ETV Bharat / entertainment

'ಸಂಜು ವೆಡ್ಸ್ ಗೀತಾ 2' ಆಕರ್ಷಕ ಮೇಕಿಂಗ್​ ವಿಡಿಯೋ ನೋಡಿ - Rachita Ram

Sanju Weds Geetha 2: ಬಹುನಿರೀಕ್ಷಿತ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಸಾಂಗ್ಸ್​ನ ಆಕರ್ಷಕ ಮೇಕಿಂಗ್​ ವಿಡಿಯೋ ಇಲ್ಲಿದೆ.

Sanju Weds Geetha 2
ಸಂಜು ವೆಡ್ಸ್ ಗೀತಾ 2
author img

By ETV Bharat Karnataka Team

Published : Dec 30, 2023, 7:37 PM IST

'ಸಂಜು ವೆಡ್ಸ್ ಗೀತಾ 2' ಆಕರ್ಷಕ ಮೇಕಿಂಗ್​ ವಿಡಿಯೋ

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್​​​​ಗಳು ನಿರ್ಮಾಣಗೊಳ್ಳುತ್ತಿವೆ. 'ಸಂಜು ವೆಡ್ಸ್ ಗೀತಾ 2' ಕೂಡ ಹಿಟ್​​ ಸಿನಿಮಾದ ಸೀಕ್ವೆಲ್​​. ನಾಲ್ಕು ತಿಂಗಳ‌ ಹಿಂದೆ ಬಹುನಿರೀಕ್ಷಿತ ಚಿತ್ರ ಸೆಟ್ಟೇರಿತ್ತು. ಸದ್ಯ ಚಿತ್ರೀಕರಣ ಪ್ರಮುಖ ಘಟ್ಟಕ್ಕೆ ಬಂದಿದೆ. ಇದೇ ತಿಂಗಳು ಚಿತ್ರತಂಡ ಸ್ವಿಟ್ಜರ್​ಲ್ಯಾಂಡ್​ಗೆ ಹೋಗಿ 2 ಹಾಡುಗಳನ್ನು ಚಿತ್ರೀಕರಿಸಿಕೊಂಡು ಬಂದಿದೆ. ಈವರೆಗೆ ನಡೆಸಿದ ಚಿತ್ರೀಕರಣದ ಅನುಭವಗಳನ್ನು ನಿರ್ದೇಶಕ‌ ನಾಗಶೇಖರ್, ನಟ ಶ್ರೀನಗರ ಕಿಟ್ಟಿ, ನಟಿ ರಚಿತಾ ರಾಮ್ ಹಂಚಿಕೊಂಡಿದ್ದಾರೆ.

Sanju Weds Geetha 2
ರಚಿತಾ ರಾಮ್ - ಶ್ರೀನಗರ ಕಿಟ್ಟಿ

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ 'ಸಂಜು ವೆಡ್ಸ್ ಗೀತಾ 2' ಚಿತ್ರದ ಕಾರ್ಯಕ್ರಮದಲ್ಲಿ, ಚಿತ್ರತಂಡ ಭಾಗವಹಿಸಿತ್ತು. ಸ್ವಿಟ್ಜರ್​ಲ್ಯಾಂಡ್ ಶೂಟಿಂಗ್ ದೃಶ್ಯಗಳ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ನಾಗಶೇಖರ್, ಹಿಂದಿನ‌‌ ಸಿನಿಮಾಗಿಂತ ಈ ಚಿತ್ರ ಚೆನ್ನಾಗಿ, ವೈಭವಯುತವಾಗಿ ಮೂಡಿ ಬರುತ್ತಿದೆ. ಇತ್ತೀಚೆಗಷ್ಟೇ ಸ್ವಿಟ್ಜರ್​ಲ್ಯಾಂಡ್​ನಲ್ಲಿ ಹಾಡುಗಳ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ಮುಂಬೈ, ಹೈದರಾಬಾದ್​ನಲ್ಲಿ ಶೂಟಿಂಗ್ ಮಾಡಲಿದ್ದೇವೆ ಎಂದು ತಿಳಿಸಿದರು.

Sanju Weds Geetha 2
ಸಂಜು ವೆಡ್ಸ್ ಗೀತಾ 2 ತಂಡ

'ಸಂಜು ವೆಡ್ಸ್ ಗೀತಾ' ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದಲೇ ಎರಡನೇ ಭಾಗ ಇಷ್ಟು ಅದ್ಧೂರಿಯಾಗಿ ಮೂಡಿ ಬರುತ್ತಿದೆ. ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ. ನನ್ನ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್​​ಮೇಟ್ ಕುಮಾರ್ ಕೈಜೋಡಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅದ್ಭುತವಾದ ಟ್ಯೂನ್​ಗಳನ್ನು ಮಾಡಿ ಕೊಟ್ಟಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಇಬ್ಬರೂ ಅದ್ಭುತ ಅಭಿನಯ ಮಾಡಿದ್ದಾರೆ. 2024ರ ಬ್ಲಾಕ್ ಬಸ್ಟರ್ ಚಿತ್ರವಾಗಿ 'ಸಂಜು ವೆಡ್ಸ್ ಗೀತಾ 2' ಹೊರಹೊಮ್ಮಲಿದೆ. ಇಂಥ ಒಳ್ಳೆ ನಿರ್ಮಾಪಕರು ನಮ್ಮ ಚಿತ್ರಕ್ಕೆ ಸಿಕ್ಕಿದ್ದಾರೆ. ಯಾವುದಕ್ಕೂ ಹಿಂದೇಟು ಹಾಕಲ್ಲ ಎಂದು ತಿಳಿಸಿದರು.

