2023ರ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸಲಾರ್ ಮತ್ತು ಡಂಕಿ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಸಿನಿಮಾಗಳ ಸುತ್ತಲಿನ ಉತ್ಸಾಹ ಗರಿಗೆದರಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ. ಕೆಜಿಎಫ್ ಖ್ಯಾತಿಯ ಸಲಾರ್ ಡಿಸೆಂಬರ್ 22 ರಂದು ತೆರೆಗಪ್ಪಳಿಸಲಿದೆ. ಅದ್ಧೂರಿ ಬಿಡುಗಡೆಗೆ ಎರಡೂ ಚಿತ್ರಗಳು ಸಜ್ಜಾಗಿವೆ. ಸ್ಪರ್ಧೆಯ ಬಿಸಿ ಜೋರಾಗೇ ಇದೆ ಎಂಬುದನ್ನು ಮುಂಗಡ ಟಿಕೆಟ್ ಬುಕಿಂಗ್‌ಗಳು ಸೂಚಿಸುತ್ತಿವೆ. ಈ ಎರಡೂ ಚಿತ್ರಗಳು ಬಲವಾದ ಅಂಕಿ ಅಂಶಗಳನ್ನು ಹೊಂದಿವೆ.
- " class="align-text-top noRightClick twitterSection" data="">
ಡಂಕಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್: ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆ. ಮೊದಲ ದಿನದ ಸಿನಿಮಾ ವೀಕ್ಷಿಸಲು ಸರಿಸುಮಾರು 7.36 ಕೋಟಿ ರೂ.ಗಳ (ಸದ್ಯದ ಮಾಹಿತಿ) ವ್ಯವಹಾರ ನಡೆಸಿದೆ. ಭಾರತದಾದ್ಯಂತ 9,694 ಶೋಗಳಿಗೆ 2,55,796 ಟಿಕೆಟ್‌ಗಳು ಮಾರಾಟವಾಗಿವೆ. ಮೊದಲ ದಿನಗಳಲ್ಲಿ ಉತ್ತಮ ಪ್ರದರ್ಶನ ಕಾಣಲಿರುವ ಭರವಸೆಯನ್ನು 'ಡಂಕಿ 'ನೀಡಿದೆ. ಮತ್ತೊಂದೆಡೆ, ಬಾಕ್ಸ್ ಆಫೀಸ್ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿರುವ ಸಲಾರ್ ಭಾಗ 1 ತನ್ನ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಎಲ್ಲಾ ಭಾಷೆ ಸೇರಿ ಸುಮಾರು 6 ಕೋಟಿ ರೂ. ವ್ಯವಹಾರ ನಡೆಸಿದೆ. ಭಾರತದಾದ್ಯಂತ 4,343 ಶೋಗಳಿಗೆ 2,48,564 ಟಿಕೆಟ್‌ಗಳು ಮಾರಾಟವಾಗಿವೆ. ಈ ಸಿನಿಮಾ ವಿಶೇಷವಾಗಿ ಹಿಂದಿ ಮತ್ತು ತೆಲುಗು ಮಾರುಕಟ್ಟೆಗಳಲ್ಲಿ ಹೆಚ್ಚಿನ ಟಿಕೆಟ್ಗಳನ್ನು ಮಾರಾಟ ಮಾಡಿವೆ.
- " class="align-text-top noRightClick twitterSection" data="">
ಇದನ್ನೂ ಓದಿ: ಭರ್ಜರಿ ಅಡ್ವಾನ್ಸ್ ಟಿಕೆಟ್ಸ್ ಬುಕಿಂಗ್: ಮೊದಲ ದಿನವೇ ಸಲಾರ್ ₹ 100 ಕೋಟಿ ಗಳಿಸುವ ನಿರೀಕ್ಷೆ
ಸಲಾರ್ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್: ಅಡ್ವಾನ್ಸ್ ಟಿಕೆಟ್ ಬುಕಿಂಗ್ ರೇಸ್ನಲ್ಲಿ ಎರಡೂ ಚಿತ್ರಗಳು ಕಠಿಣ ಪೈಪೋಟಿ ಎದುರಿಸುತ್ತಿವೆ. ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಮೊದಲ ದಿನಕ್ಕೆ ಭಾರತದಲ್ಲಿ ಸುಮಾರು 6.03 ಕೋಟಿ ರೂ. ಮೌಲ್ಯದಷ್ಟು ಟಿಕೆಟ್ಗಳನ್ನು ಮಾರಾಟ ಮಾಡಿವೆ. ಹಿಂದಿ ಶೋಗಳಲ್ಲಿ 36,262 ಟಿಕೆಟ್‌ಗಳಿಂದ 1.12 ಕೋಟಿ ರೂಪಾಯಿಯ ವ್ಯವಹಾರ ನಡೆದರೆ, ತೆಲುಗು ಶೋಗಳಲ್ಲಿ 1,29,817 ಟಿಕೆಟ್‌ಗಳಿಂದ 3.52 ಕೋಟಿ ರೂಪಾಯಿಗಳ ಬ್ಯುಸಿನೆಸ್ ಆಗಿದೆ. ಹಿಂದಿ, ತೆಲುಗು ಅಲ್ಲದೇ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುತ್ತಿದೆ. ಅಡ್ವಾನ್ಸ್ ಟಿಕೆಟ್ ಖರೀದಿ ಬಿರುಸಿನಿಂದ ಸಾಗಿದೆ. ಹೊರದೇಶಗಳಲ್ಲಿಯೂ ಉತ್ತಮ ವ್ಯವಹಾರ ನಡೆಸುತ್ತಿದೆ. ಭಾರತದಲ್ಲಿ ಈ ಅಂಕಿ ಅಂಶ ಕಡಿಮೆ ಎನಿಸಿದರೂ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸರಿಸುಮಾರು 21 ಕೊಟಿ ರೂ.ನ ವ್ಯವಹಾರ ನಡೆದಿದೆ ಎಂದು ವರದಿಯಾಗಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: ಕೆಂಪಂಗಿಯಲ್ಲಿ ಕಿಲ್ಲರ್ ಲುಕ್ ಕೊಟ್ಟ 'ಅನಿಮಲ್' ನಟಿ; ಹೆಚ್ಚಿತು ತೃಪ್ತಿ ಡಿಮ್ರಿ ಪಾಪ್ಯುಲಾರಿಟಿ