ETV Bharat / entertainment

ಆಸ್ಕರ್​​ ಗೆದ್ದ ನಾಟು ನಾಟು: ಗೀತೆ ರಚನೆಕಾರ ಚಂದ್ರಬೋಸ್ ಎಕ್ಸ್​ಕ್ಲೂಸಿವ್ ಸಂದರ್ಶನ ಇಲ್ಲಿದೆ - RRR

ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 19 ತಿಂಗಳು ತಾಳ್ಮೆ, ಪರಿಶ್ರಮದಲ್ಲಿ ಈ ಹಾಡು ಬರೆದ ಗೀತೆ ರಚನೆಕಾರ ಚಂದ್ರಬೋಸ್ ಅವರ ವಿಶೇಷ ಸಂದರ್ಶನ ಇಲ್ಲಿದೆ.

Chandra bose Exclusive interview
ಚಂದ್ರಬೋಸ್ ಎಕ್ಸ್​ಕ್ಲೂಸಿವ್ ಸಂದರ್ಶನ
author img

By

Published : Mar 14, 2023, 4:19 PM IST

Updated : Mar 14, 2023, 4:33 PM IST

ನಿರೀಕ್ಷೆಯಂತೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಪಡೆದುಕೊಂಡು, ಭಾರತವನ್ನು ಸಂಭ್ರಮದ ಅಲೆಯಲ್ಲಿ ತೇಲಿಸಿದೆ. ಎರಡೂವರೆ ದಶಕಗಳಿಂದ ಸಿನಿ ಜಗತ್ತಿನಲ್ಲಿ ಪಯಣಿಸುತ್ತಿರುವ ಚಂದ್ರಬೋಸ್ ಸಹಸ್ರಾರು ಹಾಡುಗಳನ್ನು ಕೇಳುಗರಿಗೆ ತಲುಪಿಸಿದ್ದಾರೆ. ಆರ್‌ಆರ್‌ಆರ್‌ ಚಿತ್ರದಲ್ಲಿನ ಸೂಪರ್​ ಹಿಟ್ ನಾಟು ನಾಟು ಹಾಡಿನ ಮೂಲಕ ಅವರ ಹೆಸರು ವಿಶ್ವಾದ್ಯಂತ ಪ್ರಸಿದ್ಧವಾಯಿತು. ಆಸ್ಕರ್ ಪ್ರಶಸ್ತಿ ಸ್ವೀಕರಿಸಿರುವ ಚಂದ್ರಬೋಸ್ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆಸ್ಕರ್ ವೇದಿಕೆಯನ್ನೇರಿದಾಗ ನಿಮಗೆ ಹೇಗನಿಸಿತು? ಭಾರತದ ಕೀರ್ತಿ ಮತ್ತು ತೆಲುಗು ಸಾಹಿತ್ಯದ ಗೌರವವನ್ನು ಕೈಯಲ್ಲಿಟ್ಟುಕೊಂಡಂತೆ ಭಾಸವಾಯಿತು. ಆ ಕ್ಷಣಗಳು ವರ್ಣನಾತೀತ. ಗೋಲ್ಡನ್ ಗ್ಲೋಬ್ ಸೇರಿದಂತೆ ಮತ್ತಿತರ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಾಗ ಆಸ್ಕರ್ ಕೂಡ ಖಚಿತ ಎಂಬ ಭರವಸೆ ಇತ್ತು. ಅದು ಸಾಕಾರಗೊಂಡ ಆ ಕ್ಷಣ ಭಾವನಾತ್ಮಕ ಸಮಯ ಎಂದರು.

ಎಂದಾದರೂ ಆಸ್ಕರ್ ಕನಸು ಕಂಡಿದ್ರಾ? ನನಗೆ ಆಸ್ಕರ್ ಬಗ್ಗೆ ಯಾವುದೇ ಐಡಿಯಾ ಇರಲಿಲ್ಲ. ಆದರೆ, ರಾಷ್ಟ್ರ ಪ್ರಶಸ್ತಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆ. ಒಮ್ಮೆಯಾದರೂ ರಾಷ್ಟ್ರ ಪ್ರಶಸ್ತಿ ಪಡೆಯಬೇಕೆಂಬುದು ನನ್ನ ಜೀವನದ ಗುರಿ ಮತ್ತು ಕನಸಾಗಿತ್ತು. ಆಸ್ಕರ್​​ ಸಾಧಿಸುವ ಮೊದಲು ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಯಿತು. ಗೋಲ್ಡನ್ ಗ್ಲೋಬ್, ಕ್ರಿಟಿಕ್ಸ್ ಚಾಯ್ಸ್, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ನಂತರ ಆಸ್ಕರ್ ಪ್ರಶಸ್ತಿ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಆಸ್ಕರ್‌ ಸಿಕ್ಕಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ಬಾರಿ ಸಾಹಿತ್ಯದ ಜೊತೆಗೆ ತಾಳ್ಮೆಗೂ ಸಿಕ್ಕ ಪ್ರಶಸ್ತಿ ಎಂದು ಪರಿಗಣಿಸಿದ್ದೇನೆ. ನನ್ನ 27 ವರ್ಷಗಳ ಬರವಣಿಗೆಯ ಪಯಣದಲ್ಲಿ, 19 ತಿಂಗಳ ಸಮಯದಲ್ಲಿ ನಾನು ಯಾವ ಹಾಡನ್ನು ಬರೆದಿಲ್ಲ. ಯಾವುದೇ ಹಾಡನ್ನು ನಾಲ್ಕೈದು ದಿನಗಳಲ್ಲಿ ಮುಗಿಸಬೇಕು. ಬಹಳ ಎಂದರೆ ಒಂದು ತಿಂಗಳು. ಆದರೆ ನಾಟು ನಾಟು ಹಾಡನ್ನು ಪೂರ್ಣಗೊಳಿಸಲು 19 ತಿಂಗಳು ಬೇಕಾಯಿತು. ತಾಳ್ಮೆ ಕಳೆದುಕೊಳ್ಳದೇ ಕುಳಿತು ಪ್ರತೀ ಪದವನ್ನೂ ಬಹಳ ಜಾಗರೂಕತೆಯಿಂದ ಬರೆದೆ. ಹಾಗಾಗಿ ಸಾಹಿತ್ಯದ ಜೊತೆಗೆ ತಾಳ್ಮೆಗೂ ಈ ಪ್ರಶಸ್ತಿ ಸಿಕ್ಕಂತಾಗಿದೆ ಎಂದು ತಿಳಿಸಿದರು.

