ETV Bharat / entertainment

'ಸುಕೂನ್': ಬನ್ಸಾಲಿ ಅವರ ಮೊದಲ ಮ್ಯೂಸಿಕ್​ ಆಲ್ಬಂ​ ಬಿಡುಗಡೆಗೆ ಸಿದ್ಧ - ಸಂಜಯ್​ ಲೀಲಾ ಬನ್ಸಾಲಿ ಅವರ ಮೊದಲ ಮ್ಯೂಸಿಕ್​ ಆಲ್ಬಂ

ನಾನು ಕೋವಿಡ್​ನ ಎರಡು ವರ್ಷಗಳ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಂತಿ, ಪ್ರಶಾಂತತೆ ಮತ್ತು ಪ್ರೀತಿಯನ್ನು ಸುಕೂನ್​ ಮೂಲಕ ಸೃಷ್ಟಿಸಿದೆ.

ಸಂಜಯ್​ ಲೀಲಾ ಬನ್ಸಾಲಿ ಅವರ ಮೊದಲ ಮ್ಯೂಸಿಕ್​ ಆಲ್ಬಂ 'ಸುಕೂನ್'​ ಬಿಡುಗಡೆಗೆ ಸಜ್ಜು
sanjay-leela-bhansalis-first-music-album-sukoon-is-all-set-to-release
author img

By

Published : Dec 5, 2022, 3:40 PM IST

ಮುಂಬೈ: ಖ್ಯಾತ ಸಿನಿಮಾ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರ ಮೊದಲ ಮ್ಯೂಸಿಕ್​ ಆಲ್ಬಂ 'ಸುಕೂನ್'​ ಇದೇ ಡಿಸೆಂಬರ್​ 7ರಂದು ಎಲ್ಲಾ ಪ್ರಮುಖ ಪ್ರಸಾರ ಆ್ಯಪ್​ಗಳಲ್ಲಿ ಬಿಡುಗಡೆಯಾಗಲಿದೆ. ಕೋವಿಡ್​ ಸಾಂಕ್ರಾಮಿಕದ ಸಮಯದಲ್ಲಿ ಅವರು ಈ ಆಲ್ಬಂ ಸಿದ್ಧಪಡಿಸಿದ್ದಾರೆ.

ಕೋವಿಡ್​ ಸಂಕಷ್ಟದ ಪರಿಸ್ಥಿತಿಯಲ್ಲಿ ನಾನು ಶಾಂತಿ, ಪ್ರಶಾಂತತೆ ಮತ್ತು ಪ್ರೀತಿಯನ್ನು 'ಸುಕೂನ್​' ಮೂಲಕ ಸೃಷ್ಟಿಸಿದೆ. ಇದನ್ನು ಕೇಳುವಾಗ ನಿಮಗೂ ಕೂಡ ಹಾಗೇ ಅನಿಸಲಿದೆ. ತಬಲ, ಕೊಳಲು, ಗಿಟಾರ್​, ಸಾರಂಗಿ, ಸಿತಾರ್​ ಮತ್ತು ಹಾರ್ಮೋನಿಯಂ ನಾದವನ್ನು ಆಲ್ಬಂನಲ್ಲಿ ಕೇಳಬಹುದು. 9 ಹಾಡುಗಳ ಆಲ್ಬಂಗೆ ರಶೀದ್​ ಖಾನ್​, ಶ್ರೇಯಾ ಘೋಷಲ್​, ಅರ್ಮನ್​ ಮಲ್ಲಿಕ್​ ಸೇರಿದಂತೆ ಹಲವರು ದನಿಯಾಗಿದ್ದಾರೆ.

'ನಮ್ಮ ಸಂಸ್ಥೆ ಕಾತುರವಾಗಿದೆ. ಬನ್ಸಾಲಿ ಅವರ ಒಡನಾಟ ಹೆಮ್ಮೆ ಮೂಡಿಸುತ್ತದೆ. ಪರಿಪೂರ್ಣತೆ ಎಂದರೆ ಅದು ಸಂಜಯ್ ಲೀಲಾ ಬನ್ಸಾಲಿ. ಅವರ ಪ್ರೀತಿ 'ಸುಕೂನ್' ಮೂಲಕ ಸ್ಪಷ್ಟವಾಗುತ್ತದೆ. ಇದು ಚಿತ್ರೋದ್ಯಮದ ಅತ್ಯುತ್ತಮ ಗಾಯಕರ ಸಹಯೋಗದೊಂದಿಗೆ 9 ಹಾಡುಗಳನ್ನು ಹೊಂದಿದೆ' ಎಂದು ಸರಿಗಮ ಇಂಡಿಯಾ ಲಿಮಿಟೆಡ್​ನ ನಿರ್ವಹಣಾ ನಿರ್ದೇಶಕ ವಿಕ್ರಂ ಮೆಹ್ತಾ ಹೇಳಿದರು.

ಇದನ್ನೂ ಓದಿ: ಮಹೇಶ್​ ಬಾಬು ಅಭಿಮಾನಿಗಳಿಗೆ ರಾಜಮೌಳಿ ತಂದೆಯಿಂದ ಸಿಹಿ ಸುದ್ದಿ.. ಕಥೆ ಹೇಗಿರಲಿದೇ ಗೊತ್ತಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.