ಬಳಿಕ ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ, ಸ್ವಿಟ್ಜರ್​ಲ್ಯಾಂಡ್​ನಲ್ಲಿ ಮೈ ಕೊರೆಯುವ ಚಳಿ ಇತ್ತು. ಹಾಡುಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ. ಅದನ್ನು ಹೇಳುವುದಕ್ಕಿಂತ, ನೋಡುವುದೇ ಚೆನ್ನ ಎಂದು ತಿಳಿಸಿದರು. ನಾಯಕಿ ರಚಿತಾ ರಾಮ್ ಮಾತನಾಡಿ, ಬಹಳ ಶೇಡ್ಸ್ ಇರುವಂಥ ಗೀತಾ ಪಾತ್ರ ನನ್ನದು. ಸಿನಿಮಾ ಅಂದ್ರೆ ಖುಷಿ, ಕಷ್ಟ ಎರಡೂ ಇರುತ್ತದೆ. ನಾವು ಡಿಸೆಂಬರ್ ಚಳಿಯಲ್ಲಿ ಹೋಗಿ ಶೂಟಿಂಗ್​ ಮಾಡಿದ್ದೇವೆ. ನಾಗಶೇಖರ್ ಅವರು ಏನು ಮಾಡಿದ್ರೂ ಬಹಳ ಪ್ಲಾನ್ಡ್ ಆಗಿ ಮಾಡ್ತಾರೆ. ನಮಗೆ ನೇಚರ್ ಕೂಡ ಬಹಳ ಸಪೋರ್ಟ್ ಮಾಡ್ತು. ಅಲ್ಲಿ ಮಾಡಿದ ಎರಡು ಹಾಡುಗಳೂ ಬಹಳ ಚೆನ್ನಾಗಿ ಮೂಡಿ ಬಂದಿವೆ. ಲೊಕೇಶನ್ ಅದ್ಭುತ. ಸತ್ಯ ಹೆಗಡೆ ಸರ್ ಬೇರೆ ಬೇರೆ ಆ್ಯಂಗಲ್​​​ನಲ್ಲಿ ಶೂಟ್ ಮಾಡಿದ್ದಾರೆ. ಎಮೋಷನಲ್ ಸೀನ್ಸ್ ಇನ್ಟೆನ್ಸ್ ಆಗಿ ಬಂದಿದೆ ಎಂದು ತಿಳಿಸಿದರು.

Sanju Weds Geetha 2
ಸಂಜು ವೆಡ್ಸ್ ಗೀತಾ 2 ಈವೆಂಟ್​

ಇದನ್ನೂ ಓದಿ: 'ಮುಟ್ಟಿನ ಕಪ್​​'ನ ಮಹತ್ವ ಸಾರಲು ಬಿಗ್​ ಬಾಸ್​ಗೆ ಬಂದ 'ಕಾಂತಾರ' ಚೆಲುವೆ ಸಪ್ತಮಿ ಗೌಡ

ಸಂಗೀತ ನಿರ್ದೇಶಕ‌ ಶ್ರೀಧರ ವಿ. ಸಂಭ್ರಮ ಚಿತ್ರದ 5 ಸುಂದರ ಹಾಡುಗಳಿಗೆ ಸಂಗೀತ ನೀಡಿದ್ದು, ಕವಿರಾಜ್​ ಸಾಹಿತ್ಯವಿದೆ. ನಿರ್ಮಾಪಕ ಚಲವಾದಿ ಕುಮಾರ್ ಅವರು ಈ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್​ನ್ಯಾಷನಲ್ ಮೂವಿ ಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ಅಡಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ನಿರ್ದೇಶಕ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಗುಂಟೂರು ಕಾರಂ' ಸಾಂಗ್​: ಮಹೇಶ್ ಬಾಬು, ಶ್ರೀಲೀಲಾ ಭರ್ಜರಿ ಡ್ಯಾನ್ಸ್

ಈ ಕಾರ್ಯಕ್ರಮಕ್ಕೆ‌ ಹಿರಿಯ ನಿರ್ದೇಶಕ ಎಸ್.ಮಹೇಂದರ್, ನಟ ಶರಣ್ ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಆಗಿರೋ 'ಸಂಜು ವೆಡ್ಸ್ ಗೀತಾ 2' ಸಿನಿಮಾವನ್ನು 2024ರ ಏಪ್ರಿಲ್ 1ರಂದು ರಿಲೀಸ್ ಮಾಡುವ ಪ್ಲಾನ್​ನಲ್ಲಿ ನಿರ್ದೇಶಕರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.