ETV Bharat / entertainment

ಶಾರುಖ್ ನಟನೆಯ 'ಜವಾನ್​​' ವಿಡಿಯೋ ಮೊದಲು ನೋಡಿದ್ದೇ ಸಲ್ಮಾನ್​ ಖಾನ್​​ - Shah Rukh Khan movies

ಜವಾನ್ ಪ್ರಿವ್ಯೂ ಅನ್ನು ಮೊದಲು ವೀಕ್ಷಿಸಿದ್ದು ಸಲ್ಮಾನ್​ ಖಾನ್​ ಎಂಬ ವಿಚಾರವನ್ನು ಶಾರುಖ್ ಖಾನ್ ಬಹಿರಂಗಪಡಿಸಿದ್ದಾರೆ.

Salman Khan was the one who watched Jawaan video first
ಜವಾನ್​​ ವಿಡಿಯೋವನ್ನು ಮೊದಲು ವೀಕ್ಷಿಸಿದ್ದೇ ಸಲ್ಮಾನ್​ ಖಾನ್​​
author img

By

Published : Jul 13, 2023, 11:16 AM IST

ಪಠಾಣ್ ಎಂಬ ಆ್ಯಕ್ಷನ್​ ಸಿನಿಮಾ ಸೂಪರ್‌ಹಿಟ್​ ಆದ ನಂತರ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ನಟಿಸುತ್ತಿರುವ ಮತ್ತೊಂದು ಚಿತ್ರವೇ 'ಜವಾನ್​​'. ದಕ್ಷಿಣ ಚಿತ್ರರಂಗದ ಯುವ ನಿರ್ದೇಶಕ ಅಟ್ಲೀ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ಜವಾನ್‌ ಬಿಡುಗಡೆಗೆ ಸಜ್ಜಾಗಿದ್ದು, ಎಸ್​ಆರ್​ಕೆ ಬಿಗ್​ ಸ್ಕ್ರೀನ್​ಗೆ ಮರಳಲು ಸಿದ್ಧರಾಗಿದ್ದಾರೆ. ಜುಲೈ 10ರಂದು ಜವಾನ್ ಪ್ರಿವ್ಯೂ ಅನಾವರಣಗೊಂಡ ನಂತರ ಇಂಡಿಯನ್​​ ಸೂಪರ್‌ ಸ್ಟಾರ್ ಎಸ್​ಆರ್​ಕೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಾರೆ.

ಜವಾನ್ ವಿಡಿಯೋಗೆ ಅಭಿಮಾನಿಗಳು, ನೆಟಿಜನ್‌ಗಳು ಸೇರಿದಂತೆ ಚಿತ್ರರಂಗದವರೂ ಪ್ರತಿಕ್ರಿಯಿಸಿದ್ದಾರೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಹ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಲ್ಮಾನ್ ಖಾನ್​ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಜವಾನ್‌ ವಿಡಿಯೋ ಹಂಚಿಕೊಂಡು ಕಿಂಗ್ ಖಾನ್ ಸೇರಿದಂತೆ ಚಿತ್ರತಂಡವನ್ನು ಹೊಗಳಿದ್ದಾರೆ. ಇತ್ತ, ಶಾರುಖ್ ಸಹ ಸಲ್ಮಾನ್ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿ, ಸಲ್ಮಾನ್​ ಅವರಿಗೇನೇ ಮೊದಲು ಪ್ರಿವ್ಯೂ ತೋರಿಸಿರುವುದಾಗಿ ಹೇಳಿದ್ದಾರೆ.

Salman Khan was the one who watched Jawaan video first
ಶಾರುಖ್​ ಖಾನ್​ ಟ್ವೀಟ್

ಸಲ್ಮಾನ್ ಖಾನ್ ಟ್ವೀಟ್: ಸಲ್ಮಾನ್ ಖಾನ್​​ ವಿಡಿಯೋ ಪೋಸ್ಟ್ ಮಾಡುವ ಮೂಲಕ ಕಿಂಗ್ ಖಾನ್ ಜವಾನ್ ಆಗಿ ಕಾಣಿಸಿಕೊಂಡಿರವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಇದೇ ವೇಳೆ, ಜವಾನ್​​ ಸಿನಿಮಾವನ್ನು ಮೊದಲ ದಿನದಂದು ವೀಕ್ಷಿಸುವುದಾಗಿಯೂ ತಿಳಿಸಿದ್ದರು. "ಪಠಾಣ್ ಜವಾನ್ ಆಗಿಬಿಟ್ರು, ಇದೊಂದು ಅತ್ಯುತ್ತಮ ಟ್ರೇಲರ್, ನನಗೆ ಬಹಳ ಇಷ್ಟವಾಯಿತು. ನಾವು ಚಿತ್ರಮಂದಿರಗಳಲ್ಲೇ ನೋಡಬೇಕಾದ ಚಲನಚಿತ್ರವಿದು. ನಾನು ಸಿನಿಮಾವನ್ನು ತೆರೆಕಂಡ ಮೊದಲ ದಿನವೇ ನೋಡುತ್ತೇನೆ" ಎಂದು ಸಲ್ಮಾನ್​ ಖಾನ್​ ಟ್ವೀಟ್ ಮಾಡಿದ್ದರು.

