ಬಾಲಿವುಡ್‌ನ ಬೆಡಗಿ ಸಾರಾ ಅಲಿ ಖಾನ್ ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಶೈನ್ ಆಗುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಕಳೆದ ವರ್ಷ ಬಿಡುಗಡೆಯಾದ 'ಅತ್ರಂಗಿ ರೇ' ಚಿತ್ರದಲ್ಲಿ ಸಾರಾ ಕೊನೆಯದಾಗಿ ಕಾಣಿಸಿಕೊಂಡರು, ಅಂದಿನಿಂದ ಸಾರಾ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮೂಲಕ ಸುದ್ದಿಯಲ್ಲಿರುತ್ತಾರೆ.
- " class="align-text-top noRightClick twitterSection" data="
">
ಇದೀಗ ಸಾರಾ ಅಲಿ ಖಾನ್ ಬಿಕಿನಿ ಧರಿಸಿ ಬೀಚ್ ಬಳಿ ಸೈಕಲ್ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಈ ಸುಂದರ ಚಿತ್ರವನ್ನು ಸ್ವತಃ ನಟಿಯೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಾರಾ ಅಲಿಖಾನ್, 'ಬೀಚ್ ಆಗಿರಿ, ಅಡೆ ತಡೆಗಳಿಂದ ಹೊರಗೆ ಬನ್ನಿ, ಬೀಚ್‌ಗೆ ಹೋಗಲು ಸಮಯ ತೆಗೆದುಕೊಳ್ಳಿ, ಒತ್ತಡವನ್ನು ತಪ್ಪಿಸಿ, ಸಮುದ್ರ ಸೌಂದರ್ಯ ಆನಂದಿಸಿ, ಸದಾ ಕೆಲಸದಲ್ಲಿ ಮುಳುಗಬೇಡಿ, ಇಲ್ಲವಾದರೆ ನೀವು ಜೀವನದ ಸುಂದರ ಅಲೆಗಳನ್ನು ಕಳೆದುಕೊಳ್ಳುತ್ತೀರಿ' ಎಂದು ಬರೆದಿದ್ದಾರೆ. ಈ ಚಿತ್ರ ಮಾಲ್ಡೀವ್ಸ್ ಬೀಚ್ನದ್ದಾಗಿದೆ. ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆ ನಟಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಇದನ್ನೂ ಓದಿ: ಅನುಮತಿ ಇಲ್ಲದೆ ಅಮಿತಾಬ್ ಬಚ್ಚನ್ ಚಿತ್ರ, ಧ್ವನಿ ಬಳಸುವಂತಿಲ್ಲ: ದೆಹಲಿ ಹೈಕೋರ್ಟ್