ETV Bharat / entertainment

'ಖುಷಿ' ಪ್ರಮೋಷನ್​: ವಿಜಯ್​ ದೇವರಕೊಂಡ ಜೊತೆ ಮಾಜಿ ಸೊಸೆ ಸಮಂತಾ ಬಗ್ಗೆ ವಿಚಾರಿಸಿದ ನಾಗಾರ್ಜುನ - ಈಟಿವಿ ಭಾರತ ಕನ್ನಡ

Nagarjuna asks about Samantha with Vijay: 'ಖುಷಿ' ಪ್ರಚಾರದ ನಿಮಿತ್ತ ಬಿಗ್​ ಬಾಸ್​ ಸೀಸನ್​ 7ರ ಪ್ರೀಮಿಯರ್​ನಲ್ಲಿ ಭಾಗವಹಿಸಿದ್ದ ವಿಜಯ್​ ದೇವರಕೊಂಡ ಜೊತೆ ಮಾಜಿ ಸೊಸೆ ಸಮಂತಾ ಬಗ್ಗೆ ನಾಗಾರ್ಜುನ ವಿಚಾರಿಸಿದ್ದು, ಸಖತ್​ ವೈರಲ್​ ಆಗುತ್ತಿದೆ.

Kushi
'ಖುಷಿ'
author img

By ETV Bharat Karnataka Team

Published : Sep 4, 2023, 5:21 PM IST

ನಟಿ ಸಮಂತಾ ರುತ್​ ಪ್ರಭು ಮತ್ತು ನಟ ವಿಜಯ್​ ದೇವರಕೊಂಡ ನಟನೆಯ 'ಖುಷಿ' ಸಿನಿಮಾ ಸೆಪ್ಟೆಂಬರ್​​ 1ರಂದು ತೆರೆಕಂಡು ಪ್ರೇಕ್ಷಕರ ಮನಮುಟ್ಟಿದೆ. ಶಿವ ನಿರ್ವಾಣ ಆ್ಯಕ್ಷನ್​ ಕಟ್​ ಹೇಳಿರುವ ಈ ಲವ್​ ಸ್ಟೋರಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮಹಾನಟಿ'ಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಸಮಂತಾ ಮತ್ತು ವಿಜಯ್​ ಜೋಡಿ 'ಖುಷಿ' ಚಿತ್ರದಲ್ಲಿ ಎರಡನೇ ಬಾರಿ ತೆರೆಹಂಚಿಕೊಂಡಿದ್ದು, ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿ ಆಗಿದ್ದಾರೆ.

ಥಿಯೇಟರ್​ಗಳಲ್ಲಿ 'ಖುಷಿ' ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಭಾನುವಾರ, ತೆಲುಗು ಬಿಗ್​ ಬಾಸ್​ ಸೀಸನ್​ 7ರ ಪ್ರೀಮಿಯರ್​ನಲ್ಲಿ 'ಖುಷಿ' ಚಿತ್ರದ ಪ್ರಚಾರದ ನಿಮಿತ್ತ ವಿಜಯ್​ ದೇವರಕೊಂಡ ಭಾಗಿಯಾಗಿದ್ದರು. ಈ ವೇಳೆ, ಶೋ ನಿರೂಪಕ, ಸೂಪರ್​ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಮಾಜಿ ಸೊಸೆ ಸಮಂತಾ ಬಗ್ಗೆ ವಿಜಯ್​ ದೇವರಕೊಂಡ ಜೊತೆ ವಿಚಾರಿಸಿದರು. ಇದು ಪ್ರೇಕ್ಷಕರನ್ನು ಆಶ್ವರ್ಯಗೊಳಿಸಿತು. ಅಲ್ಲದೇ, ಈ ವೇಳೆ ಸಮಂತಾ ಭಾಗಿಯಾಗದೇ ಇರುವುದು ಉದ್ದೇಶಪೂರ್ವಕ ಎಂದು ಹಲವರು ಭಾವಿಸಿದರು.

