ಹೈದರಾಬಾದ್ (ತೆಲಂಗಾಣ): ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆಗೆ ನಾಮಿನೇಟ್ ಆಗಿದೆ. ಈಗಾಗಲೇ ಇದೇ ವಿಭಾಗದಲ್ಲಿ ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಗೆದ್ದಿದ್ದು, ಎಂಎಂ ಕೀರವಾಣಿ ಇದರ ಸಂಗೀತ ಸಂಯೋಜಕರಾಗಿದ್ದಾರೆ.
ಮಂಗಳವಾರ 95ನೇ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ನಾಟು ನಾಟು ಹಾಡು ಸಹ ಸೇರಿದೆ. ನಟರಾದ ರಿಜ್ ಅಹ್ಮದ್ ಮತ್ತು ಅಲಿಸನ್ ವಿಲಿಯಮ್ಸ್ ಆಸ್ಕರ್ ನಾಮನಿರ್ದೇಶನಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಮಾರ್ಚ್ 12ರಂದು ಲಾಸ್ ಏಂಜಲೀಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
-
This year's Original Song nominees are music to our ears. #Oscars #Oscars95 pic.twitter.com/peKQmFD9Uh
— The Academy (@TheAcademy) January 24, 2023 " class="align-text-top noRightClick twitterSection" data="
">This year's Original Song nominees are music to our ears. #Oscars #Oscars95 pic.twitter.com/peKQmFD9Uh
— The Academy (@TheAcademy) January 24, 2023This year's Original Song nominees are music to our ears. #Oscars #Oscars95 pic.twitter.com/peKQmFD9Uh
— The Academy (@TheAcademy) January 24, 2023
ಆರ್‌ಆರ್‌ಆರ್ ಚಿತ್ರವು ಸ್ವಾತಂತ್ರ್ಯ ಹೋರಾಟದ ಕಾಲ್ಪನಿಕ ಕಥೆಯನ್ನು ಹೊಂದಿದೆ. ಸ್ಟಾರ್ ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್‌ಟಿಆರ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ಮತ್ತು ಬಾಲಿವುಡ್ ನಟಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಾಟು ನಾಟು ಹಾಡಿಗೆ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಚಂದ್ರಬೋಸ್ ರಚಿಸಿದ್ದು, ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಅತ್ಯುತ್ತಮ ಮೂಲ ಗೀತೆಗೆ ಸಾಲಿನಲ್ಲಿ ಇತರ ಹಾಡುಗಳು: ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಜೊತೆಗೆ ಇತರ ನಾಲ್ಕು ಹಾಡುಗಳು ನಾಮನಿರ್ದೇಶನಗೊಂಡಿವೆ. ಟೆಲ್ ಇಟ್ ಲೈಕ್ ಎ ವುಮನ್ ಚಿತ್ರದ ಅಪ್ಲಾಸ್ ಹಾಡು ಮತ್ತು ಟಾಪ್ ಗನ್: ಮ್ಯಾವೇರಿಕ್ ಚಿತ್ರದ ಹೊಲ್ಡ್ ಮೈ ಹ್ಯಾಂಡ್ ಹಾಡು ಹಾಗೂ ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವೆರ್ ಚಿತ್ರದ ಲಿಫ್ಟ್ ಮಿ ಅಪ್ ಹಾಡು ಮತ್ತು ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ ಚಿತ್ರದ ದಿಸ್ ಇಸ್ ಎ ಲೈಫ್ ಹಾಡು ಕೂಡ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ.
ಭಾರತದ ಎರಡು ಕಿರುಚಿತ್ರಗಳು ಸಹ ನಾಮಿನೇಟ್: ಈ ಬಾರಿ ಆಸ್ಕರ್ ಪ್ರಶಸ್ತಿಗೆ ನಾಟು ನಾಟು ಹಾಡಿನೊಂದಿಗೆ ಆಲ್ ದಟ್ ಬ್ರೀಥ್ಸ್ ಮತ್ತು ದಿ ಎಲಿಫೆಂಟ್ ವಿಸ್ಪರರ್ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿವೆ. ದಿ ಎಲಿಫೆಂಟ್ ವಿಸ್ಪರರ್ ಕಿರುಚಿತ್ರವು ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರೆ, ಆಲ್ ದಟ್ ಬ್ರೀಥ್ಸ್ ಕಿರುಚಿತ್ರವು ಸಾಕ್ಷ್ಯಚಿತ್ರ ಪೀಚರ್ ವಿಭಾಗದಲ್ಲಿ ನಾಮನಿರ್ದೇಶನಗೊಂಡು ಆಸ್ಕರ್ ರೇಸ್‌ನಲ್ಲಿ ಸ್ಥಾನ ಪಡೆದಿದೆ.