  • Pathan jawan ban gaya, outstanding trailer, absolutely loved it. Now this is the kind of a movie we should see in theatres only. I toh for sure seeing it 1st day ko hi. Mazaa ahh gaya wahhhhh.. @iamsrk pic.twitter.com/UMra4Iamfg

    — Salman Khan (@BeingSalmanKhan) July 11, 2023 " class="align-text-top noRightClick twitterSection" data=" ">

ಸಲ್ಲು ಟ್ವೀಟ್​ಗೆ ಎಸ್​ಆರ್​ಕೆ ರಿಟ್ವೀಟ್: ಸಲ್ಮಾನ್ ಖಾನ್​​ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಶಾರುಖ್ ಖಾನ್​​, ಜವಾನ್ ಪ್ರಿವ್ಯೂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ, ಪ್ರೀತಿಯ ಮಳೆಗರೆದಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಮೊದಲು ಸಲ್ಮಾನ್‌ ಅವರಿಗೆ ಪ್ರಿವ್ಯೂ ತೋರಿಸಿದ್ದೇನೆ ಎಂದು ಸಹ ಶಾರುಖ್ ತಿಳಿಸಿದ್ದಾರೆ. ಸಲ್ಲು ಟ್ವೀಟ್​ಗೆ ರಿಟ್ವೀಟ್​ ಮಾಡಿರುವ ಎಸ್​ಆರ್​ಕೆ, "ಹಾಗಾಗಿಯೇ, ವಿಡಿಯೋವನ್ನು ಮೊದಲು ನಿಮಗೆ ತೋರಿಸಿದ್ದು. ನಿಮ್ಮ ಮೆಚ್ಚುಗೆ, ಶುಭಾಶಯಗಳಿಗೆ ಮತ್ತು ಮೊದಲ ದಿನದ ಟಿಕೆಟ್ ಅನ್ನು ಈಗಾಗಲೇ ಬುಕ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸುದೀಪ್​​, ರಜನಿಕಾಂತ್​ To ಶಾರುಖ್​​: ತೆರೆ ಮೇಲೆ ಬಾಂಡ್ಲಿಯಾಗಿ ಕಾಣಿಸಿಕೊಂಡ ನಟರಿವರು!

ಸಲ್ಮಾನ್ ಅವರು ಶಾರುಖ್ ಅವರ ಬ್ಲಾಕ್​ಬಸ್ಟರ್ ಪಠಾಣ್​ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪಠಾಣ್​​ ಸಾಹಸ ದೃಶ್ಯಗಳು ಪ್ರೇಕ್ಷಕರ ಮನಸೂರೆಗೊಂಡಿದ್ದವು. ಇದೀಗ ಶಾರುಖ್​ ಅವರು ಸಲ್ಮಾನ್ ಖಾನ್​ ಮತ್ತು ಕತ್ರಿನಾ ಕೈಫ್ ಅವರ ಟೈಗರ್ 3 ಸಿನಿಮಾದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಟೈಗರ್ 3 ಈ ಸಾಲಿನ ದೀಪಾವಳಿ ಸಂದರ್ಭ ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಜವಾನ್ ಸಿನಿಮಾ ಸೆಪ್ಟೆಂಬರ್ 7ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಜವಾನ್​ ಚಿತ್ರದಲ್ಲಿ ಶಾರುಖ್​ ಜೊತೆಗೆ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ ಸೇರಿದಂತೆ ಹಲವರಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ 'ಜವಾನ್​​' ವೀಕ್ಷಿಸುತ್ತೇನೆ: ಶಾರುಖ್​​ ಗುಣಗಾನ ಮಾಡಿದ ಸಲ್ಮಾನ್​ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.