ETV Bharat / entertainment

ಒ ಓ ಜಾನೆ ಜಾನಾ ಹಾಡಿಗೆ ಸಲ್ಮಾನ್ ​- ಅಬ್ದು ಡ್ಯಾನ್ಸ್ - ಬಿಗ್​ ಬಾಸ್

ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಸಿನಿಮಾದ ಒ ಓ ಜಾನೆ ಜಾನಾ ಹಾಡಿಗೆ ಸಲ್ಮಾನ್​ ಖಾನ್​ ಮತ್ತು ಅಬ್ದು ರೋಝಿಕ್ ಡ್ಯಾನ್ಸ್ ಮಾಡಿದ್ದಾರೆ.

salman khan Abdu Rozik dance
ಸಲ್ಮಾನ್​ ಅಬ್ದು ಡ್ಯಾನ್ಸ್
author img

By

Published : Feb 16, 2023, 1:14 PM IST

ಬಾಲಿವುಡ್‌ ಸೂಪರ್​​ ಸ್ಟಾರ್​ ಸಲ್ಮಾನ್​ ಖಾನ್​ ನಿರೂಪಣೆಯ ಬಿಗ್​ ಬಾಸ್​ ರಿಯಾಲಿಟಿ ಶೋ ತನ್ನ 16ನೇ ಕಂತನ್ನು ಪೂರ್ಣಗೊಳಿಸಿದೆ. ಹಿಂದಿ ಭಾಷೆಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ 16 ಇತ್ತೀಚೆಗೆ ಗ್ರ್ಯಾಂಡ್ ಫಿನಾಲೆಯೊಂದಿಗೆ ಮುಕ್ತಾಯವಾಗಿದೆ. ಫಿನಾಲೆಯಲ್ಲಿ ಗಾಯಕ, ರಾಪರ್ ಎಂಸಿ ಸ್ಟಾನ್ ಅವರು ವಿಜೇತರಾಗಿ ಬಿಗ್​ ಬಾಸ್​​ ಟ್ರೋಫಿಯನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ.

ಬಿಗ್​ ಬಾಸ್​ ಶೋ ಮುಕ್ತಾಯವಾಗಿದ್ದರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳು ಇನ್ನೂ ಸುದ್ದಿಯಲ್ಲಿದ್ದಾರೆ. ಗಾಯಕ ಅಬ್ದು ರೋಝಿಕ್ ಕೂಡ ಬಿಗ್ ಬಾಸ್ ಸೀಸನ್ 16 ರಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ಅವರು ತಮ್ಮ ಹಾಸ್ಯ ಪ್ರಜ್ಞೆ ಮತ್ತು ಗಾಯನದ ಮೂಲಕ ಬಿಗ್ ಬಾಸ್ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದ್ದರು.

ಅಬ್ದು ತಜಕಿಸ್ತಾನದವರಾಗಿದ್ದು, ಅವರಿಗೆ ಬಿಗ್ ಬಾಸ್ 16ರಲ್ಲಿ ಭಾಗಿಯಾಗಲು ಸ್ವತಃ ಸಲ್ಮಾನ್​ ಖಾನ್​ ಅವರೇ ಅವಕಾಶ ನೀಡಿದ್ದರು. ಈ ರಿಯಾಲಿಟಿ ಶೋ ಮೂಲಕ ಅಬ್ದು ಭಾರತ ದೇಶವಲ್ಲದೇ ಪ್ರಪಂಚದಲ್ಲಿ ಬಹಳ ಪ್ರಸಿದ್ಧರಾದರು. ಸಲ್ಮಾನ್ ಖಾನ್ ಅವರಿಗೂ ಕೂಡ ಗಾಯಕ ಅಬ್ದು ರೋಝಿಕ್ ಅವರು ಎಂದರೆ ಬಹಳ ಅಚ್ಚುಮೆಚ್ಚು.

ಇದೀಗ ಸಲ್ಮಾನ್ ಖಾನ್​ ಮತ್ತು ಅಬ್ದು ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಇದರಲ್ಲಿ ಇಬ್ಬರೂ 'ಒ ಓ ಜಾನೆ ಜಾನಾ' ಹಾಡಿಗೆ ನೃತ್ಯ ಮಾಡಿದ್ದಾರೆ. ಸಲ್ಮಾನ್ ಅಬ್ದು ಡ್ಯಾನ್ಸ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಈ ವಿಡಿಯೋಗೆ ಅಭಿಮಾನಿಗಳಿಂದ ಲೈಕ್‌ಗಳ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: 'ಸವಾಲುಗಳನ್ನು ಸ್ವೀಕರಿಸಿ ಸೆಟ್​ಗೆ ಹೆಜ್ಜೆಯಿಡುತ್ತೇನೆ': ನಟಿ ರಶ್ಮಿಕಾ ಮಂದಣ್ಣ

ಈ ಕ್ಯೂಟ್ ವಿಡಿಯೋವನ್ನು ನಿನ್ನೆ ರಾತ್ರಿ ಸ್ವತಃ ಅಬ್ದು ರೋಝಿಕ್ ಅವರೇ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಸೂಪರ್‌ಹಿಟ್ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಚಿತ್ರದ ಹಿಟ್ ಸಾಂಗ್​ ಅದ ಒ ಓ ಜಾನೆ ಜಾನಾದಲ್ಲಿ ಸಲ್ಮಾನ್ ಮತ್ತು ಅಬ್ದು ಬಹಳ ಮೋಜು ಮಸ್ತಿ ಮಾಡುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಈ ವಿಡಿಯೋವನ್ನು ಹಂಚಿಕೊಂಡ ಅಬ್ದು ರೋಝಿಕ್​​, ''ಒ ಓ ಜಾನೇ ಜಾನಾ, ಭಾಯಿಜಾನ್ ಮತ್ತು ಛೋಟಾ ಭಾಯಿಜಾನ್'' ಎಂದು ಬರೆದಿದ್ದಾರೆ. ಅಬ್ದು ಅವರ ಈ ವಿಡಿಯೋವನ್ನು ಈವರೆಗೆ 8 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: ಸಾವಿರ ಕೋಟಿ ಸನಿಹದಲ್ಲಿ ಪಠಾಣ್..​ ಚಿತ್ರತಂಡದಿಂದ ಪ್ರೇಕ್ಷಕರಿಗೆ ಭರ್ಜರಿ ಆಫರ್​

ತಜಕಿಸ್ತಾನ್‌ನ ಗಾಯಕ ಅಬ್ದು ರೋಝಿಕ್​​ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅವರನ್ನು ಫಾಲೋ ಮಾಡುತ್ತಾರೆ. ಅಬ್ದು ತಮ್ಮ ತಮಾಷೆಯ ವಿಡಿಯೋಗಳನ್ನು ಮತ್ತು ಅವರ ಹಾಡಿನ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಪ್ರೀತಿಯನ್ನು ಸಂಗ್ರಹಿಸುತ್ತಾರೆ. ಇದೀಗ ಸಲ್ಮಾನ್ ಖಾನ್ ಅವರೊಂದಿಗಿನ ಈ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಕಮೆಂಟ್ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.