ETV Bharat / entertainment

ಹೊಸ ಪ್ರತಿಭೆಗಳಿಗೆ 'ಸತ್ಯ ಹೆಗಡೆ ಸ್ಟುಡಿಯೋಸ್​' ವರದಾನ: ಯಾಕೆ ಗೊತ್ತಾ? - ಈಟಿವಿ ಭಾರತ ಕನ್ನಡ

'ಸತ್ಯ ಹೆಗಡೆ ಸ್ಟುಡಿಯೋಸ್​' ಹೊಸ ಪ್ರತಿಭೆಗಳಿಗೆ ವರದಾನವಾಗುತ್ತಿದೆ. ಯುವಕರು ತಮ್ಮ ನಿರ್ದೇಶಕನಾಗುವ ಕನಸನ್ನು ಈ ಸಂಸ್ಥೆಯ ಮೂಲಕ ನನಸು ಮಾಡಿಕೊಳ್ಳುತ್ತಿದ್ದಾರೆ.

film
'ಸತ್ಯ ಹೆಗಡೆ ಸ್ಟುಡಿಯೋಸ್​'
author img

By

Published : Mar 14, 2023, 11:28 AM IST

ಕನ್ನಡ ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್ಸ್‌ ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಸಾಲಿನಲ್ಲಿ ಛಾಯಾಗ್ರಾಹಕ ಸತ್ಯ ಹೆಗಡೆ ಕೂಡ ಒಬ್ಬರು. ಕಳೆದ ಎರಡು ದಶಕಗಳಿಂದ ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಸತ್ಯ ಹೆಗಡೆ 'ಸತ್ಯ ಹೆಗಡೆ ಸ್ಟುಡಿಯೋ' ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಮೂಲಕ ಶಾರ್ಟ್ ಫಿಲ್ಮ್​ಗಳನ್ನು ನಿರ್ಮಾಣ ಮಾಡುವ ಜೊತೆಗೆ ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್​ನಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಹೀಗೆ ಯುವಕರು ತಮ್ಮ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಈ ಯೂಟ್ಯೂಬ್ ಚಾನೆಲ್ ಮೂಲಕ 11 ಕಿರು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ 'ಗ್ರಾಚಾರ' ಎಂಬ ಕಿರುಚಿತ್ರ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ 'ಕಥೆಗಾರನ ಕತೆ' ಹಾಗೂ 'ಅಹಂ ಪರಂ' ಕಿರು ಚಿತ್ರಗಳು ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಲಿವೆ.

film
ಹೊಸ ಪ್ರತಿಭೆಗಳಿಗೆ 'ಸತ್ಯ ಹೆಗಡೆ ಸ್ಟುಡಿಯೋಸ್​' ವರದಾನ

ಹೀಗಾಗಿ ಇತ್ತೀಚೆಗಷ್ಟೇ ಸತ್ಯ ಹೆಗಡೆ ಹಾಗೂ ಅವರ ತಂಡ ಈ ಮೂರು ಕಿರು ಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಒಂಬತ್ತು ನಿಮಿಷಗಳ 'ಕತೆಗಾರನ ಕಥೆ' ಕಿರು ಚಿತ್ರವನ್ನು ಯುವ ಬರಹಗಾರ ಹಾಗೂ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದ ಕೌಶಿಕ 'ಹೃದಯದ ಮಾತು' ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದು, ಕೆಲವೊಂದು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡಿರುವ ಕೌಶಿಕ ಅವರಿಗೆ ಇದು ಮೊದಲ ಪ್ರಯತ್ನ.

ಈಗಷ್ಟೇ ಬಿಡುಗಡೆ ಆಗಿರುವ 'ಗ್ರಾಚಾರ' ಕಿರು ಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದು, ಇವರು ಮೂಲತಃ ಸಾಗರದವರು. ಇವರು ಕೂಡ ಸಾಫ್ಟ್​ವೇರ್​ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಇನ್ನು ವಿಭಿನ್ನ ಪ್ರಯತ್ನದಂತೆ 'ಅಹಂ ಪರಂ' ಕಿರುಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಇದನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರಗಳನ್ನು ನಿರ್ದೇಶಕರಾದ ಗಿರಿರಾಜ್, ಚೇತನ ಕುಮಾರ್ ಹಾಗು ಗುಲ್ಟು ಸಿನಿಮಾ ಖ್ಯಾತಿಯ ನಟ ನವೀನ್ ನೋಡಿ ಮೆಚ್ಚಿಕೊಂಡಿದ್ದಾರೆ.

