ETV Bharat / entertainment

ಸಿನಿ ಕೆಲಸಗಳು ಪೂರ್ಣ: ಅಧ್ಯಾತ್ಮಿಕ ಪ್ರವಾಸ ಕೈಗೊಂಡ ಸಮಂತಾ - ತಮಿಳುನಾಡು ದೇವಸ್ಥಾನಕ್ಕೆ ನಟಿ ಭೇಟಿ - ಸಮಂತಾ ತಮಿಳುನಾಡು ಟ್ರಿಪ್

ನಟಿ ಸಮಂತಾ ರುತ್ ಪ್ರಭು ಅವರು ತಮಿಳುನಾಡು ಪ್ರವಾಸ ಕೈಗೊಂಡಿದ್ದಾರೆ.

Samantha Ruth Prabhu
ನಟಿ ಸಮಂತಾ ರುತ್ ಪ್ರಭು
author img

By

Published : Jul 15, 2023, 5:37 PM IST

ಸೌತ್​ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳು ಕುಶಿ ಮತ್ತು ಸಿಟಾಡೆಲ್‌. ಇತ್ತೀಚೆಗಷ್ಟೇ ಈ ಎರಡೂ ಪ್ರಾಜೆಕ್ಟ್​ಗಳ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಹಾಲಿವುಡ್​ ವೆಬ್​ ಸೀರಿಸ್​​ 'ಸಿಟಾಡೆಲ್‌'ನ ಭಾರತೀಯ ಆವೃತ್ತಿಯ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿರುವ ನಟಿ ಸಮಂತಾ ರುತ್ ಪ್ರಭು ಅವರು ಸಿನಿಮಾಗಳಿಂದ ಒಂದು ವರ್ಷ ವಿರಾಮ ತೆಗೆದುಕೊಂಡು ತಮ್ಮ ಆರೋಗ್ಯದ ಚೇತರಿಕೆಗೆ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇಂದು ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ರೋಡ್ ಟ್ರಿಪ್‌ನ ಒಂದು ಫೋಟೋ ಶೇರ್ ಮಾಡಿ, ಅಭಿಮಾನಿಗಳ ಆತಂಕ ದೂರ ಮಾಡಿದ್ದಾರೆ.

ಶ್ರೀಪುರಂ ಗೋಲ್ಡನ್ ಟೆಂಪಲ್‌ಗೆ ಭೇಟಿ: ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಿರು ವಿಡಿಯೋ ಹಂಚಿಕೊಂಡಿರುವ ಸಮಂತಾ ರುತ್​ ಪ್ರಭು, "ರೋಡ್ ಟ್ರಿಪ್" ಎಂದು ಬರೆದು ವೈಟ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ನಟಿ ತಮಿಳುನಾಡು ಪ್ರಯಾಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೆ ಹಿನ್ನೆಲೆ ಸಂಗೀತವಾಗಿ ಶಾಜಹಾನ್‌ ಚಿತ್ರದ ಹರೀಶ್ ರಾಘವೇಂದ್ರ ಅವರು ಹಾಡಿರುವ ಮೆಲ್ಲಿನಾಮ್ ಹಾಡನ್ನು ಬಳಸಿದ್ದಾರೆ. ಅವರ ಇನ್​ಸ್ಟಾ ಸ್ಟೋರಿ ಪ್ರಕಾರ, ಸಮಂತಾ ತಮಿಳುನಾಡಿನ ವೆಲ್ಲೂರಿನ ತಿರುಮಲೈಕೋಡಿಯಲ್ಲಿರುವ ಶ್ರೀಪುರಂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ.

Samantha Ruth Prabhu visits Sripuram Golden Temple of Tamil Nadu
ಆಧ್ಯಾತ್ಮಿಕ ಪ್ರವಾಸ ಕೈಗೊಂಡ ಸಮಂತಾ

ಸಿಟಾಡೆಲ್ ಶೂಟಿಂಗ್ ಪೂರ್ಣ: ಇತ್ತೀಚೆಗಷ್ಟೇ ಸಮಂತಾ ಅವರು ತಮ್ಮ ಮುಂದಿನ ಸಿಟಾಡೆಲ್ ಶೂಟಿಂಗ್​ ಅನ್ನು ಪೂರ್ಣಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದ ನಟಿ, "ಸಿಟಾಡೆಲ್​ ಕಂಪ್ಲೀಟ್​. ಮುಂದಿನ ದಿನಗಳ ಅರಿವಿದ್ದರೆ ಸದ್ಯ ಸಣ್ಣ ಬ್ರೇಕ್ ಕೆಟ್ಟ ವಿಷಯ ಎಂದು ತೋರುವುದಿಲ್ಲ.​ ನನ್ನ ಪ್ರತಿ ಯುದ್ಧದಲ್ಲಿ ಹೋರಾಡಲು ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ಹೆಮ್ಮೆಪಡಿಸಲು ನಾನು ಬಯಸುತ್ತೇನೆ. ಸಿಟಾಡೆಲ್​ ಪಾತ್ರಕ್ಕಾಗಿ ಧನ್ಯವಾದಗಳು" ಎಂದು ರಾಜ್ ಮತ್ತು ಡಿಕೆ ಸೇರಿದಂತೆ ಇಡೀ ಚಿತ್ರತಂಡಕ್ಕೆ ಕೃತಜ್ಞತೆ ಅರ್ಪಿಸಿದ್ದಾರೆ.

ಇದನ್ನೂ ಓದಿ: ಕುಮಾರ್ - ಕಿಚ್ಚ ವಾರ್: ನಿರ್ಮಾಪಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟ ಸುದೀಪ್

ಸಿಟಾಡೆಲ್‌ ಇಂಡಿಯನ್​ ವರ್ಷನ್​ನ ವೆಬ್​​ ಸೀರಿಸ್​. ಇದು ಹಾಲಿವುಡ್​ ವೆಬ್​ ಸೀರಿಸ್​ನ ಇಂಡಿಯನ್​ ರೀಮೇಕ್​ ಆಗಿದೆ. ಹಾಲಿವುಡ್​ ವೆಬ್​​ ಸೀರಿಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ. ಇಂಡಿಯನ್ ಸಿಟಾಡೆಲ್​ ವೆಬ್​ ಸೀರಿಸ್​ನಲ್ಲಿ ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ಸೌತ್​ ಬ್ಯೂಟಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವರುಣ್​ ಮತ್ತು ಸಮಂತಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.

ತಮಿಳುನಾಡು ದೇವಸ್ಥಾನಕ್ಕೆ ನಟಿ ಭೇಟಿ

ಇದನ್ನೂ ಓದಿ: ರಾಜಮೌಳಿ ಸಿನಿಮಾದಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ ಜೂ. ಎನ್​​ಟಿಆರ್​ - ಮಹೇಶ್​ ಬಾಬು ಮಕ್ಕಳು

ಕುಶಿ ನಟಿಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ. ಶಿವ ನಿರ್ವಾಣ ಅವರ ಈ ಚಿತ್ರದಲ್ಲಿ ಸಮಂತಾ ಜೊತೆಗೆ ವಿಜಯ್ ದೇವರಕೊಂಡ ನಟಿಸಿದ್ದಾರೆ. ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಸೇರಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾಗಳಿಂದ ಬ್ರೇಕ್​ ಪಡೆದಿರುವ ನಟಿ ಪ್ರಮೋಶನ್​​ಗೆ ಹಾಜರಾಗುತ್ತಾರಾ ಎಂಬುದು ಅಭಿಮಾನಿಗಳ ಪ್ರಶ್ನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.