ETV Bharat / entertainment

ನಾನಿನ್ನೂ ಜೀವಂತವಾಗಿದ್ದೇನೆ - 'ಅಭಿಮಾನಿಗಳ ಅನಾರೋಗ್ಯಕರ' ಕಮೆಂಟ್​ಗೆ​ ನಟಿ ಸಮಂತಾ ಪಂಚ್ - ಮಯೋಸಿಟಿಸ್ ಕಾಯಿಲೆ

ಯಶೋದಾ ಸಿನಿಮಾ ಪ್ರಚಾರದಲ್ಲಿ ನಟಿ ಸಮಂತಾ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಸಮಂತಾಗೆ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಮೆಂಟ್​​​ ಕುರಿತು ನಿರೂಪಕಿ ಪ್ರಶ್ನೆ ಕೇಳಿದಾಗ, ನಾನಿನ್ನೂ ಸತ್ತಿಲ್ಲ, ಜೀವಂತವಾಗಿದ್ದೇನೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

actress samantha ruth prabhu
ನಟಿ ಸಮಂತಾ ರುತ್ ಫ್ರಭು
author img

By

Published : Nov 8, 2022, 7:09 PM IST

ನಾನು ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಟಾಲಿವುಡ್​ ನಟಿ ಸಮಂತಾ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​ಗಳು ಬರುತ್ತಿದ್ದು, ಸಮಂತಾ ರುತ್ ಫ್ರಭು ಮೌನ ಮುರಿದಿದ್ದಾರೆ.

ಕೆಲ ದಿನಗಳ ಹಿಂದೆ ಇನ್ಸ್​ಟಾಗ್ರಾಮ್​ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದ ಅವರು, ಕಳೆದ ಕೆಲವು ತಿಂಗಳುಗಳಿಂದ ನಾನು "ಮಯೋಸಿಟಿಸ್" ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆಂದು ವೈದ್ಯರು ಭರವಸೆ ನೀಡಿದ್ದಾರೆ. ಯಾರೂ ಕೂಡ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಸಹ ಮಾಡಿದ್ದರು. ಆದರೆ, ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ಗಳು​ ಬರುತ್ತಿದ್ದು, ಈ ಬಗ್ಗೆ ಖುದ್ದು ಸಮಂತಾ ಪ್ರತಿಕ್ರಿಯಿಸಿದ್ದಾರೆ.

ನವೆಂಬರ್ 11 ರಂದು ತೆರೆಗೆ ಬರಲು ಸಿದ್ಧವಾಗಿರುವ ಯಶೋದಾ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸಂದರ್ಶನವೊಂದರಲ್ಲಿ ಅನಾರೋಗ್ಯದ ಬಗ್ಗೆ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಕೆಲವು ಒಳ್ಳೆಯ ದಿನಗಳಿರುತ್ತವೆ, ಕೆಲವು ಕೆಟ್ಟ ದಿನಗಳಿರುತ್ತವೆ ಮತ್ತು ಕೆಲವೊಮ್ಮೆ ಹಾಸಿಗೆಯಿಂದ ಹೊರಬರಲು ಕಷ್ಟವಾಗುತ್ತದೆ. ನಾನು ಹೋರಾಟಗಾರ್ತಿ. ನಾನು ಈ ಕಾಯಿಲೆ ವಿರುದ್ಧ ಹೋರಾಡುತ್ತೇನೆ ಎಂದರು.

ಇದನ್ನೂ ಓದಿ: ನಾನು ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವೆ: ಆರೋಗ್ಯದ ಬಗ್ಗೆ ಮೌನ ಮುರಿದ ಸಮಂತಾ

ಕೆಲ ಬರಹಗಳು ತಾನು ಜೀವನದ ಅಪಾಯಕಾರಿ ಹಂತದಲ್ಲಿದ್ದೇನೆ ಎಂದು ಹೇಳಿಕೊಂಡಿದೆ. ಆದರೆ ನಾನು ಮೂರು ತಿಂಗಳಿನಿಂದ ಔಷಧ ಪಡೆಯುತ್ತಿದ್ದೇನೆ ಮತ್ತು ನಾನು ಸಾಯುತ್ತಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಗಂಭೀರ ಪರಿಸ್ಥಿತಿಯಲ್ಲಿದ್ದೇನೆ ಎಂದು ಹೇಳಿರುವ ಅನೇಕ ಲೇಖನಗಳನ್ನು ನಾನು ನೋಡಿದ್ದೇನೆ. ಹೌದು, ಇದು ಸ್ವಯಂ ನಿರೋಧಕ ಸ್ಥಿತಿಯಾಗಿದೆ. ಇದು ಸಮಯ ತೆಗೆದುಕೊಳ್ಳುತ್ತಿದೆ. ಆದರೆ ನಾನು ಹೋರಾಟಗಾರ್ತಿ, ಹೋರಾಡುತ್ತೇನೆಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.