ETV Bharat / entertainment

SSESideA: 'ಮನು-ಪ್ರಿಯಾಳ ಪ್ರಣಯ ಪ್ರಪಂಚ'; 'ಸಪ್ತ ಸಾಗರದಾಚೆ ಎಲ್ಲೋ' ಟ್ರೇಲರ್​ ರಿಲೀಸ್​ - ಹೇಮಂತ್ ಎಂ ರಾವ್ ನಿರ್ದೇಶನ

SSESideA Trailer: ರಕ್ಷಿತ್​ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

Sapta Sagaradaache Ello trailer OUT NOW
ಸಪ್ತ ಸಾಗರದಾಚೆ ಎಲ್ಲೋ
author img

By

Published : Aug 17, 2023, 7:47 PM IST

ಚಂದನವನಕ್ಕೆ ಸಿಂಪಲ್ಲಾಗಿ ಎಂಟ್ರಿ ಕೊಟ್ಟು ಸಿಂಪಲ್​ ಸ್ಟಾರ್​ ಆಗಿ ಗುರುತಿಸಿಕೊಂಡ ನಟ ರಕ್ಷಿತ್​ ಶೆಟ್ಟಿ. ಪ್ರತಿ ಬಾರಿಯೂ ವಿಭಿನ್ನ ಕಥೆಗಳನ್ನು ಆಯ್ದುಕೊಂಡು ಸಿನಿಮಾ ಮಾಡಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿಂಪಲ್​ ಆಗಿರುವ ಸ್ಟೋರಿಯನ್ನು ಪ್ರೇಕ್ಷಕರ ಮನಮುಟ್ಟುವಂತೆ ತೋರಿಸುವ ರಕ್ಷಿತ್​ ಸ್ಟೈಲ್​ಗೆ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ 'ಚಾರ್ಲಿ 777'. ಇದೀಗ ಶೆಟ್ರು ನಾಯಕರಾಗಿ ನಟಿಸಿ, ನಿರ್ಮಾಣ ಮಾಡಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ​

  • " class="align-text-top noRightClick twitterSection" data="">

ಟ್ರೇಲರ್​ ಹೇಗಿದೆ?: ಮನು ಮತ್ತು ಪ್ರಿಯಾಳ ಪ್ರಣಯ ಪ್ರಪಂಚದ ಸುಂದರ ಕ್ಷಣಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಕಡಲ ತೀರ, ಬ್ಯೂಟಿಫುಲ್​ ಲವ್​ ಸ್ಟೋರಿ, ನೋವು, ಹತಾಶೆ, ಜೈಲುವಾಸ ಒಂದು ರೀತಿಯಲ್ಲಿ ಇಡೀ ಕಥೆಯನ್ನು ಚಿಕ್ಕದಾಗಿ ಬಹಳ ಕುತೂಹಲ ಮೂಡಿಸುವಂತೆ ಚಿತ್ರಿಸಲಾಗಿದೆ. ಈಗಾಗಲೇ ಪೋಸ್ಟರ್​ನಿಂದ ನಿರೀಕ್ಷೆ ಹೆಚ್ಚಿಸಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಇದೀಗ ಟ್ರೇಲರ್​ ಮೂಲಕ ಆ ನಿರೀಕ್ಷೆಯನ್ನು ಮುಗಿಲೆತ್ತರಕ್ಕೇರಿಸಿದೆ.

ಸೀಕ್ವೆಲ್​ ಜೊತೆ ಚಿತ್ರ ಬಿಡುಗಡೆ: ಈ ಚಿತ್ರದ ಮತ್ತೊಂದು ವಿಶೇಷತೆಯೇ ಅಭಿಮಾನಿಗಳ ನಿರೀಕ್ಷೆಯನ್ನು ಹೈ ಲೆವೆಲ್​ನಲ್ಲಿರಿಸಿದೆ. ಏಕೆಂದರೆ ಇದುವರೆಗೆ ಯಾರೂ ಮಾಡದೇ ಇರುವಂತಹ ಹೊಸ ಪ್ರಯೋಗವನ್ನು ಚಿತ್ರತಂಡ ಮಾಡೋಕೆ ಹೊರಟಿದೆ. ಸಿನಿಮಾದ ಸೈಡ್​ A ಸೆಪ್ಟೆಂಬರ್​ 1ರಂದು ತೆರೆಗೆ ಬಂದರೆ, ಸೈಡ್​ B ಒಂದು ತಿಂಗಳ ಅಂತರದಲ್ಲಿ ಅಂದರೆ ಅಕ್ಟೋಬರ್​ 20ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅತ್ಯಂತ ಸಣ್ಣ ಅಂತರದಲ್ಲಿ ಸೀಕ್ವೆಲ್​ ರಿಲೀಸ್​ ಮಾಡುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: 40ರ ಸಂಭ್ರಮದಲ್ಲಿ ಸಿಂಪಲ್​ ಸ್ಟಾರ್​: 2 ಪಾರ್ಟ್​ಗಳಾಗಿ ಪ್ರೇಕ್ಷಕರ ಮುಂದೆ SSE

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಈ ಚಿತ್ರ ಬಹುತೇಕ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ಎಂ. ರಾವ್ ನಿರ್ದೇಶನ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿ ವಲಯ ಕಾತರದಿಂದ ಕಾಯುತ್ತಿದೆ. ರುಕ್ಮಿಣಿ ವಸಂತ್ ಮೊದಲ ಭಾಗದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಪಾರ್ಟ್​ 2ನಲ್ಲಿ ರುಕ್ಮಿಣಿ ಜೊತೆಗೆ ಚೈತ್ರ ಜೆ.ಆಚಾರ್ ಕೂಡ ನಾಯಕಿಯಾಗಿದ್ದಾರೆ. ಇವರಲ್ಲದೇ ಚಿತ್ರದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ ಕುಮಾರ್​​, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಇದ್ದಾರೆ. ರಕ್ಷಿತ್​ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್​ ಬಂಡವಾಳ ಹೂಡಿದ್ದು, ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ. ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ‌' ಟೈಟಲ್ ಟ್ರ್ಯಾಕ್ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.