ಹೈದರಾಬಾದ್: ನಾನು ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಟಾಲಿವುಡ್ ನಟಿ ಸಮಂತಾ ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಕಳೆದ ಕೆಲವು ತಿಂಗಳುಗಳಿಂದ ನಾನು "ಮಯೋಸಿಟಿಸ್" ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ನಾನು ಆದಷ್ಟು ಬೇಗ ಹುಷಾರಾಗುತ್ತೀನಿ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಸಹ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ನಟಿಯ ಆರೋಗ್ಯದ ಬಗ್ಗೆ ಹಲವು ವದಂತಿಗಳು ಹರಿದಾಡತೊಡಗಿದ್ದವು. ಸಮಂತಾ ಚರ್ಮದ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡಿದ್ದವು. ಇದರಿಂದ ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದರು. ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಸಮಂತಾ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಸ್ವತಃ ಈ ಕುರಿತು ಹೇಳಿಕೊಂಡಿರುವ ಸಮಂತಾ, ಒಂದು ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ. ಡ್ರಿಪ್ಸ್ ಹಾಕಿಕೊಂಡೇ ಚಿತ್ರದ ಡಬ್ಬಿಂಗ್ ಮಾಡುತ್ತಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ. ಯಶೋದಾ ಚಿತ್ರದ ಟ್ರೈಲರ್‌ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ಬದುಕು ನನ್ನ ಮುಂದೆ ಕೊನೆಯಿಲ್ಲದ ಸವಾಲುಗಳನ್ನು ಇಟ್ಟಿದೆ. ನಿಮ್ಮ ಪ್ರೀತಿ ಮತ್ತು ಬಾಂಧವ್ಯವು ಆ ಸವಾಲುಗಳನ್ನು ಎದುರಿಸಲು ನನಗೆ ಹೆಚ್ಚಿನ ನೈತಿಕತೆ ಮತ್ತು ಧೈರ್ಯವನ್ನು ನೀಡುತ್ತದೆ. ಕಳೆದ ಕೆಲವು ತಿಂಗಳುಗಳಿಂದ "ಮಯೋಸಿಟಿಸ್" ಎಂಬ ಆಟೋಇಮ್ಯೂನ್ ಸ್ಥಿತಿಗೆ ಚಿಕಿತ್ಸೆ ಪಡೆಯುತ್ತಿರುವೆ. ಈಗ ನನ್ನ ಆರೋಗ್ಯ ಸ್ಥಿರವಾಗಿದೆ. ನಾನು ಇದನ್ನು ನಿಮ್ಮೊಂದಿಗೆ ಸ್ವಲ್ಪ ತಡವಾಗಿ ಹಂಚಿಕೊಳ್ಳುತ್ತಿದ್ದೇನೆ.
- " class="align-text-top noRightClick twitterSection" data="
">
ನನ್ನ ಜೀವನದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ಈಗಾಗಲೇ ಸಾಕಷ್ಟು ಕಂಡಿದ್ದೇನೆ. ನಾನು ಇನ್ನೊಂದು ದಿನ ಹೀಗೆ ಯಾವತ್ತೂ ಇರಲಾರೆ. ಕೆಟ್ಟ ಕ್ಷಣಗಳು ಕಳೆಯುತ್ತಿವೆ. ಚೇತರಿಸಿಕೊಳ್ಳುವ ದಿನ ಬಹಳ ಹತ್ತಿರದಲ್ಲಿದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.
ನವೆಂಬರ್ 11 ರಂದು ‘ಯಶೋದಾ’ ಆಗಿ ಪ್ರೇಕ್ಷಕರ ಮುಂದೆ ಬರುತ್ತಿರುವ ಹಿನ್ನೆಲೆಯಲ್ಲಿ ಖುದ್ದು ಸಮಂತಾ ತಮ್ಮ ಅನಾರೋಗ್ಯದ ಬಗ್ಗೆ ಬಹಿರಂಗಪಡಿಸಿರುವುದನ್ನು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲುಗು ಅಲ್ಲದೆ ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿಯೂ ಚಿತ್ರ ಬಿಡುಗಡೆಯಾಗುತ್ತಿದೆ.
ಇತ್ತೀಚೆಗಷ್ಟೇ ಕನ್ನಡದ ಅವತರಣಿಕೆಯ ಟ್ರೈಲರ್ ಅನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಮತ್ತು ವಿಜಯ್ ದೇವರಕೊಂಡ ನಟನೆಯ "ಖುಷಿ" ಚಿತ್ರದಲ್ಲೂ ಸಮಂತಾ ನಟಿಸುತ್ತಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ: ಅಪ್ಪು ಮೊದಲ ಪುಣ್ಯ ಸ್ಮರಣೆ.. ಪತಿ ನೆನೆದು ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಟ್ವೀಟ್