ETV Bharat / entertainment

500 ಕೋಟಿ ರೂ. ಗಡಿ ದಾಟಿದ ಪ್ರಭಾಸ್ ಮೂರನೇ ಸಿನಿಮಾ 'ಸಲಾರ್​' - Salaar collection

Salaar collection: ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಸಲಾರ್​ ಸಿನಿಮಾ ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ 297.40 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Salaar collection
ಸಲಾರ್​ ಕಲೆಕ್ಷನ್​​
author img

By ETV Bharat Karnataka Team

Published : Dec 28, 2023, 11:50 AM IST

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್​ನ ಚೊಚ್ಚಲ ಚಿತ್ರ 'ಸಲಾರ್' ಡಿಸೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ ದಾಖಲೆ ಬರೆಯುತ್ತಿದೆ. ಸಿನಿಮಾ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂ. ಗಡಿ ದಾಟಿದ್ದು, ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂಪಾಯಿಯ ಗಡಿ ಸಮೀಪಿಸಿದೆ. ಜಾಗತಿಕ ಕಲೆಕ್ಷನ್‌ ಅಂಕಿ-ಅಂಶ ಗಮನಿಸಿದ್ರೆ, ಬಾಹುಬಲಿ ಸರಣಿಯ ನಂತರ ವಿಶ್ವದಾದ್ಯಂತ 500 ಕೋಟಿ ರೂ. ಗಡಿ ದಾಟಿದ ಪ್ರಭಾಸ್ ಅವರ ಮೂರನೇ ಸಿನಿಮಾ 'ಸಲಾರ್' ಆಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್​ ಸಿನಿಮಾದಲ್ಲಿ ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಆ್ಯಕ್ಷನ್ ಮೂವಿ ಕಳೆದ ದಿನ ಭಾರತದಾದ್ಯಂತ ಎಲ್ಲಾ ಭಾಷೆ ಸೇರಿ 17 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಈ ಮೂಲಕ ಸಲಾರ್​ ಸಿನಿಮಾದ ದೇಶಿಯ ಕಲೆಕ್ಷನ್‌ - 297.40 ಕೋಟಿ ರೂ. ಆಗಿದೆ. ಇಂದು 300 ಕೋಟಿ ರೂ. ಗಡಿ ದಾಟುವ ನಿರೀಕ್ಷೆ ಇದೆ.

ಬುಧವಾರದ ಹೊತ್ತಿಗೆ ಪ್ರಶಾಂತ್ ನೀಲ್ ನಿರ್ದೇಶನ ಸಲಾರ್​ 500 ಕೋಟಿ ರೂ.ನ ಕ್ಲಬ್‌ಗೆ ಪ್ರವೇಶಿಸಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಚಿತ್ರ 500 ಕೋಟಿ ರೂ. ಕಲೆಕ್ಷನ್​​​ ಮಾಡುವಲ್ಲಿ ಯಶಸ್ಸು ಕಂಡಿದೆ. ಬಾಹುಬಲಿ 1 ಮತ್ತು ಬಾಹುಬಲಿ 2 ನಂತರ 500 ಕೋಟಿ ರೂ.ನ ಕ್ಲಬ್‌ ಪ್ರವೇಶಿಸಿದ ಪ್ರಭಾಸ್ ಅವರ ಮೂರನೇ ಸಿನಿಮಾವಿದು.

ಇದನ್ನೂ ಓದಿ: ವಿಜಯಕಾಂತ್ ಸಿನಿಪಯಣ​: 150 ಸಿನಿಮಾ, ಒಂದೇ ವರ್ಷ 18 ಚಿತ್ರ ತೆರೆಗೆ

ಭರ್ಜರಿ ಓಪನಿಂಗ್​ನ ಹೊರತಾಗಿಯೂ, ಕಳೆದೆರಡು ದಿನಗಳ ಕಲೆಕ್ಷನ್​ ನಲ್ಲಿ ಕುಸಿತ ಕಂಡಿದೆ. ಥಿಯೇಟರ್​ಗೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಲು ಹೊಂಬಾಳೆ ಫಿಲ್ಮ್ಸ್ ಟಿಕೆಟ್ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಈ ಮೂಲಕ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಗುರಿಯನ್ನು ನಿರ್ಮಾಪಕರು ಹೊಂದಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪ: ರಣ್​​ಬೀರ್ ವಿರುದ್ಧ ದೂರು

ಸಲಾರ್ ಇಬ್ಬರು ಬಾಲ್ಯ ಸ್ನೇಹಿತರ ಕಥೆಯನ್ನು ಹೇಳಿದೆ. ವರದರಾಜ ಮನ್ನಾರ್ ಆಗಿ ಪೃಥ್ವಿರಾಜ್ ಸುಕುಮಾರನ್ ಮತ್ತು ದೇವನಾಗಿ ಪ್ರಭಾಸ್ ನಟಿಸಿದ್ದಾರೆ. ಶ್ರುತಿ ಹಾಸನ್​​ ನಾಯಕಿ. ಚಿತ್ರದಲ್ಲಿ ಬಾಬಿ ಸಿಂಹ, ಶ್ರೀಯಾ ರೆಡ್ಡಿ, ಜಗಪತಿ ಬಾಬು ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.