ETV Bharat / entertainment

ಸಿನಿಮಾ ಹೊರತಾಗಿ ಯಾವುದೂ ಕೂಡ ಯಾರ ವ್ಯವಹಾರವೂ ಅಲ್ಲ: ಡೇಟಿಂಗ್​ ವದಂತಿಗೆ ಹೃತಿಕ್​ ರೋಷನ್ ಗೆಳತಿಯ ಪ್ರತಿಕ್ರಿಯೆ - Hrithik Roshan

Hrithik Roshan Saba Azad: ಡೇಟಿಂಗ್​ ವದಂತಿಗಳ ಕುರಿತು ಹೃತಿಕ್​ ರೋಷನ್ ಗೆಳತಿ ಸಬಾ ಅಜಾದ್​​ ರಿಯಾಕ್ಷನ್ ಕೊಟ್ಟಿದ್ದಾರೆ.

Saba Azad reacts on dating rumors with hrithik roshan
ಡೇಟಿಂಗ್​ ವದಂತಿಗೆ ಹೃತಿಕ್​ ರೋಷನ್ ಗೆಳತಿ ಸಬಾ ಅಜಾದ್​​ ರಿಯಾಕ್ಷನ್
author img

By ETV Bharat Karnataka Team

Published : Aug 24, 2023, 5:46 PM IST

ನಟ ಹೃತಿಕ್​ ರೋಷನ್ ಮತ್ತು ನಟಿ ಸಬಾ ಅಜಾದ್​​ ಜನಪ್ರಿಯ ಬಾಲಿವುಡ್​ ಜೋಡಿ. ಇವರು ಡೇಟಿಂಗ್​​ನಲ್ಲಿದ್ದಾರೆ ಎಂಬ ವದಂತಿಗಳಿವೆ. ಕಳೆದ ವರ್ಷ ಡಿನ್ನರ್​ ಡೇಟ್​ನಲ್ಲಿ ಕಾಣಿಸಿಕೊಂಡ ಬಳಿಕ ಈ ಜೋಡಿ ಕುರಿತ ಅಂತೆಕಂತೆಗಳು ಹರಿದಾಡುತ್ತಿವೆ. ಡಿನ್ನರ್​ ಡೇಟ್ ಬಳಿಕ ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೊಹರ್​ ಅವರ 50ನೇ ಬರ್ತ್ ಡೇ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ನಂತರ ಇಬ್ಬರೂ ಹಲವು ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡು ಸದ್ದು ಮಾಡಿದರು.