ನಿರ್ದೇಶಕ ಗಿರಿರಾಜ್ ಮಾತನಾಡಿ, "ಇಂದಿನ ಯುವಕರಿಗೆ ಕಿರುಚಿತ್ರಗಳು ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈಗಿನ ಯುವಕರಿಗೆ ಒಳ್ಳೆಯ ಅವಕಾಶವನ್ನು ಸತ್ಯ ಹೆಗಡೆ ಮಾಡಿಕೊಡುತ್ತಿದ್ದಾರೆ. ಮೂರು ಚಿತ್ರಗಳು ಚೆನ್ನಾಗಿ ಬಂದಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಯುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ" ಎಂದು ಶುಭ ಹಾರೈಸಿದರು.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳಿಗೆ ಮರಳು ಕಲಾಕೃತಿಯಿಂದ ಅಭಿನಂದನೆ ಕೋರಿದ ಪಟ್ನಾಯಕ್​

"ನಾನು ಕೂಡ ಕಿರುಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದವನು. ನಾವು ಶಾರ್ಟ್ ಫಿಲಂಗಳನ್ನು ಮಾಡುವಾಗ ಸತ್ಯ ಹೆಗಡೆಯಂತವರು ನಮಗೆ ಯಾರು ಸಾಥ್ ನೀಡಿರಲಿಲ್ಲ. ಈಗಿನವರೆಗೆ ಒಳ್ಳೆಯ ಅವಕಾಶ ಸಿಗುತ್ತದೆ. ಇಂತಹ ಅವಕಾಶಗಳು ಇನ್ನಷ್ಟು ಯುವ ಜನರಿಗೆ ಸಿಕ್ಕಿ ಒಳ್ಳೆಯ ಚಿತ್ರಗಳನ್ನು ತರುವಂತಾಗಬೇಕು. ಈ ಶಾರ್ಟ್ ಫಿಲಂ ವೇದಿಕೆ ಯುವ ಪ್ರತಿಭೆಗಳಿಗೆ ತುಂಬಾ ಅನುಕೂಲವಾಗುತ್ತದೆ" ಎಂದು ನಟ ನವೀನ್​ ಹೇಳಿದರು.

ಬಳಿಕ ಸತ್ಯ ಹೆಗಡೆ ಮಾತನಾಡಿ, "ನಾನು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಕನ್ನಡದ ಬಹುತೇಕ ಸ್ಟಾರ್​ಗಳ ಸಿನಿಮಾಗಳಲ್ಲಿ ಛಾಯಗ್ರಾಹಕನಾಗಿ ಕೆಲಸ ಮಾಡಿದ್ದೇನೆ. ನನಗೆ ಆಗ ಸಿನಿಮಾ ಇಂಡಸ್ಟ್ರಿಗೆ ಏನಾದರೂ ಮಾಡಬೇಕು ಅಂದಾಗ ಹೊಸ ಪ್ರತಿಭೆಗಳಿಗೆ ನಮ್ಮ ಸತ್ಯ ಸ್ಟುಡಿಯೋಸ್‌ನಲ್ಲಿ ಅವಕಾಶ ಕೊಡಬೇಕು‌ ಅಂದುಕೊಂಡೆ. ಅದರಂತೆ ನಮ್ಮ ಸಂಸ್ಥೆಯಿಂದ ಹೊಸ ಪ್ರತಿಭೆಗಳು ತಮ್ಮ ಸಿನಿಮಾ ಮೇಕಿಂಗ್ ಸ್ಟೈಲ್ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಅದು‌ ನನಗೆ ಖುಷಿ ಕೊಡುತ್ತಿದೆ" ಎಂದರು.

ಇದನ್ನೂ ಓದಿ: 'ದ ಎಲಿಫೆಂಟ್​ ವಿಸ್ಪರರ್ಸ್': ಮರಿ ಆನೆ ನೋಡಲು ಮುದುಮಲೈ ಶಿಬಿರಕ್ಕೆ ಪ್ರವಾಸಿಗರ ದಂಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.