Chandra bose Exclusive interview
ಸಂಗೀತ ಸಂಯೋಜಕ ಎಂಎಂ ಕೀರವಾಣಿ - ಗೀತೆ ರಚನೆಕಾರ ಚಂದ್ರಬೋಸ್

ಭಾಷೆ ಬಗ್ಗೆ ಅಭಿಪ್ರಾಯವೇನು?: ಭಾರತೀಯ ಚಲನಚಿತ್ರಗಳಲ್ಲಿ ಕಾಣಸಿಗುವ ಸನ್ನಿವೇಶಗಳು, ದೃಶ್ಯಗಳು ಮತ್ತು ಭಾವನೆಗಳು ಬೇರೆಲ್ಲೂ ಲಭ್ಯವಿಲ್ಲ ಎಂದು ತೋರುತ್ತದೆ. ಹಾಗಾಗಿಯೇ ನಮ್ಮ ಸಿನಿಮಾಗಳಲ್ಲಿ ಹಲವು ರೀತಿಯ ಹಾಡುಗಳು ಇರುತ್ತವೆ. ತೆಲುಗಿನಲ್ಲಿ ತೆಗೆದುಕೊಂಡರೆ, ನಾನು ಅನೇಕ ಸಂದರ್ಭಕ್ಕೆ ತಕ್ಕ ಹಾಡುಗಳನ್ನು ಬರೆದಿದ್ದೇನೆ. ಸ್ಫೂರ್ತಿ, ಭಕ್ತಿ, ಪ್ರೀತಿ, ನಿರಾಶೆ, ವಿರಹ, ಪ್ರಣಯ, ಗಲಭೆ, ಭಾಷೆ, ಸಂಸ್ಕೃತಿ, ಹಾಸ್ಯ ಈ ಎಲ್ಲಾ ಸಂದರ್ಭಗಳಿಗೂ ನಾನು ಗೀತೆ ಬರೆದಿದ್ದೇನೆ. ನಾವು ಈ ಮಟ್ಟಕ್ಕೆ ಬರಲು ಸಮಯ ತೆಗೆದುಕೊಂಡಿದ್ದೇನೆ ಎಂದರು.

ಇದನ್ನೂ ಓದಿ: ಎಸ್​​ಆರ್​ಕೆ ಅಪ್ಪುಗೆ ನಿರೀಕ್ಷೆಯಲ್ಲಿ ಗುನೀತ್ ಮೊಂಗಾ.. ಪಠಾಣ್​ ನಟನಿಗೆ ಧನ್ಯವಾದ ಅರ್ಪಿಸಿದ ರಾಜಮೌಳಿ

ಎಲ್ಲ ರೀತಿಯ ಭಾವನೆಗಳು ನಮ್ಮ ಸಿನಿಮಾಗಳಲ್ಲಿ ಹೆಚ್ಚಾಗಿ ಇರುತ್ತವೆ. ನಮ್ಮ ಹಾಡನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಒಂದು ಮಾರ್ಗ, ಮಾರ್ಗದರ್ಶಿ ಬೇಕು. ಆಗ ಮಾತ್ರ ಎಲ್ಲವೂ ಸಾಧ್ಯ. ಆರ್‌ಆರ್‌ಆರ್‌ ಸಿನಿಮಾ ನಿಜಕ್ಕೂ ಅದನ್ನು ಸಾಧ್ಯವಾಗಿಸಿದೆ. ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡು ಇಷ್ಟು ದೂರ ಸಾಗಿದೆ. ನಮ್ಮ ಪೂರ್ವಜರು ಮತ್ತು ನನ್ನ ಸಮಕಾಲೀನರು ಉತ್ತಮ ಸಂದರ್ಭಗಳಿಗಾಗಿ ಉತ್ತಮ ಹಾಡುಗಳನ್ನು ಬರೆದಿದ್ದಾರೆ. ಶ್ರೇಷ್ಠ ಸಾಹಿತ್ಯ ಮತ್ತು ಸಂಗೀತ ಭಾಷೆಯನ್ನು ನಾವು ಹೊಂದಿದ್ದೇವೆ ಎಂದು ಚಂದ್ರಬೋಸ್ ತಿಳಿಸಿದರು.

ಇದನ್ನೂ ಓದಿ: ವಿಶ್ವಾದ್ಯಂತ RRR​ ನಾಯಕರ ಕ್ರೇಜ್: ಜೂ.ಎನ್​ಟಿಆರ್​ ನಂ.1, ಎರಡನೇ ಸ್ಥಾನದಲ್ಲಿ ರಾಮ್​ಚರಣ್​

Last Updated : Mar 14, 2023, 4:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.