2022ರ ಸೂಪರ್ ಹಿಟ್ ಚಿತ್ರ ಆರ್‌ಆರ್‌ಆರ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬ್ಲಾಕ್ ಬಸ್ಟರ್ ಮೂವಿ ಎನಿಸಿಕೊಂಡಿದೆ. ಸೌತ್ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅಮೋಘವಾಗಿ ನಟಿಸಿ ಸಿನಿ ಪ್ರಿಯರಿಂದ ಮೆಚ್ಚುಗೆ ಗಳಿಸಿದ್ದರು. ಈ ಬಹು ಬೇಡಿಕೆ ನಟರ ಅತ್ಯುತ್ತಮ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 1,200 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿರುವ ಈ ಚಿತ್ರ ಈಗಲೂ ಹಲವು ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್‌ಆರ್‌ಆರ್ ಮತ್ತಷ್ಟು ಅವಾರ್ಡ್ಸ್ಗೆ ನಾಮ ನಿರ್ದೇಶನಗೊಂಡಿದ್ದು, ಸೌತ್ ಸಿನಿಮಾ ಇಂಡಸ್ಟ್ರಿಯ ಹಿರಿಮೆ ಹೆಚ್ಚಿಸಿದೆ.
-
Very happy to share that RRR is in the LONGLIST of #BAFTA FILM AWARDS. ❤️🙌🏻
— RRR Movie (@RRRMovie) January 6, 2023 " class="align-text-top noRightClick twitterSection" data="
Thank you everyone. #RRRMovie @BAFTA pic.twitter.com/smU8l7OzF0
">Very happy to share that RRR is in the LONGLIST of #BAFTA FILM AWARDS. ❤️🙌🏻
— RRR Movie (@RRRMovie) January 6, 2023
Thank you everyone. #RRRMovie @BAFTA pic.twitter.com/smU8l7OzF0Very happy to share that RRR is in the LONGLIST of #BAFTA FILM AWARDS. ❤️🙌🏻
— RRR Movie (@RRRMovie) January 6, 2023
Thank you everyone. #RRRMovie @BAFTA pic.twitter.com/smU8l7OzF0
ಭಾರತದಲ್ಲಿ ಹಲವು ಪ್ರಶಸ್ತಿಗಳನ್ನು ಈಗಾಗಲೇ ಆರ್‌ಆರ್‌ಆರ್ ಗಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಎರಡು ಗೋಲ್ಡನ್ ಗ್ಲೋಬ್ ನಾಮ ನಿರ್ದೇಶನಗಳನ್ನು ಪಡೆದ ನಂತರ, ಆಸ್ಕರ್‌ನ ಪಟ್ಟಿಗೆ ಸೇರ್ಪಡೆಗೊಂಡ ನಂತರ ಆರ್‌ಆರ್‌ಆರ್ ಇದೀಗ ಪ್ರತಿಷ್ಠಿತ BAFTA ಪ್ರಶಸ್ತಿಗೆ ಆಯ್ಕೆ ಆಗಿದೆ. BAFTA 2023 ಪ್ರಶಸ್ತಿಗೆ ರೇಸ್‌ನಲ್ಲಿರುವ 10 ಚಲನಚಿತ್ರಗಳಲ್ಲಿ ಆರ್‌ಆರ್‌ಆರ್ ಕೂಡ ಒಂದು.
BAFTA ಪ್ರಶಸ್ತಿ: 2023ರ BAFTA ಚಲನಚಿತ್ರ ಪ್ರಶಸ್ತಿಗಳಿಗಾಗಿ ಎಲ್ಲಾ 24 ವಿಭಾಗಗಳಲ್ಲಿ ಮೊದಲ ಸುತ್ತಿನ ಮತದಾನದ ಫಲಿತಾಂಶಗಳನ್ನು ಬ್ರಿಟಿಷ್ ಅಕಾಡೆಮಿ ಪ್ರಕಟಿಸಿದೆ. ಆರಂಭಿಕ ಲಾಂಗ್ ಲಿಸ್ಟ್‌ನಲ್ಲಿ ಸ್ಟಾರ್ ಡೈರೆಕ್ಟರ್ ಎಸ್‌ಎಸ್ ರಾಜಮೌಳಿ ಅವರ 2022ರ ಬ್ಲಾಕ್‌ಬಸ್ಟರ್ 'RRR' ಸೇರಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ ಈ ಆ್ಯಕ್ಷನ್ ಚಿತ್ರವು ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ.
