ETV Bharat / entertainment

'ಗದರ್-2' ಪಾರ್ಟಿಯಲ್ಲಿ ಅಪ್ಪಿಕೊಂಡ 'ಮಾಜಿ ಲವ್​ಬರ್ಡ್ಸ್': ಕಾರ್ತಿಕ್​-ಸಾರಾ ವಿಡಿಯೋ ವೈರಲ್

author img

By ETV Bharat Karnataka Team

Published : Sep 3, 2023, 1:25 PM IST

Sara Ali Khan and Kartik Aaryan: ಗದರ್-2 ಸಿನಿಮಾದ ಸಕ್ಸಸ್​ ಸಲೆಬ್ರೇಶನ್ ಈವೆಂಟ್​ನಲ್ಲಿ ಸಾರಾ ಅಲಿ ಖಾನ್​​ ಮತ್ತು ಕಾರ್ತಿಕ್​ ಆರ್ಯನ್​​ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು.

gadar 2 party
ಗದರ್​ 2 ಪಾರ್ಟಿ

ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ 'ಗದರ್​-2' ಸಿನಿಮಾದ ಸಕ್ಸಸ್​ ಸಲೆಬ್ರೇಶನ್ ಈವೆಂಟ್​ ಶನಿವಾರ ಸಂಜೆ ಮುಂಬೈನಲ್ಲಿ ನಡೆಯಿತು. ಭರ್ಜರಿ ಈವೆಂಟ್​ಗೆ ಸಿನಿ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು.​​​ ಸೂಪರ್​ ಸ್ಟಾರ್​ಗಳಾದ ಶಾರುಖ್​ ಖಾನ್​​, ಅಮೀರ್​ ಖಾನ್​, ಸಲ್ಮಾನ್​ ಖಾನ್​​, ಅನುಪಮ್​​ ಖೇರ್ ಅವರಿಂದ ಹಿಡಿದು ಯುವ ಕಲಾವಿದರು ಭಾಗಿಯಾಗಿದ್ದರು. ಸೆಲೆಬ್ರೇಶನ್​ನ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಮಾಜಿ ರೂಮರ್ ಲವ್​ಬರ್ಡ್ಸ್ ಸಾರಾ ಅಲಿ ಖಾನ್​​ ಮತ್ತು ಕಾರ್ತಿಕ್​ ಆರ್ಯನ್​​ ಉತ್ತಮ ಕ್ಷಣ ಕಳೆದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

ಸಾರಾ ಅಲಿ ಖಾನ್​​ ಮತ್ತು ಕಾರ್ತಿಕ್​ ಆರ್ಯನ್​​ ಜೋಡಿ ಇಮ್ತಿಯಾಜ್​ ಅಲಿ ನಿರ್ದೇಶನದ 'ಲವ್​ ಆಜ್​​ ಕಲ್​' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಇವರಿಬ್ಬರು ಡೇಟಿಂಗ್​ನಲ್ಲಿದ್ದಾರೆಂಬ ಊಹಾಪೋಹ ಎದ್ದಿತ್ತು. ಆದ್ರೆ ಸಿನಿಮಾ ತೆರೆಕಾಣುವ ಮೊದಲೇ ಬೇರ್ಪಟ್ಟರು ಎಂದು ಕೂಡ ಹೇಳಲಾಗಿದೆ. ಆದ್ರೆ ಈ ಜೋಡಿ ತಾವು ಪ್ರೀತಿಯಲ್ಲಿರುವುದಾಗಿ ಎಲ್ಲಿಯೂ ಅಧಿಕೃತ ಹೇಳಿಕೆ ಕೊಟ್ಟಿಲ್ಲ, ಕೇವಲ ವದಂತಿಗಳಷ್ಟೇ.

ಆದ್ರೆ ಇಬ್ಬರೂ ಸಾರ್ವಜನಿಕವಾಗಿ ಭೇಟಿ ಆದಾಗಲೆಲ್ಲಾ ಸೌಹಾರ್ದಯುತ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಶನಿವಾರ ಸಂಜೆ ನಡೆದ ಗದರ್ 2 ಈವೆಂಟ್​ನಲ್ಲಿ ಈ ಇಬ್ಬರೂ ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ, ಈ ಹಿಂದಿನ ಯಾವುದೇ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಒಂದು ಉತ್ತಮ ಅಪ್ಪುಗೆ ಹಂಚಿಕೊಳ್ಳುವ ಮೂಲಕ ಪ್ರಬುದ್ಧತೆ ಪ್ರದರ್ಶಿಸಿದರು.

ಗದರ್ 2 ಪಾರ್ಟಿ ಮುಗಿಸಿ ನಿರ್ಗಮಿಸುವ ವೇಳೆ ಸಾರಾ, ಕಾರ್ತಿಕ್​ ಜೊತೆ ಕೃತಿ ಸನೋನ್​ ಕೂಡ ಕಾಣಿಸಿಕೊಂಡರು. ಈ ಮೂವರು ಕಾರ್ಯಕ್ರಮದಿಂದ ಒಟ್ಟಿಗೆ ನಿರ್ಗಮಿಸಿದ್ದಾರೆ. ಕಾರ್ತಿಕ್​ - ಕೃತಿ ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಹೇಳಲಾಗುತ್ತದೆ. ನಟಿ ಸಾರಾ ಅಲಿ ಖಾನ್​ ಪಿಂಕ್​ ಜಂಪ್​ಸೂಟ್​ ಧರಿಸಿ ಬಾರ್ಬಿ ವೈಬ್​ ಬೀರಿದ್ರೆ, ನಟಿ ಕೃತಿ ಸನೋನ್​​ ಬ್ಲ್ಯಾಕ್​ ಬಾಡಿಕಾನ್​ ಡ್ರೆಸ್​ನಲ್ಲಿ ಕಂಗೊಳಿಸಿದ್ರು. ನಟ ಕಾರ್ತಿಕ್​ ಆರ್ಯನ್​ ಬ್ರೌನ್​ ಆ್ಯಂಡ್​ ಬ್ಲ್ಯಾಕ್​ ಶರ್ಟ್​ ಪ್ಯಾಂಟ್​ ಧರಿಸಿ ಬಂದಿದ್ದರು.

ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ 'ಸಲಾರ್'​ ರಿಲೀಸ್​ ಮುಂದೂಡಿಕೆ...ತರಣ್​ ಆದರ್ಶ್​ ಟ್ವೀಟ್​ನಲ್ಲೇನಿದೆ?

ಗದರ್​ 2 ಸೆಲೆಬ್ರೇಶನ್​​ ಪಾರ್ಟಿಯಿಂದ ಸಾರಾ ಅಲಿ ಖಾನ್​​ ಮತ್ತು ಕಾರ್ತಿಕ್​ ಆರ್ಯನ್​​ ಅವರ ವಿಡಿಯೋವನ್ನು ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಈ ಜೋಡಿಯ ಒಂದು ಮತ್ತೊಂದು ಸಿನಿಮಾ ಬರಲಿ ಎಂದು ಕೂಡ ತಮ್ಮ ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: HBD Pawan Kalyan: ಬಹುನಿರೀಕ್ಷಿತ 'ಓಜಿ ಟೀಸರ್'​ ಅನಾವರಣ - ಪ್ರೇಕ್ಷಕರಿಗೆ ದರ್ಶನ ಕೊಟ್ಟ 'ಹಸಿದ ಚಿರತೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.