ಹೈದರಾಬಾದ್: ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾದ 'ಸಲಾರ್: ಪಾರ್ಟ್ 1 ಸೀಸ್ಫೈರ್' ಸಿನಿಮಾ ಅಂದುಕೊಂಡಂತೆ ಭಾರಿ ಹಿಟ್ ಆಗಿದೆ. ಮೊದಲ ದಿನವೇ 90.7 ಕೋಟಿ ರೂ. ಅನ್ನು ಗಲ್ಲಾ ಪೆಟ್ಟಿಗೆಯಲ್ಲಿ ಬಾಚಿಕೊಂಡಿತ್ತು. ಈ ಮೂಲಕ ಅಟ್ಲಿ ನಿರ್ದೇಶನದ, ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ದಾಖಲೆಯನ್ನು ಧೂಳಿಪಟ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ದೇಶಿಯವಾಗಿ ₹ 400 ಕೋಟಿ ಗಳಿಕೆ ಮಾಡಿದ್ದರೆ, ಜಾಗತಿಕ ಮಟ್ಟದಲ್ಲಿ 700 ಕೋಟಿ ರೂಪಾಯಿ ಕ್ಲಬ್ಗೆ ಸೇರಿದೆ.
ಸಿನಿಮಾ ಬಿಡುಗಡೆಯಾಗಿ 19ನೇ ದಿನದಂದು 'ಸಲಾರ್' 2.15 ಕೋಟಿ ಸಂಪಾದಿಸಿದ್ದು, ಈ ಮೂಲಕ ಇಲ್ಲಿಯವರೆಗೆ ದೇಶಿಯವಾಗಿ 397.80 ಕೋಟಿ ಬಾಚುವ ಮೂಲಕ 400 ಕೋಟಿ ಮೈಲಿಗಲ್ಲಿಗೆ ತಲುಪಿದೆ. ಈ ಚಿತ್ರವು ಬಹುತೇಕ ನೈಟ್ ಶೋ (17.43ರಷ್ಟು) ಅಭಿಮಾನಿಗಳನ್ನು ಸೆಳೆಯುತ್ತಿದ್ದು, ಬೆಳಗ್ಗೆಗೆ ಹೋಲಿಕೆ ಮಾಡಿದಾಗ (14.27ರಷ್ಟು) ರಾತ್ರಿ ಶೋಗೆ ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ತೆಲುಗು (15.29ರಷ್ಟು) ಅಭಿಮಾನಿಗಳಿಗೆ ಹೋಲಿಸಿದರೆ, ಚಿತ್ರವು ತಮಿಳು (16.40) ಅಭಿಮಾನಿಗಳನ್ನು ಹೆಚ್ಚು ಸೆಳೆದಿದೆ. ಇನ್ನು ಹಿಂದಿ ಭಾಷಿಕ ಪ್ರದೇಶದಲ್ಲಿ ಸೀಟು ಭರ್ತಿಯಲ್ಲಿ 9.84ರಷ್ಟು ಕುಸಿತ ಕಂಡಿದೆ.
-
BREAKING: Global Star #Prabhas' #SalaarCeaseFire ZOOMS past ₹7️⃣0️⃣0️⃣ cr gross mark at the WW Box Office.
— Manobala Vijayabalan (@ManobalaV) January 9, 2024 " class="align-text-top noRightClick twitterSection" data="
Prabhas becomes the only star from south to HOLD… pic.twitter.com/2kmSWpM4r4
">BREAKING: Global Star #Prabhas' #SalaarCeaseFire ZOOMS past ₹7️⃣0️⃣0️⃣ cr gross mark at the WW Box Office.
— Manobala Vijayabalan (@ManobalaV) January 9, 2024
Prabhas becomes the only star from south to HOLD… pic.twitter.com/2kmSWpM4r4BREAKING: Global Star #Prabhas' #SalaarCeaseFire ZOOMS past ₹7️⃣0️⃣0️⃣ cr gross mark at the WW Box Office.
— Manobala Vijayabalan (@ManobalaV) January 9, 2024
Prabhas becomes the only star from south to HOLD… pic.twitter.com/2kmSWpM4r4
ದಕ್ಷಿಣ ಭಾರತದ ನಟ ಅತಿ ಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಚಿತ್ರದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಸ್ಥಾನವನ್ನು ಪಡೆದಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ ಐದು ಚಿತ್ರಗಳ ಪಟ್ಟಿಯಲ್ಲಿ ರಜನಿಕಾಂತ್ ನಟನೆಯ '2.0', ಯಶ್ 'ಕೆಜಿಎಫ್: ಚಾಪ್ಟರ್ 2', ಎಸ್ಎಸ್ ರಾಜಮೌಳಿಯ 'ಆರ್ಆರ್ಆರ್' ಮತ್ತು 'ಬಾಹುಬಲಿ 2' ಸ್ಥಾನ ಪಡೆದಿವೆ. 2018ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅವರ '2.0' ಗಳಿಕೆ ಹಿಂದಿಕ್ಕಿ 'ಸಲಾರ್' ಸ್ಥಾನ ಪಡೆದಿದೆ. 'ಸಲಾರ್' ಇದೀಗ 'ಜವಾನ್', 'ಪಠಾಣ್' ಮತ್ತು 'ಅನಿಮಲ್' ಅಥವಾ 'ಗದಾರ್ 2' ಸಿನಿಮಾವನ್ನು ಹಿಂದಿಕ್ಕಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ. ಈ ಎಲ್ಲಾ ಚಿತ್ರಗಳು ದೇಶಿಯ ಮಾರುಕಟ್ಟೆಯಲ್ಲಿ 500 ಕೋಟಿ ಕ್ಲಬ್ ಸೇರಿವೆ. ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆ ಎಸ್ಎಸ್ ರಾಜಮೌಳಿ ಅವರ 'ಬಾಹುಬಲಿ 2: ಕನ್ಕ್ಲೂಷನ್' ಚಿತ್ರ ಆಗಿದೆ. ಈ ಚಿತ್ರ 1030.42 ಕೋಟಿಯನ್ನು ಸಂಪಾದಿಸಿತ್ತು.
- " class="align-text-top noRightClick twitterSection" data="">
ಒಟ್ಟಾರೆ ಈವರೆಗೆ 'ಸಲಾರ್' 700 ಕೋಟಿ ಸಂಗ್ರಹ ಮಾಡಿದ್ದು, ತಮ್ಮ ಮೂರು ಚಿತ್ರಗಳ ಮೂಲಕ ಈ ಕ್ಲಬ್ ಸೇರಿರುವ ದಕ್ಷಿಣ ಭಾರತದ ಏಕೈಕ ನಟ ಪ್ರಭಾಸ್ ಆಗಿದ್ದಾರೆ ಎಂದು ಟ್ರೇಡ್ ವಿಶ್ಲೇಷಕ ಮನೋಬಲ ವಿಜಯಬಾಲನ್ ತಿಳಿಸಿದ್ದಾರೆ.
'ಸಲಾರ್' ಚಿತ್ರದಲ್ಲಿ ನಟ ಪ್ರಭಾಸ್ ಜೊತೆಗೆ ನಟ ಪೃಥ್ವಿರಾಜ್ ಸುಕುಮಾರನ್, ಶೃತಿ ಹಾಸನ್, ಟಿನ್ನು ಆನಂದ್, ಜಗಪತಿ ಬಾಬು ಮತ್ತಿತರರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ಅಭಿನಯದ 'ಗುಂಟೂರು ಖಾರಂ' ಸಿನಿಮಾ ಟ್ರೇಲರ್ ಬಿಡುಗಡೆ-ನೋಡಿ