ಆರ್‌ಆರ್‌ಆರ್ ಟ್ವೀಟ್: ಲಾಂಗ್‌ಲಿಸ್ಟ್‌ನ ಘೋಷಣೆಯ ನಂತರ ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಚಿತ್ರತಂಡ ತನ್ನ ಕೃತಜ್ಞತೆ ವ್ಯಕ್ತಪಡಿಸಿದೆ. "ಆರ್‌ಆರ್‌ಆರ್ ಸಿನಿಮಾ BAFTA ಫಿಲ್ಮ್ ಅವಾರ್ಡ್ಸ್ ಲಾಂಗ್ ಲಿಸ್ಟ್‌ನಲ್ಲಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಕೇವಲ 98 ಸೆಕೆಂಡ್ಗಳಲ್ಲಿ ಮಾರಾಟವಾಯ್ತು ಆರ್‌ಆರ್‌ಆರ್ ಸಿನಿಮಾ ಟಿಕೆಟ್ಗಳು!
ಡಿಸೆಂಬರ್ 30 ರಂದು ಮುಕ್ತಾಯಗೊಂಡ ಮೊದಲ ಸುತ್ತಿನ ಮತದಾನದ ಫಲಿತಾಂಶಗಳನ್ನು ಅನುಸರಿಸಿ ಈ ಪಟ್ಟಿಯನ್ನು ಪ್ರಕಟಿಸಲಾಯಿತು. ಮೂರನೇ ಬಾರಿಗೆ BAFTA ನಾಮ ನಿರ್ದೇಶನಗಳ ದೀರ್ಘ ಪಟ್ಟಿಯನ್ನು ಪ್ರಕಟಿಸಿದೆ. ನಾಮ ನಿರ್ದೇಶನಗಳ ಅಂತಿಮ ಪಟ್ಟಿಯನ್ನು ಜನವರಿ 19, 2023 ರಂದು ಘೋಷಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 19, 2023ರಂದು ನಿಗದಿ ಪಡಿಸಲಾಗಿದೆ.
ಗೋಲ್ಡನ್ ಗ್ಲೋಬ್ಸ್‌ನಲ್ಲಿ ಆರ್‌ಆರ್‌ಆರ್ ತಂಡ: ಲಾಸ್ ಏಂಜಲೀಸ್‌ನ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಆರ್‌ಆರ್‌ಆರ್ ತಂಡ ಗೌರವಕ್ಕೆ ಪಾತ್ರವಗಲು ಸಿದ್ಧವಾಗಿದೆ. ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಅವರ ಕುಟುಂಬ, ರಾಮ್ ಚರಣ್ ಅವರು ಪತ್ನಿ ಉಪಾಸನಾ ಅವರೊಂದಿಗೆ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 11, 2023 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಚಲನಚಿತ್ರವು ಅತ್ಯುತ್ತಮ ಚಲನಚಿತ್ರ (ಇಂಗ್ಲಿಷ್ ಅಲ್ಲದ ಭಾಷಾ ವಿಭಾಗ) ಮತ್ತು ಅತ್ಯುತ್ತಮ ಮೂಲ ಗೀತೆ (ನಾಟು ನಾಟು ಹಾಡು)ಗೆ ನಾಮನಿರ್ದೇಶನಗೊಂಡಿದೆ. ಇನ್ನೂ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಪಡೆದಿದ್ದಾರೆ.
ಇದನ್ನೂ ಓದಿ: ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆರ್‌ಆರ್‌ಆರ್ ನಾಮ ನಿರ್ದೇಶನ.. ಧನ್ಯವಾದ ಅರ್ಪಿಸಿದ ರಾಜಮೌಳಿ