ಭಾರತದ ಹಿರಿಯ ಚಲನಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದ 'RRR' ಚಿತ್ರ ಇನ್ನೂ ತನ್ನ ಕ್ರೇಜ್ ಉಳಿಸಿಕೊಂಡಿದೆ. ಚಿತ್ರದ ಸೂಪರ್‌ಹಿಟ್ ಹಾಡು ನಾಟು ನಾಟು ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಚಿತ್ರದ ಜನಪ್ರಿಯತೆ ಸಾಗರದಾಚೆಗೂ ಹಬ್ಬಿದೆ. ಆಸ್ಕರ್ 2023 ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೊದಲು ಕೂಡ ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದೀಗ 'ಆರ್‌ಆರ್‌ಆರ್' ಚಿತ್ರದ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
-
#RRRMovie records 1 Million+ footfall in 164 Days and continues its rocking run ❤️ 🙌🏻 #RRRinJapan. pic.twitter.com/1nKvXbXUTN
— RRR Movie (@RRRMovie) April 4, 2023 " class="align-text-top noRightClick twitterSection" data="
">#RRRMovie records 1 Million+ footfall in 164 Days and continues its rocking run ❤️ 🙌🏻 #RRRinJapan. pic.twitter.com/1nKvXbXUTN
— RRR Movie (@RRRMovie) April 4, 2023#RRRMovie records 1 Million+ footfall in 164 Days and continues its rocking run ❤️ 🙌🏻 #RRRinJapan. pic.twitter.com/1nKvXbXUTN
— RRR Movie (@RRRMovie) April 4, 2023
ಜಪಾನ್‌ನಲ್ಲಿ ಆರ್ಆರ್ಅರ್ ದಾಖಲೆ: ಹೌದು, ಈ ಸೂಪರ್ ಹಿಟ್ ಸಿನಿಮಾ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಕಳೆದ ಆರು ತಿಂಗಳಿನಿಂದ ಜಪಾನ್‌ನಲ್ಲಿ ಈ ಚಲನಚಿತ್ರವು ನಿರಂತರವಾಗಿ ಓಡುತ್ತಿದೆ. ಜಪಾನ್‌ನಲ್ಲಿ ದಶಲಕ್ಷಕ್ಕೂ ಹೆಚ್ಚು ವೀಕ್ಷಕರು ಸಿನಿಮಾ ವೀಕ್ಷಿಸಿದ್ದಾರೆ. ಆರ್‌ಆರ್‌ಆರ್ ಚಿತ್ರ ತಯಾರಕರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜಪಾನ್‌ನಲ್ಲಿ ಈ ಚಲನಚಿತ್ರವು 209 ಪರದೆಗಳಲ್ಲಿ ಮತ್ತು 31 IMAX ಪರದೆಗಳಲ್ಲಿ 2022ರ ಅಕ್ಟೋಬರ್ನಲ್ಲಿ ಬಿಡುಗಡೆ ಆಗಿತ್ತು. ಜಪಾನ್‌ನಲ್ಲಿ ಇಷ್ಟೊಂದು ಜನಪ್ರಿಯತೆ ಸಂಪಾದಿಸಿದ ಮೊದಲ ಭಾರತೀಯ ಸಿನಿಮಾ ಇದಾಗಿದೆ. ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರ ಎಂಬ ಹೆಗ್ಗಳಿಕೆಯನ್ನೂ ಸಂಪಾದಿಸಿದೆ.
