ETV Bharat / entertainment

ಹೊಸಬರ ಕಂಬ್ಳಿಹುಳಕ್ಕೆ ಸಾಥ್ ಕೊಟ್ಟ ಸ್ಯಾಂಡಲ್​ವುಡ್ ಸಿನಿ ತಾರೆಯರು - ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

ಎಲ್ಲೆಲ್ಲೂ ಕಂಬ್ಲಿಹುಳ ಸಿನಿಮಾದ್ದೇ ಸುದ್ದಿ, ಹೊಸಬರ ಸಿನಿಮಾವಾದರೂ ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸುವುದರ ಜೊತೆಗೆ, ಸಿನಿ ತಾರೆಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಈ ಚಿತ್ರದ ಯಶಸ್ಸಿಗೆ ನಟ ನಟಿಯರು ಸೇರಿದಂತೆ ನಿರ್ದೇಶಕ ನಿರ್ಮಾಪಕರೂ ಸಹ ಹಾರೈಸುತ್ತಿದ್ದಾರೆ.

kamblihula Poster
ಕಂಬ್ಳಿಹುಳ ಪೋಸ್ಟರ್​
author img

By

Published : Nov 10, 2022, 12:54 PM IST

ಕಂಟೆಂಟ್ ಒಳಗೊಂಡ, ಹೊಸತನವುಳ್ಳ ಸಿನಿಮಾಗಳು ಯಾವತ್ತೂ ಗೆಲ್ಲುತ್ತೆ, ಸಪೋರ್ಟ್ ಸಿಗುತ್ತೆ ಅನ್ನೋದಕ್ಕೆ ‘ಕಂಬ್ಳಿಹುಳ’ ಸಿನಿಮಾ ಸಾಕ್ಷಿಯಾಗಿದೆ. ಸ್ಯಾಂಡಲ್​ವುಡ್ ಅಂಗಳದಲ್ಲಿ ಕಳೆದೊಂದು ವಾರದಿಂದ ಸಖತ್ ಸುದ್ದಿಯಲ್ಲಿರುವ ಸಿನಿಮಾ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಕಂಬ್ಳಿಹುಳ. ನ. 4ರಂದು ರಾಜ್ಯಾದ್ಯಂತ ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಮಾತ್ರವಲ್ಲ, ಚಂದನವನದ ಸಿನಿ ತಾರೆಯರ ಮೆಚ್ಚುಗೆ ಗಳಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ ‘ಕಂಬ್ಳಿಹುಳ’ ಸಿನಿಮಾದ್ದೇ ಮಾತು. ಚಿತ್ರ ನೋಡಿದ ಸಿನಿಪ್ರಿಯರು ಹೊಸತನವನ್ನು ಒಪ್ಪಿ ಅಪ್ಪಿಕೊಂಡಿದ್ದು, ಮಾತ್ರವಲ್ಲದೇ ಹೊಸಬರ ಪ್ರಯತ್ನವಿರುವ ಚಿತ್ರವನ್ನು ಇನ್ನಷ್ಟು ಜನ ನೋಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಇದು ಕನ್ನಡ ಸಿನಿ ಪ್ರೇಮಿಗಳು ಹೊಸಬರ ಸಿನಿಮಾಗೆ ನೀಡುತ್ತಿರೋ ಬೆಂಬಲ. ಆದ್ರೆ ಇತ್ತ ಚಂದನವನ ಕೂಡ ಕಂಬ್ಳಿಹುಳ ಸಿನಿಮಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದೆ.

Actress Adithi Prabhudev Post
ನಟಿ ಅದಿತಿ ಪ್ರಭುದೇವ್​​ ಪೋಸ್ಟ್​

ಹೀಗಾಗಿ ಚಂದನವನದ ಸಿನಿ ತಾರೆಯರು, ನಿರ್ಮಾಪಕರು, ನಿರ್ದೇಶಕರು ಸಿನಿಮಾ ಬಗ್ಗೆ ಕೇಳಿ ಬರ್ತಿರೋ ಪ್ರಶಂಸೆ ಕಂಡು ಸ್ವತಃ ಸಿನಿಮಾ ನೋಡಿ ಸಿನಿಮಾ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಿನಿಮಾ ತಂಡಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಸಿನಿಮಾವೊಂದರ ಗೆಲುವಿಗಾಗಿ ಚಿತ್ರರಂಗ ಒಗ್ಗಟ್ಟಾಗಿ ನಿಂತಿರೋದರ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ಕೇಳಿ ಬರ್ತಿವೆ.

Actor rishab Shetty Post
ನಟ, ನಿರ್ದೇಶಕ ರಿಷಬ್​ ಶೆಟ್ಟಿ ಪೋಸ್ಟ್​

ನಟ, ನಿರ್ದೇಶಕ ರಿಷಬ್ ಶೆಟ್ಟಿ ‘ಕಂಬ್ಳಿಹುಳ’ ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿ ಬರುತ್ತಿವೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ ಎಂದು ಪೋಸ್ಟ್ ಹಾಕಿದ್ದು, ಧನಂಜಯ್, ಧನ್ವೀರ್, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಚೇತನ್ ಕುಮಾರ್, ನಟಿ ಅದಿತಿ ಪ್ರಭುದೇವ ಕೂಡ ಚಿತ್ರಕ್ಕೆ ಸಪೋರ್ಟ್ ಮಾಡಿ ಅಂತ ಪೋಸ್ಟ್ ಹಾಕಿದ್ದಾರೆ. ಅಲ್ಲದೆ, ಆದಷ್ಟು ಬೇಗ ಸಿನಿಮಾ ನೋಡೋದಾಗಿ ತಿಳಿಸಿದ್ದಾರೆ.

Bha Ma Hareesh
ಭಾ ಮಾ ಹರೀಶ್​ ಪೋಸ್ಟ್​

ನಿರ್ದೇಶಕರಾದ ಸಿಂಪಲ್ ಸುನಿ, ಜಯತೀರ್ಥ, ಯೋಗರಾಜ್ ಭಟ್, ಚಾರ್ಲಿ ಕಿರಣ್ ರಾಜ್, ವಿನಯ್ ರಾಜ್ ಕುಮಾರ್ ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೊಸಬರ ಪ್ರಯತ್ನವನ್ನು ಹಾಡಿ ಹೊಗಳಿದ್ದಾರೆ. ಇನ್ನಷ್ಟು ಜನ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸಿನಿಮಾ ಬಗ್ಗೆ ಎಲ್ಲರೂ ತೋರಿಸುತ್ತಿರುವ ಪ್ರೀತಿ ಹಾಗೂ ಚಿತ್ರರಂಗದ ಸಹಕಾರ ಕಂಡು ಚಿತ್ರತಂಡ ಸಂತಸಗೊಂಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Actor Dhanveer Post
ನಟ ಧನ್ವೀರ್​ ಪೋಸ್ಟ್​
Film lyricist post
ಚಿತ್ರ ಸಾಹಿತಿ ಕವಿರಾಜ್​ ಪೋಸ್ಟ್​

ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಹೆಣೆಯಲಾಗಿದೆ.

ಇದನ್ನೂ ಓದಿ: ಅರಸಯ್ಯ ಪ್ರೇಮಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆ.. ಶುಭ ಕೋರಿದ ರಾಘಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.