ETV Bharat / entertainment

ಸಿನಿ ಜಗತ್ತಿಗೆ ಕಾಲಿಟ್ಟ 'ಸಕ್ಕತ್ ಸ್ಟುಡಿಯೋ'ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್ - sakkat studios first movie

ಈವರೆಗೆ ವೆಬ್ ಸರಣಿಗಳನ್ನು ನಿರ್ಮಾಣ ಮಾಡಿರುವ 'ಸಕ್ಕತ್ ಸ್ಟುಡಿಯೋ' ನಿರ್ಮಾಣದ ಚೊಚ್ಚಲ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

Sakkat Studio's first movie shooting completed
'ಸಕ್ಕತ್ ಸ್ಟುಡಿಯೋ' ನಿರ್ಮಾಣದ ಚೊಚ್ಚಲ ಚಿತ್ರ
author img

By ETV Bharat Karnataka Team

Published : Nov 11, 2023, 5:03 PM IST

ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ''ಸಕ್ಕತ್ ಸ್ಟುಡಿಯೋ'' ಟ್ರೆಂಡ್​​ ಸೆಟ್ಟರ್ ಆಗಿ ಗುರುತಿಸಿಕೊಂಡಿದೆ. ಸುನೀಲ್ ರಾವ್, ಅನುಪಮಾ ಗೌಡ, ಸಿಂಧು ಲೋಕನಾಥ್ ಸೇರಿದಂತೆ ಮೊದಲಾದವರು ನಟಿಸಿರುವ "ಲೂಸ್ ಕನೆಕ್ಷನ್" - ನಮ್ಮ ಕನ್ನಡದ ಮೊದಲ ವೆಬ್ ಸರಣಿಯನ್ನು ನಿರ್ಮಾಣ ಮಾಡಿದ್ದು ಇದೇ ಸಂಸ್ಥೆ. ಸ್ಟಾರ್ ದಂಪತಿಗಳಾದ ಆರ್.ಜೆ ಪ್ರದೀಪ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ನೇತೃತ್ವದಲ್ಲಿ ಶುರುವಾದ 'ಸಕ್ಕತ್ ಸ್ಟುಡಿಯೋ' ವೈವಿಧ್ಯಮಯ ವೆಬ್ ಸರಣಿಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದೆ.

Sakkat Studio's first movie shooting completed
'ಸಕ್ಕತ್ ಸ್ಟುಡಿಯೋ' ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ಕ್ರೇಜಿಸ್ಟಾರ್ ಸಾಥ್

ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹಿರೋ ಶಿವ ರಾಜ್​​ಕುಮಾರ್ ಅವರ ಪುತ್ರಿ ನಿವೇದಿತಾ ಶಿವ ರಾಜ್​ಕುಮಾರ್ ಅವರ ಸಹಯೋಗದೊಂದಿಗೆ ಸಕ್ಕತ್ ಸ್ಟುಡಿಯೋ, ನಾಗಭೂಷಣ ಮತ್ತು ಸಂಜನಾ ಆನಂದ್ ಅಭಿನಯದ "ಹನಿಮೂನ್", ಪೂರ್ಣ ಮೈಸೂರು ಮತ್ತು ಸಿರಿ ರವಿಕುಮಾರ್ ಅಭಿನಯದ "ಬೈ ಮಿಸ್ಟೇಕ್", ಅರವಿಂದ್ ಅಯ್ಯರ್ ಮತ್ತು ದಿಶಾ ಮದನ್ ಅಭಿನಯದ "ಹೇಟ್ ಯು ರೋಮಿಯೋ" ಹೀಗೆ ಉನ್ನತ ಮಟ್ಟದ ಸರಣಿಗಳು ನಿರ್ಮಾಣಗೊಂಡು ವೂಟ್, ಆಹಾ ಸೇರಿದಂತೆ ಮೊದಲಾದ ಒಟಿಟಿ ಪ್ಲಾಟ್​ಫಾರ್ಮ್ಸ್​​​​ಗಳಲ್ಲಿ ಪ್ರಸಾರಗೊಂಡು ನೋಡುಗರ ಗಮನ ಸೆಳೆದಿದೆ.