ಏಕೆಂದರೆ, ಬಿಗ್​ ಬಾಸ್​ ಶೋನ ನಿರೂಪಣೆಯನ್ನು ನಾಗಾರ್ಜುನ ಅವರು ಮಾಡುತ್ತಿರುವುದರಿಂದ ಸಮಂತಾ ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ಸೋಷಿಯಲ್​ ಮೀಡಿಯಾ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ನಾಗಾರ್ಜುನ ಅವರು ವಿಜಯ್​ ಜೊತೆ, 'ನೀವು ಒಬ್ಬರೇ ಯಾಕೆ ಬಂದಿದ್ದೀರಿ? ನಿಮ್ಮ ಸಹ ನಟಿ ಎಲ್ಲಿ?' ಎಂದು ವಿಚಾರಿಸುತ್ತಿರುವುದನ್ನು ಕಾಣಬಹುದು. ಇದಕ್ಕೆ ಉತ್ತರಿಸಿದ ವಿಜಯ್​, 'ಸಮಂತಾ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಪ್ರಸ್ತುತ ಅಮೆರಿಕದಲ್ಲಿ ಇದ್ದಾರೆ' ಎಂದು ತಿಳಿಸಿದರು.

ಇದನ್ನೂ ಓದಿ: Kushi Review: ಸಮಂತಾ ವಿಜಯ್​ ದೇವರಕೊಂಡ ಸಿನಿಮಾಗೆ ಹೇಗಿದೆ ಪ್ರತಿಕ್ರಿಯೆ?!

ಶೀಘ್ರದಲ್ಲೇ ಸಮಂತಾ ಅವರು ಗುಣಮುಖರಾಗಿ ಭಾರತದಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಇದೇ ವೇಳೆ ನಾಗಾರ್ಜುನ ಭರವಸೆ ವ್ಯಕ್ತಪಡಿಸಿದರು. ಅಲ್ಲದೇ, ಸಮಂತಾ ಅವರು ಅದ್ಭುತ ಮತ್ತು ತುಂಬಾ ಒಳ್ಳೆಯ ನಟಿ ಎಂದು ಹೇಳುವ ಮೂಲಕ ಸ್ಯಾಮ್​ ಬಗ್ಗೆ ಸಿಹಿಯಾಗಿ ಪ್ರತಿಕ್ರಿಯಿಸಿದರು. ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕವೂ ನಾಗರ್ಜುನ ಮತ್ತು ಸಮಂತಾ ಉತ್ತಮ ಭಾಂದವ್ಯ ಹೊಂದಿದ್ದಾರೆ ಎನ್ನಲಾಗಿದೆ.

  • " class="align-text-top noRightClick twitterSection" data="">

'ಖುಷಿ'ಗೆ ಸಕಾರಾತ್ಮಕ ಸ್ಪಂದನೆ: ಖುಷಿ ಚಿತ್ರದ ಕಥೆ ವಿಪ್ಲವ್​ (ನಟ ವಿಜಯ್​ ದೇವರಕೊಂಡ) ಮತ್ತು ಆರಾಧ್ಯ (ನಟಿ ಸಮಂತಾ ರುತ್​ ಪ್ರಭು) ಸುತ್ತ ಸುತ್ತುತ್ತದೆ. ವಿಭಿನ್ನ ಹಿನ್ನೆಲೆಯಿಂದ ಬಂದ ಈ ಜೋಡಿ ಪ್ರೀತಿಯಲ್ಲಿ ಬೀಳುತ್ತದೆ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗೋ ಈ ಜೋಡಿ ಬಳಿಕ ಹಲವು ಸವಾಲುಗಳನ್ನು ಎದುರಿಸುತ್ತದೆ. ಅಭದ್ರತೆ, ಅಸೂಯೆ ಸೇರಿದಂತೆ ನಾನಾ ಅಂಶಗಳ ಹೊರತಾಗಿ ಈ ಜೋಡಿ ಹೇಗೆ ಜೀವನ ಸಾಗಿಸುತ್ತಾರೆ ಅನ್ನೋದೇ ಸಿನಿಮಾದ ಪ್ರಮುಖ ಅಂಶ. ಕಂಪ್ಲೀಟ್​ ಎಂಟರ್​ಟೈನ್​ಮೆಂಟ್​ ಸಿನಿಮಾಗೆ ಪ್ರೇಕ್ಷಕರು ಮಣೆ ಹಾಕಿದ್ದಾರೆ. ಸ್ಟೋರಿಲೈನ್​, ಕಥೆ ರವಾನಿಸಿದ ರೀತಿ, ಸಂಗೀತ ಮತ್ತು ನಟನೆಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸಮಂತಾ ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ 'ಕುಶಿ' ಫಸ್ಟ್ ಡೇ ಕಲೆಕ್ಷನ್​ ಡೀಟೆಲ್ಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.