ETV Bharat / entertainment

'ಅನಿಮಲ್' ಸೀಕ್ವೆಲ್​​ 'ಅನಿಮಲ್ ಪಾರ್ಕ್'ಗೆ ಸಿದ್ಧತೆ

author img

By ETV Bharat Karnataka Team

Published : Dec 20, 2023, 4:16 PM IST

ಅನಿಮಲ್​ ಸಿನಿಮಾದ ಮುಂದಿನ ಭಾಗದ ಬಗ್ಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸುಳಿವು ನೀಡಿದ್ದಾರೆ.

Sandeep Reddy Vanga speaks about Animal Park
'ಅನಿಮಲ್' ಸೀಕ್ವೆಲ್​​ 'ಅನಿಮಲ್ ಪಾರ್ಕ್'ಗೆ ಸಿದ್ಧತೆ!

'ಅನಿಮಲ್' ಸಿನಿಮಾ ಭಾರಿ ಯಶಸ್ಸು ಕಂಡಿದ್ದು, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ 'ಅನಿಮಲ್ ಪಾರ್ಕ್'ಗೆ ಸಜ್ಜಾಗಿದ್ದಾರೆ. 'ಅನಿಮಲ್ ಪಾರ್ಕ್' ಚಿತ್ರದ ಮುಂದುವರಿದ ಭಾಗವಾಗಿದೆ. ಪಾರ್ಟ್ 1 ಜಾಗತಿಕ ಮತ್ತು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸಖತ್​ ಸದ್ದು ಮಾಡುತ್ತಿದ್ದು ಅಭಿಮಾನಿಗಳು ಸೀಕ್ವೆಲ್​​ ಕುರಿತು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

  • " class="align-text-top noRightClick twitterSection" data="">

ಬಾಕ್ಸ್​ ಆಫೀಸ್​ನಲ್ಲಿ ಯಶ: ಇದೇ ಮೊದಲ ಬಾರಿ ರಣ್​​ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಸ್ಕ್ರೀನ್​​ ಶೇರ್ ಮಾಡಿರುವ ಸಿನಿಮಾ ಡಿಸೆಂಬರ್ 1ರಂದು ತೆರೆಗಪ್ಪಳಿಸಿದೆ. ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಜೊತೆ ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ನಡೆಸಿ, ಸರಿಸುಮಾರು 850 ಕೋಟಿ ರೂ. ಕಲೆಕ್ಷನ್​ ಮಾಡುವಲ್ಲಿ ಯಶಸ್ವಿಯಾಗಿದೆ.

ಅನಿಮಲ್ ಸೀಕ್ವೆಲ್​: ಅನಿಮಲ್‌ಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಹೀಗಿದ್ದರೂ ಬಾಕ್ಸ್​​ ಆಫೀಸ್​ ಸಂಖ್ಯೆ ಎಲ್ಲರ ಹುಬ್ಬೇರಿಸಿದೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಚಿತ್ರಕ್ಕೆ, ಕಲಾವಿದರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಭಾಗದ ಯಶಸ್ಸಿನ ನಂತರ ಅನಿಮಲ್ ಪಾರ್ಕ್ ಬಗ್ಗೆ ಚರ್ಚೆ ನಡೆಯುತ್ತಿದೆ.

ನಿರ್ದೇಶಕರ ಮಾತು...: ಇತ್ತೀಚಿನ ಸಂದರ್ಶನದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅನಿಮಲ್​​ 2 ಮತ್ತು 3ರ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್​ ಶೆಡ್ಯೂಲ್​​ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಮುಂದಿನ ಭಾಗದ ಪಾತ್ರ, ಸೀಕ್ವೆನ್ಸ್​​ಗಳ ಸುಳಿವನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.

ರಣ್​​ಬೀರ್ ಮತ್ತು ಅನಿಲ್ ಕಪೂರ್ ಅವರ (ತಂದೆ-ಮಗನ ಪಾತ್ರ) ಭಾವನಾತ್ಮಕ ದೃಶ್ಯದ ನಂತರ ಕೊಂಚ ಕಠೋರ ದೃಶ್ಯವನ್ನು ಸಿನಿಮಾದಲ್ಲಿ ಸೂಕ್ತ ಸಂದರ್ಭದಲ್ಲಿ ಇರಿಸುವ ಕುರಿತು ಮಾತುಕತೆ ನಡೆಸಲಾಯಿತು ಎಂಬುದನ್ನು ಬಹಿರಂಗಪಡಿಸಿದರು. ''ಸ್ವಲ್ಪ ಸಮಯದವರೆಗೆ ಸ್ಕ್ರೀನ್​ ಅನ್ನು ಬ್ಲ್ಯಾಂಕ್​ ಆಗಿಡಲು ನಾನು ಯೋಚಿಸಿದೆ. ಆದರೆ ಪ್ರೇಕ್ಷಕರು ಥಿಯೇಟರ್​ನಿಂದ ಎದ್ದು ಹೋಗುತ್ತಾರೆಂಬ ಭಯವಿತ್ತು'' ಎಂದರು. ಹಾಗಾಗಿ ಭಾವನಾತ್ಮಕ ದೃಶ್ಯಗಳೊಂದಿಗೆ ಕಠೋರ ದೃಶ್ಯಗಳನ್ನೂ ಬಳಸಿಕೊಳ್ಳಲಾಯಿತು ಎಂದು ತಿಳಿಸಿದರು.