-
Showered with 1 Million hugs from japanese fans.. Arigato Guzaimasu.. #RRRinJapan
— rajamouli ss (@ssrajamouli) April 4, 2023 " class="align-text-top noRightClick twitterSection" data="
日本のファンから100万回以上ハグをいただきました。ありがとうございます。
🥹🥹🥹🤗🤗🤗🙏🏻🙏🏻🙏🏻
">Showered with 1 Million hugs from japanese fans.. Arigato Guzaimasu.. #RRRinJapan
— rajamouli ss (@ssrajamouli) April 4, 2023
日本のファンから100万回以上ハグをいただきました。ありがとうございます。
🥹🥹🥹🤗🤗🤗🙏🏻🙏🏻🙏🏻Showered with 1 Million hugs from japanese fans.. Arigato Guzaimasu.. #RRRinJapan
— rajamouli ss (@ssrajamouli) April 4, 2023
日本のファンから100万回以上ハグをいただきました。ありがとうございます。
🥹🥹🥹🤗🤗🤗🙏🏻🙏🏻🙏🏻
ಆರ್‌ಆರ್‌ಆರ್ ಟ್ವೀಟ್: ಆರ್‌ಆರ್‌ಆರ್ ತಯಾರಕರೂ ಕೂಡ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 164 ದಿನಗಳಲ್ಲಿ 1 ಮಿಲಿಯನ್ ವೀಕ್ಷಕರು ಚಿತ್ರ ವೀಕ್ಷಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಚಿತ್ರಮಂದಿರಗಳತ್ತ ಲಗ್ಗೆಯಿಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಎಸ್‌ಎಸ್ ರಾಜಮೌಳಿ ಹೇಳಿದ್ದೇನು? 'ಆರ್‌ಆರ್‌ಆರ್' ಚಿತ್ರ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಿದ ನಂತರ ಎಸ್‌ಎಸ್ ರಾಜಮೌಳಿ ತಮ್ಮ ಸಂತೋಷವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್‌ನಲ್ಲಿ ಹಿರಿಯ ನಿರ್ದೇಶಕರು, 'ಜಪಾನ್ ಅಭಿಮಾನಿಗಳಿಂದ 1 ಮಿಲಿಯನ್ ಅಪ್ಪುಗೆಗಳು ಸಿಕ್ಕಿವೆ, ಧನ್ಯವಾದಗಳು' ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ 10 ವರ್ಷಗಳ ಬಳಿಕ ಗರ್ಭಧಾರಣೆ: ಕಾರಣ ಬಹಿರಂಗಪಡಿಸಿದ ರಾಮ್ ಚರಣ್ ಪತ್ನಿ
ವರದಿಗಳ ಪ್ರಕಾರ, ಜಪಾನ್‌ನಲ್ಲಿ ಈ ಸೂಪರ್ ಹಿಟ್ ಆರ್‌ಆರ್‌ಆರ್ ತೆರೆಕಂಡು 164 ದಿನಗಳು ಕಳೆದಿವೆ. ಅಲ್ಲಿ ಚಿತ್ರ 80 ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದೆ. ಚಿತ್ರ 100 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆ ಇದೆ. ಜಪಾನ್‌ನ ಥಿಯೇಟರ್‌ಗಳಲ್ಲಿ 100 ದಿನಗಳನ್ನು ಪೂರೈಸಿದ ಮೊದಲ ಭಾರತೀಯ ಚಿತ್ರ 'RRR' ಎಂಬುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ.
ಇದನ್ನೂ ಓದಿ: 'ರೈನ್ಬೋ' ಸಮಂತಾ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ.. ಶಾಕುಂತಲಂ ತಾರೆಯ ಅಭಿಮಾನಿಗಳ ಅಸಮಾಧಾನ
ಭಾರತೀಯ ಚಿತ್ರೋದ್ಯಮ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ವಿಶ್ವ ಶ್ರೇಷ್ಠ ಪ್ರಶಸ್ತಿ ಪುರಸ್ಕಾರ ವಿಚಾರದಲ್ಲಿ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಅಭೂತಪೂರ್ವ ಯಶಸ್ಸು ಕಂಡಿದೆ. ಆರ್‌ಆರ್‌ಆರ್ ಚಿತ್ರದ ಸೂಪರ್ ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಹಾಗೆಯೇ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ, ಗುನೀತ್ ಮೋಂಗಾ ನಿರ್ಮಾಣದಲ್ಲಿ ಮೂಡಿಬಂದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ.