ETV Bharat / entertainment

'ಲಿಯೋ' ಚಿತ್ರದಿಂದ ಸಂಜಯ್​ ದತ್​ ಫಸ್ಟ್​ ಲುಕ್​ ಔಟ್​: ವಿಲನ್​ ಪಾತ್ರದಲ್ಲಿ ಬಾಲಿವುಡ್ ನಟ​ - ಈಟಿವಿ ಭಾರತ ಕನ್ನಡ

Antony Das first look: ಬಾಲಿವುಡ್​ ನಟ​ ಸಂಜಯ್​ ದತ್​ ಜನ್ಮದಿನದ ಹಿನ್ನೆಲೆ 'ಲಿಯೋ' ಚಿತ್ರದಿಂದ ಆಂಟೋನಿ ದಾಸ್ ಲುಕ್​ ಅನಾವರಣಗೊಂಡಿದೆ.

Sanjay Dutt
ಸಂಜಯ್​ ದತ್
author img

By

Published : Jul 29, 2023, 8:27 PM IST

ಇಂದು ಬಾಲಿವುಡ್​ ನಟ ಸಂಜಯ್​ ದತ್​ ಜನ್ಮದಿನ. 64ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ಟಾರ್​ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಜೊತೆಗೆ ಸಂಜಯ್​ ಬರ್ತ್​ಡೇ ಸಲುವಾಗಿ ಅವರ ಮುಂದಿನ ಚಿತ್ರದ ಅಪ್​ಡೇಟ್ಸ್ ಹೊರಬಿದ್ದಿದೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್​ ಸಿಕ್ಕಿದೆ. ಈಗಾಗಲೇ ಲವರ್ ಬಾಯ್ ರಾಮ್ ಪೋತಿನೇನಿ ನಟನೆಯ 'ಸ್ಮಾರ್ಟ್ ಶಂಕರ್' ಚಿತ್ರದಲ್ಲಿನ ಸಂಜಯ್​ ದತ್​ ಲುಕ್​ ರಿಲೀಸ್​ ಆಗಿದೆ. ಅವರು ಬಿಗ್​ ಬುಲ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ಅವರ ಮುಂದಿನ ಚಿತ್ರ 'ಲಿಯೋ'ದಿಂದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ. ಕಾಲಿವುಡ್​ ಸೂಪರ್​ ಸ್ಟಾರ್​ ದಳಪತಿ ವಿಜಯ್​ ಅಭಿನಯದ 'ಲಿಯೋ' ಚಿತ್ರದಲ್ಲಿನ ಸಂಜಯ್​ ದತ್​ ಮೊದಲ ನೋಟವನ್ನು ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಆಂಟೋನಿ ದಾಸ್​. ಸೌತ್​ ಸಿನಿಮಾದಲ್ಲಿ ಸಂಜಯ್​ ದತ್​ ಮತ್ತೊಮ್ಮೆ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಸಂಜಯ್​ ದತ್​ ಫಸ್ಟ್​ ಲುಕ್​ ಅನ್ನು ಲಿಯೋ ನಿರ್ದೇಶಕರು ಹಂಚಿಕೊಂಡಿದ್ದಾರೆ. ಆಂಟೋನಿ ದಾಸ್​ ಲುಕ್​ ಅದ್ಭುತವಾಗಿದೆ.

ಲೋಕೇಶ್​ ಕನಕರಾಜ್​ ಅವರು ಲಿಯೋ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಂಜಯ್​ ದತ್​ ಅವರ ನೋಟವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. "ಆಂಟೋನಿ ದಾಸ್ ಅವರನ್ನು ಭೇಟಿ ಮಾಡಿ. ನಮ್ಮೆಲ್ಲರಿಂದ ನಿಮಗೊಂದು ಸಣ್ಣ ಉಡುಗೊರೆ ಸಂಜಯ್​ ದತ್​ ಸರ್​. ನಿಮ್ಮೊಂದಿಗೆ ಕೆಲಸ ಮಾಡಲು ನಿಜವಾಗಿಯೂ ಸಂತೋಷವಾಗಿದೆ" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಖೈದಿ, ಮಾಸ್ಟರ್​ ಮತ್ತು ವಿಕ್ರಮ್​ನಂತಹ ಮಾಸ್ಟರ್​ಪೀಸ್​ ಚಿತ್ರಗಳಿಗೆ ಲೋಕೇಶ್​ ಫೇಮಸ್​ ಆಗಿದ್ದಾರೆ.

ಇದನ್ನೂ ಓದಿ: Sheela trailer: ರಾಗಿಣಿ ದ್ವಿವೇದಿ ನಟನೆಯ 'ಶೀಲ' ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಸಾಥ್​

ಬಹುನಿರೀಕ್ಷಿತ ಚಿತ್ರ 'ಲಿಯೋ': ನಟ ವಿಜಯ್​ ಅಭಿನಯದ ಲಿಯೋ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾವು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. 'ಮಾಸ್ಟರ್' ಚಿತ್ರದ ನಂತರ 'ಲಿಯೋ' ಮೂಲಕ ವಿಜಯ್​ ಮತ್ತು ಲೋಕೇಶ್​ ಕನಕರಾಜ್​ ಮತ್ತೆ ಒಂದಾಗಿದ್ದಾರೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಚಿತ್ರ ಇದೇ ಅಕ್ಟೋಬರ್​ 19 ರಂದು ಬಿಡುಗಡೆಯಾಗಲಿದೆ.

'ಡಬಲ್ ಇಸ್ಮಾರ್ಟ್' ಪೋಸ್ಟರ್: 'ಡಬಲ್ ಇಸ್ಮಾರ್ಟ್' ಚಿತ್ರದಲ್ಲಿನ ಸಂಜಯ್​ ದತ್​ ಲುಕ್​ ಕೂಡ ಅದ್ಭುತವಾಗಿದೆ. ಬ್ಲ್ಯಾಕ್​​ ಸೂಟ್‌ನಲ್ಲಿ ಸ್ಟೈಲಿಶ್ ಹೇರ್ ಸ್ಟೈಲ್ ಮತ್ತು ದಾಡಿ ಬಿಟ್ಟು ವಿಲನ್​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚಿನ ನಟನ ಈ ನೋಟಕ್ಕೆ ಫುಲ್​ ಮಾರ್ಕ್ಸ್ ಕೊಟ್ಟಿದ್ದಾರೆ. ನಿರ್ದೇಶಕ ಪುರಿ ಜಗನ್ನಾಥ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂದಿನ ಮಾರ್ಚ್ 8ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಪುರಿ ಜಗನ್ನಾಥ್ ಮತ್ತು ಚಾರ್ಮಿ ಸೇರಿ ಈ ಚಿತ್ರವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: 'ನಾನು Jr NTR ಅವರ ದೊಡ್ಡ ಅಭಿಮಾನಿ': 'ಆರ್​ಆರ್​ಆರ್​' ಸಿನಿಮಾ ಕೊಂಡಾಡಿದ ಜಪಾನ್​ ವಿದೇಶಾಂಗ ಸಚಿವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.