ETV Bharat / entertainment

ಕಾನ್​ ಚಿತ್ರೋತ್ಸವ 2023 : ರೆಡ್​ ಕಾರ್ಪೆಟ್​ ಮೇಲೆ ಮಿಂಚಿದ ಸಾರಾ ಅಲಿ ಖಾನ್..ಫ್ಯಾನ್ಸ್​ಗಳಿಂದ ಮೆಚ್ಚುಗೆ - ಶ್ರೀಮಂತ ಕಸೂತಿ ಹೊಂದಿರುವ ಲೆಹೆಂಗಾ

ನಟಿ ಸಾರಾ ಅಲಿ ಖಾನ್ ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾನ್​ ಚಿತ್ರೋತ್ಸವದಲ್ಲಿನ ಕೆಲವೊಂದು ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮ್ಮ ದೇಹವನ್ನು ಅಪ್ಪಿಕೊಳ್ಳುವ ಉಡುಗೆಯನ್ನು ಧರಿಸಿರುವ ಅವರು ಸಂಪೂರ್ಣ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದಾರೆ.

ಸಾರಾ ಅಲಿ ಖಾನ್
ಸಾರಾ ಅಲಿ ಖಾನ್
author img

By

Published : May 19, 2023, 4:27 PM IST

ಬಾಲಿವುಡ್​ ನಟಿ ಸಾರಾ ಅಲಿ ಖಾನ್ ಅವರು ಇದೇ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಅಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಸಾರಾ ಅಲಿ ಖಾನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಮಿನುಗುವ ಗೌನ್ ಧರಿಸಿದ್ದ ನಟಿ: ನಟಿ ಸಾರಾ ಅಲಿ ಖಾನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಜನಪ್ರಿಯತೆ ಸಿಕ್ಕಿಲ್ಲ. ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಇವರಿಗೆ ಸುಲಭದಲ್ಲಿ ಅವಕಾಶ ಸಿಕ್ಕಿದೆ. ಕಾನ್ ಚಿತ್ರೋತ್ಸವ ಪ್ರತಿವರ್ಷ ಫ್ರಾನ್ಸ್​ನಲ್ಲಿ ನಡೆಯುತ್ತದೆ. ಇಲ್ಲಿಗೆ ದೇಶ - ವಿದೇಶದಿಂದ ಸೆಲೆಬ್ರಿಟಿಗಳು ಬಂದು ರೆಡ್​ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಾರೆ. ನಟಿ ಸಾರಾ ಅಲಿ ಖಾನ್ ಅವರು ಈ ವೇಳೆ ಸಖತ್ ಬೋಲ್ಡ್ ಲುಕ್ ಆಗಿ ಪೋಟೋಗೆ ಪೋಸ್ ನೀಡಿದ್ದಾರೆ. ಇದನ್ನು ನೋಡಿ ಅನೇಕ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾರ್ಯಕ್ರಮದಲ್ಲಿ ನಟಿ ಮಿನುಗುವ ಗೌನ್ ಧರಿಸಿದ್ದರು. ಮೇಳದಲ್ಲಿ ತಾನು ತುಂಬಾ ಗ್ಲಾಮ್ ಆಗಿದ್ದೇನೆ ಎಂದು ತಾರೆ ಹೇಳಿಕೊಂಡಿದ್ದಾರೆ.

ಫ್ಯಾನ್ಸ್​ ಮನಸೆಳೆದ ನಟಿಯ ಮೋಹಕ ನೋಟ: ಕಾನ್​ ಚಿತ್ರೋತ್ಸವ 2023ರಲ್ಲಿ ನಡೆದ ಡೇ 1 ಮತ್ತು ಡೇ 2ನ ಆಕೆಯ ಆಕರ್ಷಕ ನೋಟವು ಅಭಿಮಾನಿಗಳ ಮನಸ್ಸನ್ನು ಆಕರ್ಷಿಸಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಕಾರ್ಯಕ್ರಮದ ಕೆಲ ಸಮಯದ ನಂತರ ಸಾರಾ ತನ್ನ ಇನ್ಸ್ಟಾಗ್ರಾಂನಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಪಾರ್ಟಿಯಲ್ಲಿನ ಕೆಲವು ಮಿನುಗುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿಯ ಮಿನುಗು ದೇಹವನ್ನು ಅಪ್ಪಿಕೊಳ್ಳುವ ರೀತಿಯಲ್ಲಿನ ಉಡುಪನ್ನು ಧರಿಸಿದ್ದಾರೆ.

