ETV Bharat / entertainment

ಪ್ರಭಾಸ್​ - ಪ್ರಶಾಂತ್​ ನೀಲ್​​ ಕಾಂಬೋದ 'ಸಲಾರ್​' ಕಲೆಕ್ಷನ್​ ಮಾಹಿತಿ - ಪ್ರಭಾಸ್

Salaar collection: ಸಲಾರ್​ ಸಿನಿಮಾ ಭಾರತದಲ್ಲಿ 365 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Salaar collection
ಸಲಾರ್​ ಕಲೆಕ್ಷನ್​
author img

By ETV Bharat Karnataka Team

Published : Jan 3, 2024, 1:50 PM IST

ಬಾಹುಬಲಿ ಖ್ಯಾತಿಯ ಪ್ರಭಾಸ್​​ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಶನ್​ನ ಚೊಚ್ಚಲ ಚಿತ್ರ 'ಸಲಾರ್' ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ಮಂಗಳವಾರದ ವೇಳೆಗೆ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 369 ಕೋಟಿ ರೂ. ಕಲೆಕ್ಷನ್​ ಮಾಡುವಲ್ಲಿ ಯಶ ಕಂಡಿದೆ. ಡಿಸೆಂಬರ್ 22 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಲಾರ್​ ತೆರೆಗಪ್ಪಳಿಸಿತು. ಒಂದು ದಿನ ಮುನ್ನ, ಡಿ. 21ರಂದು ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​ ಅವರ ಡಂಕಿ ಸಿನಿಮಾ ಕೂಡ ತೆರೆಕಂಡಿದೆ.

ಸಲಾರ್ ತನ್ನ 12ನೇ ದಿನ ಅಂದರೆ ಮಂಗಳವಾರದಂದು ಭಾರತದಲ್ಲಿ 7.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸಿನಿಮಾ ತೆರೆಕಂಡ 12 ದಿನಗಳಲ್ಲಿ ಒಟ್ಟು 369.37 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಹಿಂದಿ ಮತ್ತು ತೆಲುಗು ಆವೃತ್ತಿಯ ಸಿನಿಮಾವನ್ನು ಹೆಚ್ಚು ಜನರು ವೀಕ್ಷಿಸಿದ್ದು, ಬಾಕ್ಸ್ ಆಫೀಸ್​​ ಕಲೆಕ್ಷನ್​​ನಲ್ಲಿ ಈ ಭಾಷೆಗಳು ಹೆಚ್ಚಿನ ಪ್ರಭಾವ ಬೀರಿದೆ.

  • " class="align-text-top noRightClick twitterSection" data="">

ಉಗ್ರಂ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಟಿನ್ನು ಆನಂದ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಜಿಎಫ್​, ಕಾಂತಾರ ಸೇರಿದಂತೆ ಕೆಲ ಸೂಪರ್​ ಹಿಟ್ ಸಿನಿಮಾಗಳನ್ನು ನೀಡಿರುವ, ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​​​ನ ವಿಜಯ್​ ಕಿರಗಂದೂರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಖಾನ್ಸಾರ್‌ ಎಂಬ ಕಾಲ್ಪನಿಕ ನಗರದಲ್ಲಿ ಕಥೆ ನಡೆಯುತ್ತದೆ.

ಇದನ್ನೂ ಓದಿ: ಅಮೀರ್ ಖಾನ್ ಮಗಳ ಮದುವೆ: ಸಂಭ್ರಮದ ವಿಡಿಯೋಗಳು ವೈರಲ್

ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಸರಿಸುಮಾರು 630 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿದೆ. ಪ್ರಭಾಸ್​ ತಮ್ಮದೇ ಬ್ಲಾಕ್​ಬಸ್ಟರ್ ಹಿಟ್​​ ಸಿನಿಮಾದ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಬಾಹುಬಲಿ ಪಾರ್ಟ್ ಒನ್ 650 ಕೋಟಿ ರೂ. ಕಲೆಕ್ಷನ್​ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಸಲಾರ್ ಈ ದಾಖಲೆ ಪುಡಿಗಟ್ಟುವ ನಿರೀಕ್ಷೆ ಇದೆ. ಅಲ್ಲದೇ ಜೈಲರ್​​ ಸಿನಿಮಾದ ಒಟ್ಟು ಕಲೆಕ್ಷನ್​ ಕೂಡ ಸರಿಸುಮಾರು 650 ಕೋಟಿ ರೂಪಾಯಿ. ಸಲಾರ್​​ ಈಗಾಗಲೇ ವಿಜಯ್ ಅವರ 'ಲಿಯೋ' ಸಿನಿಮಾ ಕಲೆಕ್ಷನ್​ ಅನ್ನು ಮೀರಿಸಿದೆ. ಲಿಯೋ ಸಿನಿಮಾದ ಒಟ್ಟು ಕಲೆಕ್ಷನ್​​ 605 ಕೋಟಿ ರೂಪಾಯಿ.

ಇದನ್ನೂ ಓದಿ: 'ಲಿಯೋ' ಮೀರಿಸಿದ 'ಸಲಾರ್'​; ಜೈಲರ್, ಬಾಹುಬಲಿ ದಾಖಲೆ ಮುರಿಯಲು ಸಜ್ಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.