೆ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಪಠಾಣ್‌ವರೆಗೆ ಸಿನಿ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಇದೀಗ ಜವಾನ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು, ವಿಶೇಷ ಹಾಡೊಂದಕ್ಕೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಮುಂಬೈನಲ್ಲಿ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ. ಈ ಹಾಡನ್ನು ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ನಿರ್ದೇಶಿಸುತ್ತಿದ್ದಾರೆ. ಇದರ ನಡುವೆ ಶಾರುಖ್ ಮತ್ತು ದೀಪಿಕಾ ಅವರ ತೆರೆಮರೆಯ ಫೋಟೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಪಠಾಣ್ ಕಲಾವಿದರು ಮ್ಯಾಚಿಂಗ್​ ಡ್ರೆಸ್ ತೊಟ್ಟು, ಸೀನ್‌ಗೆ ಸಜ್ಜಾಗಿರುವುದು ಫೋಟೋಗಳಲ್ಲಿ ಕಾಣಬಹುದು.

ವೈರಲ್ ಆಗಿರುವ ಚಿತ್ರಗಳಲ್ಲಿ, ನಟ-ನಟಿ ನಗುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ವೈಟ್​ ಆ್ಯಂಡ್​ ಬ್ಲ್ಯಾಕ್​ ಡ್ರೆಸ್ ಧರಿಸಿದ್ದಾರೆ. ಫೋಟೋಗಳು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದು, ಚಿತ್ರದ ಟೀಸರ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ದಕ್ಷಿಣ ಚಿತ್ರರಂಗದ ಅಟ್ಲೀ ಕುಮಾರ್​ ನಿರ್ದೇಶನದ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್​​ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಜೂನ್‌ನಲ್ಲಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ವರದಿಗಳ ಪ್ರಕಾರ, ಜವಾನ್ ಚಿತ್ರೀಕರಣ ಶೀಘ್ರದಲ್ಲೇ ಮುಕ್ತಾಯವಾಗಲಿದೆ. 2021ರ ಸೆಪ್ಟೆಂಬರ್​ನಲ್ಲಿ ಸಿನಿಮಾ ಆರಂಭಗೊಂಡಿದ್ದು, ಶೀಘ್ರದಲ್ಲೇ ಪೋಸ್ಟ್ ಪ್ರೊಡಕ್ಷನ್ ಹಂತ ಪ್ರವೇಶಿಸಲಿದೆ. ಟೀಸರ್ ಅನ್ನು ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರ ತಯಾರಕರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದಾಗ್ಯೂ, ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಆದ್ಯತೆಯ ಪಟ್ಟಿಯಲ್ಲಿ ಈ ವಿಚಾರಕ್ಕೆ ಮೊದಲ ಪ್ರಾಶಸ್ತ್ಯ!

ಇದೆಲ್ಲದರ ನಡುವೆ ಜವಾನ್​ ಬಿಡುಗಡೆ ತಡವಾಗಬಹುದು ಎಂಬ ವದಂತಿಗಳೂ ಇವೆ. ಆದರೆ ಯಾವುದೂ ದೃಢಪಟ್ಟಿಲ್ಲ. ಸದ್ಯಕ್ಕೆ, ನಿರ್ಮಾಪಕರು ಬಿಡುಗಡೆಯ ದಿನಾಂಕಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಜವಾನ್ ನಂತರ ಎಸ್​ಆರ್​ಕೆ ಅವರು ತಾಪ್ಸಿ ಪನ್ನು ಜೊತೆಗೆ ರಾಜ್‌ಕುಮಾರ್ ಹಿರಾನಿ ಅವರ ಡುಂಕಿ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ.

ಇದನ್ನೂ ಓದಿ: ಸುಂದರ ಫೋಟೋಗಳಲ್ಲಿ ಶಾರುಖ್​ ಖಾನ್​ ಕುಟುಂಬ: 'ಪಠಾಣ್​ ಫ್ಯಾಮಿಲಿ' ಎಂದ ಫ್ಯಾನ್ಸ್

ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ರೊಮ್ಯಾಂಟಿಕ್ ಹೀರೋ ಎಂದೇ ಖ್ಯಾತರಾದವರು. ಸಖತ್​ ಆ್ಯಕ್ಷನ್​ ಅವತಾರದಲ್ಲಿ ಮೂಡಿ ಬಂದ ಮೊದಲ ಚಿತ್ರ 'ಪಠಾಣ್​'. ಎಸ್​ಆರ್​ಕೆ ಆ್ಯಕ್ಷನ್​ ಅವತಾರಕ್ಕೆ ಅಭಿಮಾನಿಗಳು ಫುಲ್​ ಮಾರ್ಕ್ಸ್ ಕೊಟ್ಟಿದ್ದರು. ಇದೀಗ ಆ್ಯಕ್ಷನ್ ಅವತಾರದಲ್ಲೇ ಮತ್ತೊಂದು ಚಿತ್ರ ಮಾಡುತ್ತಿದ್ದು, ಜವಾನ್​ ಮೇಲೆ ಸಿನಿಪ್ರಿಯರ ನಿರೀಕ್ಷೆ ಬೆಟ್ಟದಷ್ಟಿದೆ. ಪಠಾಣ್​​ನಂತೆ ಈ ಚಿತ್ರವೂ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಾ ಅಂತಾ ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.