ಮುಂಬೈ: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಅವರು ಡೆಂಗ್ಯೂ ಜ್ವರದಿಂದ ಬಳಲಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಕೆಲವು ದಿನಗಳ ಹಿಂದೆ ಏರ್ಪಡಿಸಿದ್ದ ಸೋದರ ಮಾವ ಆಯುಷ್ ಶರ್ಮಾ ಅವರ ಬರ್ತಡೇ ಪಾರ್ಟಿಯಲ್ಲಿ ಪ್ರತ್ಯಕ್ಷವಾಗಿದ್ದ ಸಲ್ಮಾನ್ ಅವರನ್ನು ಅಭಿಮಾನಿಗಳು ನೋಡಿ ಖುಷಿಪಟ್ಟರು.
ಸಲ್ಮಾನ್ ಖಾನ ಅವರು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎಂಬ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಖಾಸಗಿ ಸುದ್ದಿ ವಾಹಿನಿಯೊಂದು ಸಹ ಸಲ್ಮಾನ್ ಆರೋಗ್ಯ ಉತ್ತಮ ಸ್ಥಿತಿಯಲ್ಲಿಲ್ಲ. ಬಿಗ್ ಬಾಸ್ ಕಾರ್ಯಕ್ರಮದಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಹೊರಹಾಕಿತ್ತು. ಆದರೆ ಯಾವುದೇ ಮೂಲಗಳು ಸಲ್ಮಾನ್ ಖಾನ್ ಅವರಿಗೆ ಡೆಂಗ್ಯೂ ಜ್ವರ ಇರುವುದನ್ನು ಖಚಿತ ಪಡಿಸಿರಲಿಲ್ಲ.
ಆದರೆ ಒಮ್ಮೆಲೆ ಹೊರಬಂದ ಬಳಿಕ ಅವರ ಫಿಟ್ ನೆಸ್ ನೋಡಿ ಅಭಿಮಾನಿಗಳು ನಿರಾಳರಾಗಿದ್ದಾರೆ. ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಬಿಗ್ ಬಾಸ್ 16ನೇ ಸೀಸನ್ ಸ್ವಲ್ಪ ಸಮಯದವರೆಗೆ ಹೋಸ್ಟ್ ಮಾಡಲು ಮುಂದಾಗಿದ್ದರು. ಸಲ್ಮಾನ್ ಅವರು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರು.
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಲನ ಚಿತ್ರವು ಮುಸ್ಲಿಂ ಸಮುದಾಯದ ಹಬ್ಬ ಈದ್ 2023 ರಂದು ಬಿಡುಗಡೆಯಾಗಲಿದೆ. ಇದನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ ಮತ್ತು ವೆಂಕಟೇಶ್ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶೆಹನಾಜ್ ಗಿಲ್ ಮತ್ತು ಪಾಲಕ್ ತಿವಾರಿ ಅವರು ಸಹ ಈ ಸಿನಿಮಾ ಪ್ರಾಜೆಕ್ಟ್ ನಲ್ಲಿದ್ದಾರೆ.
ಈ ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ನಿಂದ ನಿರ್ಮಿಸಲಾಗಿದೆ. ಸಲ್ಮಾನ್ ಖಾನ ನಿರೀಕ್ಷಿಸುವ ಆ್ಯಕ್ಷನ್, ಹಾಸ್ಯ, ನಾಟಕ, ಪ್ರಣಯ ಮತ್ತು ಭಾವನೆಗಳ ಸಾರ ಈ ಎಲ್ಲ ಅಂಶಗಳು ಇದರಲ್ಲಿ ಅಡಗಿವೆ. ಸಲ್ಮಾನ್ ಅವರು ಕತ್ರಿನಾ ಕೈಫ್ ಜತೆಗೆ ನಟಿಸಿರುವ ಟೈಗರ್ 3 ಚಿತ್ರವು 2023 ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : 'ಕೆಜಿಎಫ್' ಹಿಂದಿಕ್ಕಿ ಎರಡನೇ ಅತಿದೊಡ್ಡ ಕನ್ನಡ ಚಿತ್ರವಾಗಿ ಹೊರಹೊಮ್ಮಿದ 'ಕಾಂತಾರ'