ದಿ ಎಲಿಫೆಂಟ್ ವಿಸ್ಪರರ್ ಕಿರುಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವಿಸ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಸಿಖ್ಯ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್ ಅಡಿಯಲ್ಲಿ ಗುನೀತ್ ಮೊಂಗಾ ಮತ್ತು ಅಚಿನ್ ಜೈನ್ ನಿರ್ಮಿಸಿದ್ದಾರೆ. ಕಳೆದ ಡಿಸೆಂಬರ್ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಇದು ತೆರೆಗೆ ಬಂದಿತ್ತು. ಶೌನಕ್ ಸೇನ್ ಅವರ ಆಲ್ ದಟ್ ಬ್ರೀಥ್ಸ್ ಕಿರುಚಿತ್ರ ಕೇನ್ಸ್ 2022ರಲ್ಲಿ ಗೋಲ್ಡನ್ ಐ ಪ್ರಶಸ್ತಿಯನ್ನು ಗೆದ್ದಿತ್ತು. ಈಗ ಆಸ್ಕರ್ ಪ್ರಶಸ್ತಿಯ ಭರವಸೆಯನ್ನೂ ಈ ಕಿರುಚಿತ್ರ ಮೂಡಿಸಿದೆ.
ಈ ಹಿಂದೆ ಆಸ್ಕರ್ ರೇಸ್ನಲ್ಲಿದ್ದ ಭಾರತೀಯ ಚಿತ್ರಗಳು: ಈ ಹಿಂದೆ ಭಾರತೀಯ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವು. ಮದರ್ ಇಂಡಿಯಾ, ಸಲಾಂ ಬಾಂಬೆ ಮತ್ತು ಲಗಾನ್ ಚಿತ್ರವು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರದ ವಿಭಾಗದಲ್ಲಿ ಆಸ್ಕರ್ಗೆ ನಾಮನಿರ್ದೇಶನಗೊಂಡಿತ್ತು. ಇದೀಗ ನಾಟು ನಾಟು ಹಾಡು, ಆಲ್ ದಟ್ ಬ್ರೀಥ್ಸ್ ಮತ್ತು ದಿ ಎಲಿಫೆಂಟ್ ವಿಸ್ಪರರ್ ಕಿರುಚಿತ್ರಗಳು ಆಸ್ಕರ್ ರೇಸ್ಗೆ ಹೋಗಿದೆ.
ಈ ಹಿಂದೆ ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಗೆದ್ದಿತ್ತು. ಅತ್ಯುತ್ತಮ ವಸ್ತ್ರ ವಿನ್ಯಾಸ ವಿಭಾಗದಲ್ಲಿ ಗೆದ್ದ ಭಾನು ಅಥೈಯಾ, ಎಆರ್ ರೆಹಮಾನ್, ಗುಲ್ಜಾರ್ ಮತ್ತು ಸೌಂಡ್ ಇಂಜಿನಿಯರ್ ರೆಸುಲ್ ಪೂಕುಟ್ಟಿ ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಖ್ಯಾತ ಗೀತರಚನೆಕಾರ ಗುಲ್ಜಾರ್ ಜೊತೆಗೆ 'ಜೈ ಹೋ' ಹಾಡಿಗಾಗಿ ಅತ್ಯುತ್ತಮ ಮೂಲ ಸ್ಕೋರ್ ಮತ್ತು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಎಆರ್ ರೆಹಮಾನ್ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಭಾರತವು ಆಸ್ಕರ್ ಪ್ರಶಸ್ತಿಯನ್ನು ಗೆದ್ದು 12 ವರ್ಷಗಳು ಕಳೆದಿದೆ.
ಇದನ್ನೂ ಓದಿ: ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ!