ETV Bharat / entertainment

Sudeep nephew Sanchith: 'ಜೂನಿಯರ್​ ಕಿಚ್ಚ'ನ 'ಜಿಮ್ಮಿ' ಕ್ಯಾರೆಕ್ಟರ್​ ಗ್ಲಿಂಪ್ಸ್ ಮೇ​ಕಿಂಗ್​ ವಿಡಿಯೋ ಔಟ್​ - etv bharat kannada

ಕಿಚ್ಚ ಸುದೀಪ್​ ಅಕ್ಕನ ಮಗ ಸಂಚಿತ್​ ಸಂಜೀವ್​ ಅಭಿನಯದ ಚೊಚ್ಚಲ ಚಿತ್ರ 'ಜಿಮ್ಮಿ'ಯ ಕ್ಯಾರೆಕ್ಟರ್​ ಗ್ಲಿಂಪ್ಸ್​ನ​ ಮೇಕಿಂಗ್​ ವಿಡಿಯೋ ಬಿಡುಗಡೆಯಾಗಿದೆ.

jimmy
ಜಿಮ್ಮಿ
author img

By

Published : Jul 16, 2023, 1:03 PM IST

ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ 'ಅಭಿನಯ ಚಕ್ರವರ್ತಿ' ಎಂದೇ ಖ್ಯಾತರಾಗಿರುವ ನಟ ಕಿಚ್ಚ ಸುದೀಪ್​. ಇವರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಸುದೀಪ್​ ಅವರ ಅಕ್ಕನ ಮಗ ಸಂಚಿತ್​ ಸಂಜೀವ್​ ಬಣ್ಣದ ಲೋಕ ಪ್ರವೇಶಿಸಲು ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಸಂಚಿತ್​ ಅವರೇ ನಟಿಸಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ 'ಜಿಮ್ಮಿ' ಎಂದು ಹೆಸರಿಡಲಾಗಿದೆ.

ಕೆಲವು ದಿನಗಳ ಹಿಂದೆ ಚಿತ್ರದ ಟೈಟಲ್​ ಅನಾವರಣದೊಂದಿಗೆ ಕ್ಯಾರೆಕ್ಟರ್​ ಗ್ಲಿಂಪ್ಸ್​ ಕೂಡ ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ, ಕ್ಯಾರೆಕ್ಟರ್​ ಗ್ಲಿಂಪ್ಸ್​ ಮೇಕಿಂಗ್​ ವಿಡಿಯೋ ರಿಲೀಸ್​ ಮಾಡಿದೆ. ವಿಡಿಯೋ ಲಹರಿ ಮ್ಯೂಸಿಕ್​ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ಸಂಚಿತ್​ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಅದ್ಧೂರಿ ತಯಾರಿಯೊಂದಿಗೆ ಸಂಚಿತ್​ ಈ ಸಿನಿಮಾ ಮಾಡುತ್ತಿರುವುದು ವಿಡಿಯೋದಿಂದ ಗೊತ್ತಾಗಿದೆ.

ಶೂಟಿಂಗ್​ ಸಮಯದಲ್ಲಿ ಸಂಚಿತ್​ ಕುಟುಂಬದವರು ಕೂಡ ಸೆಟ್​ನಲ್ಲಿ ಹಾಜರಿದ್ದು, ಅವರಿಗೆ ಸಹಕಾರ ನೀಡುತ್ತಿರುವ ವಿವರಗಳು ವಿಡಿಯೋದಲ್ಲಿವೆ. ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ನೀಡಿರುವ ಲೈಟಿಂಗ್ಸ್​ ಅಂತೂ ಸಕ್ಕತ್​ ಆಗಿದೆ. ಒಟ್ಟಾರೆಯಾಗಿ ನೋಡುವುದಾದರೆ, ಸಂಚಿತ್ ಅವರು ಪ್ರಸ್ತುತ​ ಚಿತ್ರರಂಗಕ್ಕೆ ಏನು ಬೇಕೋ, ಅದನ್ನೇ ಕೊಡುವುದಕ್ಕಾಗಿ ತಯಾರಿ ಮಾಡಿಕೊಂಡು ಬಂದಂತೆ ಕಾಣಿಸುತ್ತಿದೆ.

