ETV Bharat / entertainment

'ಸದ್ದು ವಿಚಾರಣೆ ನಡೆಯುತ್ತಿದೆ'...ನ. 25ಕ್ಕೆ ಚಿತ್ರ ಬಿಡುಗಡೆ - saddu vicharane nadeyuttide latest news

ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಇದೇ 25ರಂದು ರಾಜ್ಯದ 75 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

saddu vicharane nadeyuttide movie
ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ
author img

By

Published : Nov 22, 2022, 6:17 PM IST

ಶಿವಮೊಗ್ಗ: ನೈಜ ಘಟನೆಯಿಂದ ಸ್ಫೂರ್ತಿ ಪಡೆದು 'ಸದ್ದು ವಿಚಾರಣೆ ನಡೆಯುತ್ತಿದೆ' ಎಂಬ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಈ ಚಿತ್ರದ ನಿರ್ಮಾಪಕ ಕಂ ನಟ ಮಧುನಂದನ್ ತಿಳಿಸಿದ್ದಾರೆ.

'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರವನ್ನು ಈ ಹಿಂದೆ ನಡೆದ ಘಟನೆಯನ್ನು ಇಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ಸಕಲೇಶಪುರದಲ್ಲಿ ಪ್ರೇಮಿಗಳು ಕಾಣೆಯಾಗಿ ದೊಡ್ಡ ಸುದ್ದಿಯಾಗುತ್ತದೆ. ಮಹಿಳಾ ಪೊಲೀಸ್ ಪೇದೆಯೊಬ್ಬರು ತನ್ನ ಪ್ರೇಮಿಯ ಜೊತೆ ಕಾಡಿನಲ್ಲಿ ಕಾಣೆಯಾಗುತ್ತಾರೆ. ಕಾಣೆಯಾದ ಪ್ರೇಮಿಯನ್ನು ಪೊಲೀಸ್ ಇಲಾಖೆಯು ಹುಡುಕಾಟ ನಡೆಸುವುದೇ ಚಿತ್ರದ ಕಥೆಯಾಗಿದೆ.

ನ.25ಕ್ಕೆ ಸದ್ದು ವಿಚಾರಣೆ ನಡೆಯುತ್ತಿದೆ ಬಿಡುಗಡೆ

ಕಥೆ ಸಾಗುತ್ತಾ ಸಾಗುತ್ತಾ ರೋಚಕ ತಿರುವುವನ್ನು ಪಡೆದುಕೊಳ್ಳುತ್ತದೆ. ಸಿನಿಮಾ ದೃಶ್ಯಗಳನ್ನು ಬೆಂಗಳೂರು, ಮಂಗಳೂರು, ಸಕೇಶಪುರ ಹಾಗೂ ಮೈಸೂರು ಭಾಗದಲ್ಲಿ ಚಿತ್ರೀಕರಿಸಲಾಗಿದೆ. ‌ಎಂ.ಎಂ. ಸಿನಿಮಾಸ್ ಈ ಚಿತ್ರವನ್ನು‌ ನಿರ್ಮಿಸಿದೆ. ಚಿತ್ರಕಥೆ- ನಿರ್ದೇಶನವನ್ನು ಭಾಸ್ಕರ್ ಆರ್ ನಿನಾಸಂ ಮಾಡಿದ್ದಾರೆ. ಕಥೆ ಅಶ್ವಿನಿ ಕೆ.ಎನ್. ಬರೆದಿದ್ದರೆ, ಕ್ಯಾಮರಾ ವರ್ಕ್ ಅನ್ನು ರಾಜ್ ಕಾಂತ್ ಮಾಡಿದ್ದಾರೆ. ಸಂಗೀತವನ್ನು ರವಿ ಬಸ್ರೂರ್ ಅವರ ಸಂಬಂಧಿ ಸಚ್ಚಿನ್ ಬಸ್ರೂರ್ ಮಾಡಿದ್ದಾರೆ. ಸಂಕಲನವನ್ನು ಶಶಿಧರ್ ಪಿ ಮಾಡಿದ್ದಾರೆ.

ಇದನ್ನೂ ಓದಿ: ಕರುನಾಡ ಚಕ್ರವರ್ತಿಯ 'ಘೋಸ್ಟ್' ಮೇಕಿಂಗ್ ವಿಡಿಯೋ ರಿಲೀಸ್​

ತಾರಾಗಣದಲ್ಲಿ ಮಧುನಂದನ್, ರಾಕೇಶ್ ಮಯ್ಯ, ಪಾವನಗೌಡ, ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಹಂಗೀರ್ ಇದ್ದಾರೆ. ಇದೇ‌ 25ಕ್ಕೆ ರಾಜ್ಯದ 75 ಚಿತ್ರಮಂದಿರಗಳಲ್ಲಿ ಸಿನಿಮಾ‌ ಬಿಡುಗಡೆಯಾಗುತ್ತಿದೆ. ಚಿತ್ರ ವೀಕ್ಷಿಸಿ ಯಶಸ್ವಿಗೊಳಿಸಿ ಎಂದು ನಟ ರಾಘು ಶಿವಮೊಗ್ಗ ವಿನಂತಿಸಿಕೊಂಡಿದ್ದಾರೆ. ಈ ವೇಳೆ ಮಧುನಂದನ್, ರಾಕೇಶ್ ಮಯ್ಯ ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.