ETV Bharat / entertainment

’ಸದ್ದು ವಿಚಾರಣೆ ನಡೆಯುತ್ತಿದೆ’ ಅಂತಿದ್ದಾರೆ ನಟಿ ಪಾವನ ಗೌಡ! - Compiled by Shashidhar P

ಕನ್ನಡ ಚಿತ್ರರಂಗದ ನಟಿ ಪಾವನ ಗೌಡ ಮತ್ತು ಯುವ ನಟ ರಾಕೇಶ್ ಮಯ್ಯ ಅಭಿನಯಿಸಿರುವ ' ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರ ನವೆಂಬರ್ 25 ಕ್ಕೆ ಬಿಡುಗಡೆಯಾಗಲಿದೆ.

saddu vicharane nadeyuttide is ready for release
ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ತಂಡ
author img

By

Published : Nov 14, 2022, 7:56 PM IST

ಕನ್ನಡ ಚಿತ್ರರಂಗದ ನಟಿ ಪಾವನ ಗೌಡ ಮತ್ತು ಯುವ ನಟ ರಾಕೇಶ್ ಮಯ್ಯ ಅಭಿನಯಿಸಿರುವ ' ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರ ನವೆಂಬರ್ 25 ಕ್ಕೆ ಬಿಡುಗಡೆಯಾಗಲಿದೆ. ಭಾಸ್ಕರ್ ಆರ್​ ನೀನಾಸಂ ನಿರ್ದೇಶನದ ಈ ಚಿತ್ರ ಆಲ್​ಮೋಸ್ಟ್ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ಹಾಡು ಮತ್ತು ಟ್ರೇಲರ್​ ನೋಡಿದ ಸಿನಿರಸಿಕರಲ್ಲಿ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.

ಈ ಚಿತ್ರ ನೈಜ ಘಟನೆ ಆಧರಿಸಿ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಚಿತ್ರದಲ್ಲಿ ಮಧುನಂದನ್, ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಾಹಂಗೀರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಎಂ.ಸಿನಿಮಾಸ್ ಬ್ಯಾನರ್ ಅಡಿ ಸುರಭಿ ಲಕ್ಷ್ಮಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಕಾಂತ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಪಿ ಸಂಕಲನ ಚಿತ್ರಕ್ಕಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಅಚ್ಯುತ್, " ಭಾಸ್ಕರ್ ನಟನೆ ಮಾಡುತ್ತಾನೆ ಎಂದು ಗೊತ್ತಿತ್ತು. ನಿರ್ದೇಶನ ಮಾಡುತ್ತಾನೆ ಎಂದು ಗೊತ್ತಿರಲಿಲ್ಲ. ನನ್ನ ನಾಟಕಗಳಲ್ಲಿ ಭಾಸ್ಕರ್ ಅಭಿನಯಿಸಿದ್ದಾನೆ. ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾನೆ. ಈ ಚಿತ್ರದಲ್ಲಿ ಇನ್ಸ್​ಪೆಕ್ಟರ್ ಪಾತ್ರ ಎಂದು ಹೇಳಿದಾಗ ನಾನು ಮಾಡುವುದಿಲ್ಲ.

ಚಿತ್ರದಲ್ಲಿರೋ ಕೋಳಿ ಕಳ್ಳರ ಪಾತ್ರ ಕೊಡು. ತುಂಬಾ ಇಂಟ್ರಸ್ಟಿಂಗ್ ಆಗಿದೆ ಎಂದು ಹೇಳಿದ್ದೆ. ಆದರೆ, ಇನ್ಸ್​ಪೆಕ್ಟರ್ ಪಾತ್ರವನ್ನು ನೀವೇ ಮಾಡಬೇಕು ಎಂದು ಆತ ಹೇಳಿದ್ದರಿಂದ ಇನ್ಸ್​ಪೆಕ್ಟರ್ ಪಾತ್ರ ನಿರ್ವಹಿಸಿದ್ದೇನೆ. ಮಧುನಂಧನ್ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ನೋಡಿ, ಹರಸಿ" ಎಂದಿದ್ದಾರೆ.

ಇದನ್ನೂ ಓದಿ:ತಿಮಯ್ಯ ಮತ್ತು ತಿಮ್ಮಯ್ಯ ಚಿತ್ರದಲ್ಲಿ ಅನಂತ್ ನಾಗ್ - ದಿಗಂತ್ ಕಮಾಲ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.