ಇದನ್ನೂ ಓದಿ: Kichcha Sudeep: ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲು ಸಜ್ಜಾದ ಸುದೀಪ್‌ ಕುಟುಂಬದ ಕುಡಿ

ಕ್ಯಾರೆಕ್ಟರ್​ ಗ್ಲಿಂಪ್ಸ್​ನಲ್ಲೇನಿದೆ?: ಕೆಲವು ದಿನಗಳ ಹಿಂದೆ ಜಿಮ್ಮಿ ಕ್ಯಾರೆಕ್ಟರ್​ ಗ್ಲಿಂಪ್ಸ್​ ಬಿಡುಗಡೆಯಾಗಿತ್ತು. ಈ ಗ್ಲಿಂಪ್ಸ್​​ ಮಾಸ್​ ರೀತಿಯಲ್ಲಿದೆ. ಕಾರಿನಲ್ಲಿ ಬಂದಿಳಿದ ಸಂಚಿತ್​ ಸ್ಟೈಲಿಶ್​ ಆಗಿ ನಡೆದುಕೊಂಡು ಬಂದು ಸಿಗರೇಟ್​ ಸೇದುತ್ತಾ ರೌಡಿಯೊಬ್ಬನ ಬಳಿ, 'ಪ್ರೀತಿಲಿ ನಿಯತ್ತಿಲ್ಲ ಅಂದ್ರೆ ಏನಾಗುತ್ತೆ? ಮನಸ್ಸು ಮುರಿದು ಹೋಗುತ್ತೆ. ಅದೇ ನಮ್ಮ ವ್ಯವಹಾರದಲ್ಲಿ ನಿಯತ್ತಿಲ್ಲ ಅಂದ್ರೆ ನೀನೇ ಇರಲ್ಲ' ಅಂತ ಖಡಕ್​ ಡೈಲಾಗ್​ ಹೇಳುವ ಮೂಲಕ ಭವಿಷ್ಯದ ಸ್ಟಾರ್​ ಅಂತ ಪ್ರೂವ್​ ಮಾಡಿದ್ದಾರೆ.

ಅದರಲ್ಲೂ ಸಂಚಿತ್​ ಸಂಜೀವ್​ ಕಾಣಿಸಿಕೊಂಡಿರುವ ಪರಿ ಅಂತೂ ನೋಡಿದವರು ವಾವ್​! ಅನ್ನುವಂತಿದೆ. ಒಬ್ಬ ಹೀರೋಗೆ ಬೇಕಾದ ಎಲ್ಲ ಕ್ವಾಲಿಟೀಸ್​ ಸಂಚಿತ್​ನಲ್ಲಿ ಎದ್ದು ಕಾಣುತ್ತಿವೆ. ಇಷ್ಟು ಮಾತ್ರವಲ್ಲದೇ ಸಂಚಿತ್​​ ಧ್ವನಿ ಕೂಡ ಕಿಚ್ಚ ಸುದೀಪ್​ ತರಾನೇ ಇದೆ. ಇದು 'ಜಿಮ್ಮಿ'ಗೆ ಪ್ಲಸ್​ ಪಾಯಿಂಟ್​ ಅಂತಾನೇ ಹೇಳಬಹುದು.

ಟೈಟಲ್​ ಲಾಂಚ್​ ಮತ್ತು ಕ್ಯಾರೆಕ್ಟರ್​ ಗ್ಲಿಂಪ್ಸ್​ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ, ಮಗಳು ಸಾನ್ವಿ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಆರ್. ಚಂದ್ರು, ಸಂಗೀತ ನಿರ್ದೇಶಕ ಗುರು ಕಿರಣ್ ಸೇರಿದಂತೆ ಕೆಲವು ಚಿತ್ರರಂಗದ ಗಣ್ಯರು ಭಾಗಿಯಾಗಿ ಸಂಚಿತ್​ಗೆ ಶುಭಹಾರೈಸಿದ್ದರು. ಇನ್ನೂ 'ಜಿಮ್ಮಿ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆ.ಪಿ. ಶ್ರೀಕಾಂತ್, ಜಿ. ಮನೋಹರನ್ ಹಾಗೂ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವ'ಕ್ಕೆ 'ಕೋಳಿ ಎಸ್ರು' ಆಯ್ಕೆ: ಅತ್ಯುತ್ತಮ ನಟಿ ಪ್ರಶಸ್ತಿಗೆ ಅಕ್ಷತಾ ಪಾಂಡವಪುರ ನಾಮಿನೇಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.