'ಸಕ್ಕತ್ ಸ್ಟುಡಿಯೋ'ಗೆ ರವಿಚಂದ್ರನ್ ಸಾಥ್: ಡಿಜಿಟಲ್ ಕ್ಷೇತ್ರದಲ್ಲಿ ಯಶಸ್ವಿ ಪ್ರಯಾಣ ನಡೆಸಿರುವ 'ಸಕ್ಕತ್ ಸ್ಟುಡಿಯೋ' ಇದೀಗ ಹಿರಿತೆರೆ / ಸಿನಿಮಾ ಜಗತ್ತಿಗೆ ಕಾಲಿಡುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ತನ್ನ ಮೊಟ್ಟಮೊದಲ ಚಿತ್ರದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಿತ್ರದ ಮಹೂರ್ತಕ್ಕೆ ಆಗಮಿಸಿ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು.

ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ "ದಿ ಬೆಸ್ಟ್ ಆ್ಯಕ್ಟರ್" ಮೈಕ್ರೋ ಮೂವಿಯ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ 'ಪುಕ್ಸಟ್ಟೆ ಲೈಫ್ ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಇದೀಗ 'ಸಕ್ಕತ್ ಸ್ಟುಡಿಯೋ' ಮೂಲಕ ಮೊದಲ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಇದನ್ನೂ ಓದಿ: 'ಟೈಗರ್​ 3 ಲೀಕ್ ಆಗದಂತೆ ನೋಡಿಕೊಳ್ಳಿ'​: ಅಭಿಮಾನಿಗಳಲ್ಲಿ ಸಲ್ಮಾನ್​, ಕತ್ರಿನಾ ಮನವಿ!

ಮುಂಬರುವ ವಾರದಲ್ಲಿ ವಿಶಿಷ್ಟ ಶೀರ್ಷಿಕೆ, ಪರಿಕಲ್ಪನೆ ಮತ್ತು ತಾರಾಗಣವನ್ನು ಅನಾವರಣಗೊಳಿಸಲು ಚಿತ್ರತಂಡ ಯೋಜಿಸಿದೆ. ಒಂದು ಅದ್ಭುತ ಸಿನಿಮೀಯ ಅನುಭವದ ಭರವಸೆಯನ್ನು ಚಿತ್ರತಂಡ ನೀಡಿದೆ. ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ನಿರ್ಮಾಣವಾಗಬೇಕು ಹಾಗೂ ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿರುವ ಪ್ರೇಕ್ಷಕ ವರ್ಗಕ್ಕೆ ಉತ್ತಮ ಸಿನಿಮಾ ಸಿಗುವ ಭರವಸೆ ಇದೆ. ಝೀ5ನ ಒಟಿಟಿ ಕ್ಷೇತ್ರದಲ್ಲಿ ಪ್ರದೀಪ್ ಅವರ ಹಿಂದಿನ ನಾಯಕತ್ವ, ಛಾಯಾಗ್ರಹಣ ಮತ್ತು ಕಥೆ ಹೇಳುವಿಕೆಯಲ್ಲಿ ನಾಗರಾಜ್ ಅವರ ಪ್ರಭಾವ, ಸೃಜನಶೀಲ ಮನಸ್ಸುಗಳನ್ನು ಒಳಗೊಂಡಿರುವ ತಂಡ - ಒಟ್ಟಾರೆ ಉತ್ತಮ ಕನ್ನಡ ಚಿತ್ರ ಪ್ರೇಕ್ಷಕನಿಗೆ ಸಿಗಲಿದೆ ಎಂಬ ಭರವಸೆ 'ಸಕ್ಕತ್ ಸ್ಟುಡಿಯೋ'ದಿಂದ ಮೂಡಿದೆ.

ಇದನ್ನೂ ಓದಿ: ರಾಜನ ಲುಕ್​ನಲ್ಲಿ ಅಭಿನಯ ಚಕ್ರವರ್ತಿ: ಕಿಚ್ಚ 47 ಮೇಕಿಂಗ್ ವಿಡಿಯೋ ವೈರಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.