ರೆಡ್ ಕಾರ್ಪೆಟ್ ಮೇಲೆ ನಟಿ ಸಾರಾ ಅಲಿ ಖಾನ್ ಅವರು ದೇಸಿ ಉಡುಗೆಯಲ್ಲಿ ಮಿಂಚಿದ್ದಾರೆ. ಸಾಂಪ್ರದಾಯಿಕ ಸೀರೆಯನ್ನು ಉಟ್ಟು ನೋಡುಗರ ಮನಸೂರೆಗೊಳಿಸಿದ್ದಾರೆ. ಹಾಲ್ಟರ್ ಟಾಪ್ ಮತ್ತು ದಂತ ಬಣ್ಣದ ಸೀರೆ ಜೊತೆ ಮುತ್ತಿನ ಹಾರಗಳನ್ನು ಧರಿಸಿ ಸಾರಾ ತಮ್ಮ ನೋಟವನ್ನು ಭಿನ್ನವಾಗಿಸಿದ್ದಾರೆ. ಇವರ ಆಕರ್ಷಕ ಲುಕ್​​ಗೆ ಅಭಿಮಾನಿಗಳು ಮೆಚ್ಚಿ ಕಾಮೆಂಟ್‌ ಮಾಡುತ್ತಿದ್ದಾರೆ. ಕೆಲವರು ಸಾರಾರನ್ನು ಅವರ ಅಜ್ಜಿ ಶರ್ಮಿಳಾ ಟ್ಯಾಗೋರ್ ಅವರಿಗೆ ಹೋಲಿಸಿದ್ದಾರೆ. ಸಾರಾ ಅಲಿ ಖಾನ್ ಅವರ ಕೇನ್ಸ್‌ ಡೆಬ್ಯು ಔಟ್‌ಫಿಟ್‌ಗೆ ಅಬು ಜಾನಿ ಖೋಸ್ಲಾ ಕುಮಾರ್ ಅವರ ಲೆಹೆಂಗಾ ಆರಿಸಿಕೊಂಡಿದ್ದರು. ಶ್ರೀಮಂತ ಕಸೂತಿ ಹೊಂದಿರುವ ಲೆಹೆಂಗಾ ಆದಾಗಿತ್ತು.

ತುಂಬಾ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದೇನೆ: ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಸಾರಾ ಅವರು ತಮ್ಮ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ, "ಸ್ಪ್ಯಾಮ್‌ಗಾಗಿ ಕ್ಷಮಿಸಿ. ತುಂಬಾ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದೇನೆ. ಈ ಸ್ಪಷ್ಟವಾದ ನೀರನ್ನು ನೋಡಿ- ಸಾರಾ ಸುಮಾರು ಈಜಿದರು. ಆದರೆ ನಂತರ ಅದರ ವಿರುದ್ಧ ನಿರ್ಧರಿಸಿದರು- ನನ್ನ ಅಭಿಮಾನಿಗಳಿಗೆ ಮಾತ್ರ " ಎಂದಿದ್ದಾರೆ.

ನಟಿ ತನ್ನ ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಅವರ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಕೆಂಪು ಹೃದಯದ ಎಮೋಜಿಗಳನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, "ನಿಮ್ಮ ಎಲ್ಲಾ ಬಟ್ಟೆಗಳನ್ನು ಇಷ್ಟಪಟ್ಟೆ! ತುಂಬಾ ಸೊಗಸಾದ ಮತ್ತು ಸುಂದರ! ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, "ಗ್ಲಾಮ್ ಗ್ಲಾಮ್ ಗ್ಲಾಮ್!" ಇತರರು ನಟಿಯ ಕವನ ಕೌಶಲ್ಯಕ್ಕಾಗಿ ಅವಳನ್ನು ಹೊಗಳಿದ್ದಾರೆ ಮತ್ತು "ಶೀರ್ಷಿಕೆ ಕಾವ್ಯಾತ್ಮಕವಾಗಿದೆ, ಓಹ್ ಡ್ಯಾಮ್" ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರಾಜೇಶ್ ಕಾಮೆಂಟ್‌ಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದು ಹೀಗೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.