ವಿಶ್ವದ ಪ್ರತಿಷ್ಟಿತ ಪ್ರಶಸ್ತಿ ಪುರಸ್ಕಾರ ವಿಚಾರದಲ್ಲಿ ಭಾರತೀಯ ಚಿತ್ರೋದ್ಯಮ ಅಭೂತಪೂರ್ವ ಯಶಸ್ಸು ಕಂಡಿದೆ. ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ಸೂಪರ್ ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಹಾಗೆಯೇ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದಲ್ಲಿ ಮೂಡಿಬಂದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡು ಭಾರತದ ಖ್ಯಾತಿ ಹೆಚ್ಚಿಸಿದೆ.
ಆರ್ಆರ್ಆರ್ ಟ್ರೆಂಡ್: ಸೋಮವಾರ ಲಾಸ್ ಏಂಜಲಿಸ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಆರ್ಆರ್ಆರ್ ತಾರೆಯರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಈ ಬೇಡಿಕೆಯ ನಟರು ತೆಲುಗು ರಾಜ್ಯಗಳಲ್ಲದೇ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಚಿತ್ರದ, ಹಾಡಿನ ಕ್ರೇಜ್ ಕಿಂಚಿತ್ತೂ ಕಡಿಮೆ ಆಗಿಲ್ಲ. 2023ರ ಆಸ್ಕರ್ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆರ್ಆರ್ಆರ್ ನಟರು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
-
As the #Oscars continue to trend today, we're sharing some top mentions across social and news media over the past 24-hours!
— NetBase Quid (@NetBaseQuid) March 13, 2023 " class="align-text-top noRightClick twitterSection" data="
Top 5 Mentioned Films:
1. #RRRMovie
2. #TheElephantWhisperers
3. #EverythingEverywhereAllAtOnce
4. #AllQuiteontheWesternFront
5. #Argentina1985
... pic.twitter.com/zgJdO0fktx
">As the #Oscars continue to trend today, we're sharing some top mentions across social and news media over the past 24-hours!
— NetBase Quid (@NetBaseQuid) March 13, 2023
Top 5 Mentioned Films:
1. #RRRMovie
2. #TheElephantWhisperers
3. #EverythingEverywhereAllAtOnce
4. #AllQuiteontheWesternFront
5. #Argentina1985
... pic.twitter.com/zgJdO0fktxAs the #Oscars continue to trend today, we're sharing some top mentions across social and news media over the past 24-hours!
— NetBase Quid (@NetBaseQuid) March 13, 2023
Top 5 Mentioned Films:
1. #RRRMovie
2. #TheElephantWhisperers
3. #EverythingEverywhereAllAtOnce
4. #AllQuiteontheWesternFront
5. #Argentina1985
... pic.twitter.com/zgJdO0fktx
ಭಾರತೀಯ ನಟರ ಹೆಸರು ಟ್ರೆಂಡಿಂಗ್: ಆಸ್ಕರ್ 2023 ನಂತರ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ಚರಣ್ ಹೆಸರು ಟ್ರೆಂಡಿಂಗ್ ಆಗುತ್ತಿದೆ. ಇವರು ಟ್ವಿಟರ್‌ನಲ್ಲಿ ಮಾತ್ರ ಅಗ್ರಸ್ಥಾನ ಪಡೆದುಕೊಂಡಿಲ್ಲ. ಕಳೆದ ಕೆಲವು ಸಮಯಗಳಿಂದ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಹಳಷ್ಟು ಸದ್ದು ಮಾಡಿದ್ದಾರೆ. ಇವರ ಸಾಮಾಜಿಕ ಮಾಧ್ಯಮದ ಉಪಸ್ಥಿತಿ ಕೂಡಾ ಅಗಾಧವಾಗಿ ಹೆಚ್ಚಾಗಿದ್ದು, ಆಸ್ಕರ್ ಸಮಾರಂಭ ಇದರ ತೂಕ ಹೆಚ್ಚಿಸಿದೆ.
ನೆಟ್‌ಬೇಸ್ ಕ್ವಿಡ್ ಮಾಹಿತಿ: ಡೇಟಾ ವಿಶ್ಲೇಷಕ ಸಂಸ್ಥೆ ನೆಟ್‌ಬೇಸ್ ಕ್ವಿಡ್ (NetBase Quid) ಪ್ರಕಾರ, ಜೂನಿಯರ್ ಎನ್‌ಟಿಆರ್ ಅವರು ಆಸ್ಕರ್ 2023ರ ಚರ್ಚೆ ವಿಷಯದಲ್ಲಿ (ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣ ಫ್ಲಾಟ್ಫಾರ್ಮ್ಗಳು) ಅಗ್ರಸ್ಥಾನದಲ್ಲಿದ್ದು, ಹಾಲಿವುಡ್ ಸೆಲೆಬ್ರಿಟಿಗಳು ಅವರ ಹಿಂದೆ ಇದ್ದಾರೆ. ನಟ ರಾಮ್ಚರಣ್ ಎರಡನೇ ಸ್ಥಾನದಲ್ಲಿದ್ದಾರೆ. ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ ನಟ ಕೇ ಹುಯ್ ಕ್ವಾನ್ (Ke Huy Quan) ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಆಸ್ಕರ್ ಗೆದ್ದಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದ ಬ್ರ್ಯಾಂಡನ್ ಫ್ರೇಸರ್ (Brandan Fraser) ನಾಲ್ಕನೇ ಸ್ಥಾನದಲ್ಲಿದ್ದರೆ, ಅಮೆರಿಕದ ನಟ ಪೆಡ್ರೊ ಪಾಸ್ಕಲ್ (Pedro Pascal) ಟ್ವಿಟರ್‌ನಲ್ಲಿ ನೆಟ್‌ಬೇಸ್ ಕ್ವಿಡ್ ಹಂಚಿಕೊಂಡ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: 'ದ ಎಲಿಫೆಂಟ್ ವಿಸ್ಪರರ್ಸ್': ಮರಿ ಆನೆ ನೋಡಲು ಮುದುಮಲೈ ಶಿಬಿರಕ್ಕೆ ಪ್ರವಾಸಿಗರ ದಂಡು
ಟ್ವಿಟ್ಟರ್ ಟ್ರೆಂಡಿಂಗ್ನಲ್ಲಿ RRR ನಟರು ಖಾಯಂ: ನೆಟ್‌ಬೇಸ್ ಕ್ವಿಡ್ ಸಂಸ್ಥೆ, ಸಾಮಾಜಿಕ ಮಾಧ್ಯಮ ಮತ್ತು ಮುಖ್ಯ ಸುದ್ದಿ ಮಾಧ್ಯಮಗಳಾದ್ಯಂತ ಆಸ್ಕರ್ 2023ರಿಂದ ಹೆಚ್ಚು ಉಲ್ಲೇಖಿಸಲಾದ ಸೆಲೆಬ್ರಿಟಿಗಳನ್ನು ಆಧರಿಸಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಟ್ವಿಟ್ಟರ್ ಟ್ರೆಂಡಿಂಗ್ ವಿಚಾರಕ್ಕೆ ಬಂದಾಗ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ಚರಣ್ ಖಾಯಂ ಆಗಿರುತ್ತಾರೆ.
ಇದನ್ನೂ ಓದಿ: ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