ರಣ್​​ಬೀರ್‌ನ ವಿಜಯ್ ಪಾತ್ರದ (ಮುಗ್ಧ ಪಾತ್ರ) ಬಗ್ಗೆ ಪ್ರೇಕ್ಷಕರು ಸಹಾನುಭೂತಿ ಹೊಂದಬೇಕೆಂದು ನಾನು ಬಯಸಿದ್ದೆ. ಆ ಭಾವನೆ ಕಡಿಮೆಯಾಗುವ ಮುನ್ನವೇ ಕಟುಕ ದೃಶ್ಯವನ್ನು ತೋರಿಸಲಾಗಿದೆ ಎಂದು ಕೆಲವರು ದೂರಿದ್ದಾರೆ. ಆದರೆ ಪಾರ್ಟ್ 2 ಈ ಭಾವನೆ ಮೇಲೆ ಮುಂದುವರಿಯಲಿದೆ. ಹಾಗಾಗಿ "ಪಾರ್ಟ್ 1 ಮತ್ತು 2 ನೋಡಿದಾಗ ನಿಮಗೆ ಸಿನಿಮಾ ಖುಷಿ ಕೊಡಲಿದೆ" ಎಂದು ಹೇಳಿದರು.

ಇದನ್ನೂ ಓದಿ: Salaar Vs Dunki: ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ ಭರ್ಜರಿ ಪೈಪೋಟಿ; ಯಾವ ಸಿನಿಮಾ ಮುಂದಿದೆ?

ರಣ್​​ಬೀರ್ ಅವರ ಪಾತ್ರ 60 ವರ್ಷ ವಯಸ್ಸಿನವನಂತೆ ಏಕೆ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆ ಎದುರಾದಾಗ, ಪಾರ್ಟ್ 3ರ ಬಗ್ಗೆ ಬಹಿರಂಗಪಡಿಸಿದರು. ಭಾಗ 2 ಮತ್ತು ಭಾಗ3 ಅನ್ನು ಮನಸ್ಸಿನಲ್ಲಿಟ್ಟುಕೊಂಡು ರಣ್​​ಬೀರ್ ಪಾತ್ರವನ್ನು ವಯಸ್ಸಾದಂತೆ ಚಿತ್ರಿಸಿ ಸಿನಿಮಾ ಪ್ರಾರಂಭಿಸಲಾಯಿತು ಎಂದು ಮುಂದಿನ ಭಾಗಗಳ ಸಂಭಾವ್ಯತೆಯ ಬಗ್ಗೆ ಪ್ರಸ್ತಾಪಿಸಿದರು.

ಸಂದೀಪ್ ರೆಡ್ಡಿ ವಂಗಾ ಸದ್ಯ ಪ್ರಭಾಸ್ ಅಭಿನಯದ ಸ್ಪಿರಿಟ್ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ. ಮುಂದಿನ ಸೆಪ್ಟೆಂಬರ್​ಗೆ ಸ್ಪಿರಿಟ್​ ಬಿಡುಗಡೆಯಾಗಲಿದೆ. ಅಲ್ಲಿವರೆಗೆ ಅನಿಮಲ್ ಪಾರ್ಕ್ ಕೆಲಸ ಪ್ರಾರಂಭಿಸುವುದಿಲ್ಲ. "ಈ ಸಿನಿಮಾ ಬಿಡುಗಡೆಯಾದ ನಂತರ ಅನಿಮಲ್ ಪಾರ್ಕ್‌ ಕೆಲಸ ಶುರು ಮಾಡುತ್ತೇನೆ'' ಎಂದರು. ಹಾಗಾಗಿ 2024ರ ಕೊನೆಗೆ ಅನಿಮಲ್​ ಪಾರ್ಕ್ ಶುರುವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಾಲಿವುಡ್​ 2023: ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸ್ಟಾರ್​ಕಿಡ್ಸ್ ಇವರೇ ನೋಡಿ!

ಸೀಕ್ವೆಲ್​ ಅನ್ನು ಅನಿಮಲ್ ಪಾರ್ಕ್ ಎಂದು ಹೆಸರಿಸುವುದರ ಹಿಂದಿರುವ ಕಾರಣವನ್ನೂ ಹೇಳಿದರು. "ಅಲ್ಲಿ ಅನಿಮಲ್​ಗಳ ಗುಂಪೇ ಇದೆ, ಒಂದೆರಡಲ್ಲ, ಬಹಳಷ್ಟಿವೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ಇಲ್ಲಿ ಯುದ್ಧ ಆಗಲಿದೆ. ಸಹೋದರರು ಮತ್ತು ಸೋದರಸಂಬಂಧಿಗಳ ನಡುವೆ ಯುದ್ಧ ಏರ್ಪಡಲಿದೆ'' ಎಂದು ಮುಂದಿನ ಭಾಗದ ಕಥೆಯ ಸುಳಿವು ಬಿಟ್ಟುಕೊಟ್ಟರು. ಚಿತ್ರದಲ್ಲಿ ರಾಕ್ಷಸರಂತೆ ವರ್ತಿಸಿರುವ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ಅನಿಮಲ್​​ ಎಂದು ಹೆಸರಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.