ಹೃತಿಕ್ ಸಬಾ ಡೇಟಿಂಗ್​ ವದಂತಿ: ಇತ್ತೀಚೆಗೆ ಈ ರೂಮರ್​ ಲವ್ ಬರ್ಡ್ಸ್ ​​ಅರ್ಜೆಂಟಿನಾ ಪ್ರವಾಸ ಕೈಗೊಳ್ಳುವ ಮೂಲಕ ನೆಟ್ಟಿಗರ ಕುತೂಹಲ ಹೆಚ್ಚಿಸಿದ್ದಾರೆ. ಹೃತಿಕ್​ ರೋಷನ್ ಮತ್ತು ಸಬಾ ಅಜಾದ್​​ ಸಂಬಂಧದ ಸುತ್ತ ಚರ್ಚೆ ನಡೆಯುತ್ತಿದ್ದು, ಅಂತಿಮವಾಗಿ ಈ ಬಗ್ಗೆ ನಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"Anything else is nobody's business": ಇತ್ತೀಚಿನ ಸಂದರ್ಶನದಲ್ಲಿ ನಟಿ ಸಬಾ ಅಜಾದ್, ವೈಯಕ್ತಿಕ ಜೀವನದ ಕುರಿತು ಹರಡುತ್ತಿರುವ ಊಹಾಪೋಹಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವ್ಯಕ್ತಿಯ ವೈಯಕ್ತಿಕ, ಪ್ರೇಮ ಜೀವನದ ಬಗೆಗಿನ ನಿರಂತರ ವದಂತಿಗಳು ತೊಂದರೆ ಕೊಡಬಹುದೆಂದು ತಿಳಿಸಿ, ತಮ್ಮ ಕೆಲಸದ ಬದ್ಧತೆ ಬಗ್ಗೆ ಒತ್ತಿ ಹೇಳಿದರು. ವದಂತಿಗಳು ನನ್ನ ಜೀವನದ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಜೀವನ ಒಂದೇ ಒಂದು ವಿಷಯವನ್ನು ಸಾರ್ವಜನಿಕವಾಗಿಡಲು ಬಯಸುತ್ತೇನೆ. ಅದು ನನ್ನ ಸಿನಿಮಾ ಕೆಲಸ. ಬೇರೆ ಯಾವುದು ಕೂಡ ಯಾರ ವ್ಯವಹಾರವೂ ಅಲ್ಲ ಎಂದು ತಿಳಿಸಿದ್ದಾರೆ. ನಟಿಯ ಈ ಆಲೋಚನೆ, ಅವರು ಕೆಲಸದ ಮೇಲಿಟ್ಟಿರುವ ಬದ್ಧತೆಯನ್ನು ತೋರಿಸುತ್ತದೆ ಮತ್ತು ಜನರ ದೃಷ್ಟಿಕೋನಗಳಿಂದ ಪ್ರಭಾವಿತರಾಗದಂತೆ ನಿರ್ಧಾರ ಮಾಡಿಕೊಂಡಂತೆ ತೋರಿಸುತ್ತಿದೆ.

ಇದನ್ನೂ ಓದಿ: ಅನಿರುದ್ಧ್‌ ಜತ್ಕರ್ ಭರ್ಜರಿ ಅಡುಗೆ.. 'Chef ಚಿದಂಬರ'ನಿಗೆ ಅನುಭವಿ Chefಗಳಿಂದ ತರಬೇತಿ

ಹೃತಿಕ್​ ರೋಷನ್ ಮತ್ತು ಸಬಾ ಅಜಾದ್​​ ಈ ತಿಂಗಳ ಆರಂಭದಲ್ಲಿ ಅರ್ಜೆಂಟಿನಾದ ಬ್ಯೂನಸ್​ ಐರಿಸ್​ಗೆ ಪ್ರವಾಸ ಕೈಗೊಂಡಿದ್ದರು. ಗೆಳೆಯ ಹೃತಿಕ್​ ಜೊತೆಗಿನ ಆತ್ಮೀಯ ಫೋಟೋವನ್ನು ಶೇರ್ ಮಾಡಿದ್ದರು. ನಟಿ ಅಪ್​ಲೋಡ್​ ಮಾಡಿದ್ದ ಒಂದು ಫೋಟೋದಲ್ಲಿ, ಇಬ್ಬರೂ ಚಳಿಗಾಲದ ಉಡುಗೆ ತೊಟ್ಟು ರೆಸ್ಟೋರೆಂಟ್​ ಹೊರಗೆ ನಿಂತಿದ್ದಾರೆ. ಇನ್ನೊಂದು ಫೋಟೋದಲ್ಲಿ ಕಾಫಿ ಶಾಪ್​ನಲ್ಲಿ ಹೃತಿಕ್​ ಸಿನಿ ತಿನಿಸನ್ನು ಆನಂದಿಸುತ್ತಿರುವ ಚಿತ್ರವಾಗಿದೆ. ಇತ್ತೀಚೆಗೆ ಮುಂಬೈ ಏರ್​ಪೋರ್ಟ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ವಿಡಿಯೋವನ್ನು ಪಾಪರಾಜಿಯೋರ್ವರು ಶೇರ್ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡಿತ್ತು.

ಇದನ್ನೂ ಓದಿ: Deshmukh family: ವಿಕ್ರಮ್​ ಚಂದ್ರನನ್ನು ಸ್ಪರ್ಶಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ರಿತೇಶ್​ ದೇಶ್​ಮುಖ್​ ಜೆನಿಲಿಯಾ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.