ETV Bharat / entertainment

'ಕಾಫಿ ವಿತ್ ಕರಣ್ ಸೀಸನ್ 8' ಫೈನಲ್​ ಎಪಿಸೋಡ್​ಗೆ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​​? - tiger 3

Koffee With Karan 8: 'ಕಾಫಿ ವಿತ್ ಕರಣ್ ಸೀಸನ್ 8'ರ ಅಂತಿಮ ಸಂಚಿಕೆಗಾಗಿ ನಟ ಸಲ್ಮಾನ್​ ಖಾನ್ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.

Salman Khan to Koffee With Karan
ಕಾಫಿ ವಿತ್ ಕರಣ್ ಶೋಗೆ ಸಲ್ಮಾನ್​ ಖಾನ್​​
author img

By ETV Bharat Karnataka Team

Published : Nov 10, 2023, 1:29 PM IST

ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಕಾಫಿ ವಿತ್ ಕರಣ್ ಸೀಸನ್ 8' ಪ್ರಾರಂಭವಾಗಿ ಮೂರು ವಾರಗಳು ಪೂರ್ಣಗೊಂಡಿವೆ. ವಾರಕ್ಕಿಬ್ಬರಂತೆ 6 ಮಂದಿ ಈಗಾಗಲೇ ವೇದಿಕೆ ಅಲಂಕರಿಸಿದ್ದಾರೆ. ಬಾಲಿವುಡ್​ನ ಪವರ್​ಫುಲ್​ ಕಪಲ್​​ ರಣ್​​​ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೂಲಕ ಗ್ರ್ಯಾಂಡ್​​ ಓಪನಿಂಗ್​ ಪಡೆದಿರುವ ಈ ಚಾಟ್​ ಶೋನ ಎರಡನೇ ವಾರದ ಅತಿಥಿಗಳಾಗಿ ಡಿಯೋಲ್​​ ಬ್ರದರ್ಸ್ ಆಗಮಿಸಿದ್ದರು. ಸನ್ನಿ ಡಿಯೋಲ್​, ಬಾಬಿ ಡಿಯೋಲ್ ಬಳಿಕ ಬಾಲಿವುಡ್​ ಬೆಡಗಿಯರಾದ ಸಾರಾ ಅಲಿ ಖಾನ್​​, ಅನನ್ಯಾ ಪಾಂಡೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ಒಟಿಟಿ ಪ್ಲಾಟ್​ಫಾರ್ಮ್​​​​​ನಲ್ಲಿ ಈ ಶೋ ಹೊರಬಿದ್ದಿದೆ.

ಕಾಫಿ ವಿತ್ ಕರಣ್ ಶೋಗೆ ಸಲ್ಮಾನ್​ ಖಾನ್​​? ಬಾಲಿವುಡ್​ನ ಖ್ಯಾತ ನಿರ್ಮಾಪಕ - ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಈ ಪಾಪ್ಯುಲರ್​ ಶೋನ ಫಿನಾಲೆಗೆ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸುವ ಮೂಲಕ ಹೆಚ್ಚಿನವರ ಗಮನ ಸೆಳೆಯುವ ಗುರಿಯನ್ನು ಹೊಂದಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸಲ್ಮಾನ್​ ಖಾನ್​​ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ರೆ, ನಿಸ್ಸಂದೇಹವಾಗಿ ಈ ಚಾಟ್​ ಶೋನ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.

ಮಾತುಕತೆ ನಡೆಯುತ್ತಿದೆ... ಇತ್ತೀಚಿನ ವರದಿಗಳ ಪ್ರಕಾರ ಕಾಫಿ ವಿಥ್ ಕರಣ್ ಶೋನ ಅಂತಿಮ ಸಂಚಿಕೆಯಲ್ಲಿ, ಸಲ್ಮಾನ್ ಖಾನ್ ಆಗಮನವನ್ನು ಖಚಿತಪಡಿಸಿಕೊಳ್ಳಲು ಚರ್ಚೆಗಳು ನಡೆಯುತ್ತಿವೆಯಂತೆ. ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಸಹ, ಫೈನಲ್​ ಎಪಿಸೋಡ್​ನಲ್ಲಿ ಯಶಸ್ವಿ ನಟನನ್ನು ಬರಮಾಡಿಕೊಳ್ಳಲು ಬಹಳ ಉತ್ಸುಕರಾಗಿದ್ದಾರೆ. ಈ ಬಗ್ಗೆ ಮಾತುಕತೆ ಮುಂದುವರಿದಿದ್ದು, ಕಾಫಿ ವಿತ್​ ಕರಣ್​ ತಂಡ ಕಾರ್ಯಕ್ರಮದಲ್ಲಿ ಸಲ್ಮಾನ್ ಜೊತೆ ಇನ್ನೋರ್ವ ಜನಪ್ರಿಯ ನಟನನ್ನು ಕರೆಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಅವಿಸ್ಮರಣೀಯ ಫೈನಲ್​​ ಎಪಿಸೋಡ್​​ ನೀಡುವ ಗುರಿಯನ್ನು ತಂಡ ಹೊಂದಿದ್ದು, ಸಲ್ಮಾನ್​ ಖಾನ್​ ಉಪಸ್ಥಿತಿ ವೇದಿಕೆಯ ಮೆರುಗು ಹೆಚ್ಚಿಸೋದಂತು ಖಚಿತ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಮಾತು 'ಸಂಪೂರ್ಣವಾಗಿ ಒಪ್ಪಿದೆ' ಎಂದ ರಶ್ಮಿಕಾ ಮಂದಣ್ಣ

ಕಾಫಿ ವಿತ್​ ಕರಣ್​ನ ಮುಂಬರುವ ಸಂಚಿಕೆಗಳಲ್ಲಿ ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಖಾನ್, ಕಾಜೋಲ್ ಮತ್ತು ರಾಣಿ ಮುಖರ್ಜಿ, ಅಜಯ್ ದೇವಗನ್ ಮತ್ತು ರೋಹಿತ್ ಶೆಟ್ಟಿ ಅವರಂತಹ ಪ್ರಭಾವಿ ವ್ಯಕ್ತಿಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಸೆಲೆಬ್ರಿಟಿಗಳ ಚಾಟ್ ಶೋ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​​ನಲ್ಲಿ ಲಭ್ಯವಿದೆ. ಪ್ರತೀ ಗುರುವಾರ ಈ ಒಟಿಟಿ ವೇದಿಕೆಯಲ್ಲಿ ಹೊಸ ಎಪಿಸೋಡ್​ಗಳು ಲಭ್ಯವಾಗುತ್ತವೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಬ್ರೇಕ್ಅಪ್ ವದಂತಿ​: ಸಾರಾ ಅಲಿ ಖಾನ್ ಹೇಳಿದ್ದಿಷ್ಟು!

ಇನ್ನೂ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಟೈಗರ್ 3 ಬಿಡುಗಡೆಗೆ ಸಜ್ಜಾಗಿದೆ. ಇದೇ ಭಾನುವಾರ ಸಿನಿಮಾ ಥಿಯೇಟರ್‌ಗಳಿಗೆ ಎಂಟ್ರಿ ಕೊಡಲಿದೆ. ಆ್ಯಕ್ಷನ್ ಪ್ಯಾಕ್ಡ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ಇದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಈ ಸಿನಿಮಾವನ್ನು ಯಶ್​ ರಾಜ್​ ಫಿಲ್ಮ್ಸ್ ನಿರ್ಮಾಣ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.