ನವದೆಹಲಿ: 'ಯೆ ಹೈ ಮೊಹಬ್ಬತೆನ್' ಖ್ಯಾತಿಯ ನಟಿ ರುಹಾನಿಕಾ ಧವನ್ಗೆ ಇನ್ನು 15 ವರ್ಷ ಅಷ್ಟೇ. ಈಕೆ ಇತ್ತೀಚೆಗೆ ಮುಂಬೈನಲ್ಲಿ ಐಷಾರಾಮಿ ಮನೆ ಕೊಂಡಿದ್ದು, ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆಕೆಯ ಮನೆಯ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನ ಹರಿಸಿದ್ದಾರೆ.
- " class="align-text-top noRightClick twitterSection" data="
">
ಪೋಷಕರಿಗೆ ಧನ್ಯವಾದ ತಿಳಿಸಿ ಈ ಕುರಿತು ಸುದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ. "ವಾಹೇ ಗುರೂಜಿ ಮತ್ತು ಪೋಷಕರ ಆಶೀರ್ವಾದದಿಂದ ಹೊಸ ಆರಂಭ ಮಾಡಲಾಗಿದೆ. ನನ್ನ ಹೃದಯ ತುಂಬಿ ಬಂದಿದ್ದು, ನಾನು ತುಂಬಾ ಸಂತಸಗೊಂಡಿದ್ದೇನೆ. ನಾನೇ ಸ್ವಂತಃ ಮನೆಗೊಳ್ಳಬೇಕು ಎಂಬ ನನ್ನ ಕನಸು ನನಸಾಗಿದೆ. ಇದು ನನಗೆ ಅತ್ಯಂತ ದೊಡ್ಡ ವಿಷಯವಾಗಿದೆ. ಈ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲು ಸಾಧ್ಯವಿಲ್ಲ. ನಾನು ಮತ್ತು ನಮ್ಮ ಪೋಷಕರು ನನ್ನ ಕನಸನ್ನು ನನಸು ಮಾಡಲು ಸಹಾಯ ಮಾಡಿದ ಅವಕಾಶವನ್ನು ನೀಡಿ ಪ್ಲಾರ್ಟ್ ಫಾರ್ಮ್ ನೀಡಿದ್ದಕ್ಕೆ ಅನಂತ ಧನ್ಯವಾದಗಳು".
"ನನ್ನ ಪೋಷಕರ ಮಾರ್ಗದರ್ಶನವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಅವರನ್ನು ಪಡೆದ ನಾನು ಧನ್ಯ. ವಿಶೇಷವಾಗಿ ನನ್ನ ತಾಯಿ ಒಂದೊಂದು ರೂಪಾಯಿ ಕೂಡಾ ಅದನ್ನು ದುಪ್ಪಟ್ಟು ಉಳಿಕೆ ಮಾಡಿದ್ದಾಳೆ" ಎಂದು ತಾಯಿಯ ಕುರಿತು ಭಾವಾನಾತ್ಮಕವಾಗಿ ತಿಳಿಸಿದ್ದಾರೆ.
ಕಡೆಯದಾಗಿ ತನ್ನ ಅಭಿಮಾನಿಗಳಿಗೆ ಪ್ರೇರಣಾದಾಯಕ ಮಾತು ಬರೆದಿರುವ ರುಹಾನಿಕಾ, "ಇದು ಕೇವಲ ಆರಂಭ. ನನ್ನ ಈಗಾಗಲೇ ದೊಡ್ಡ ಕನಸು ಕಾಣುತ್ತಿದ್ದೇನೆ. ನನ್ನ ಕನಸನ್ನು ಬೆನ್ನಟ್ಟುತ್ತೇನೆ ಮತ್ತು ಇದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಹಾಗಾಗಿ ನಾನು ಎಲ್ಲವನ್ನೂ ಸಾಧಿಸುತ್ತೇನೆ. ಕನಸನ್ನು ಕಾಣಿ, ಅದರ ಅನುಸಾರ ನಡೆಯಿರಿ ಅದು ನಿಜವಾಗುತ್ತದೆ" ಎಂದಿದ್ದಾರೆ.
2012ರಲ್ಲಿ ಮಿ. ಕೌಶಿಕ್ ಕಿ ಪಂಚ್ ಬಹುನೆ ಸೋಪ್ ಒಪೆರಾ ಮೂಲಕ ರುಹಾನಿಕ ವೃತ್ತಿ ಆರಂಭಿಸಿದರು. ಬಳಿಕ ಎಕ್ತಾ ಕಪೂರ್ ಅವರ ರೋಮಾನ್ಸ್- ಡ್ರಾಮಾ ಧಾರಾವಾಹಿ 'ಯೆ ಹೇ ಮೊಹಬ್ಬತೆನ್'ನಲ್ಲಿ ನಟಿಸಿದರು. ಜೊತೆಗೆ ಸಲ್ಮಾನ್ ಖಾನ್ ಅಭಿನಯದ 'ಜೈ ಹೋ'ನಲ್ಲಿ ಕೂಡ ನಟಿಸಿ ಗಮನ ಸೆಳೆದಿದ್ದಳು. 'ಗಾಯಲ್' ನಲ್ಲೂ ಈಕೆ ಬಣ್ಣ ಹಚ್ಚಿದ್ದಾಳೆ.
ಇದನ್ನೂ ಓದಿ: 2023ರಲ್ಲಿ ಕಂಬ್ಯಾಕ್ ಮಾಡಲಿದ್ದಾರೆ ಬಾಲಿವುಡ್ನ ಈ ತಾರೆಗಳು