ETV Bharat / entertainment

ಗುಟ್ಟಾಗಿ ರಾಕಿ ಭಾಯ್ ಥಾಯ್ಲೆಂಡ್​​​​ಗೆ ಹೋಗಿದ್ದು ಏಕೆ?: ಪ್ಯಾನ್​ ವರ್ಲ್ಡ್​ ಚಿತ್ರಕ್ಕೆ ರೆಡಿಯಾಗುತ್ತಿದ್ದಾರಾ ಯಶ್​ - ಗುಟ್ಟಾಗಿ ರಾಕಿ ಭಾಯ್ ಥೈಲ್ಯಾಂಡ್ ಹೋಗಿದ್ದು ಯಾಕೇ

ಕೆಲವು ದಿನಗಳ ಹಿಂದಷ್ಟೆ ಯಶ್​ ಹಾಲಿವುಡ್​ ಸ್ಟಾರ್‌ ಸ್ಟಂಟ್ ಮಾಸ್ಟರ್ ಜೆಜೆ ಪೇರಿ ಜೊತೆ ಕಾಣಿಸಿಕೊಂಡಿದ್ದರು, ಇದೀಗ ಥಾಯ್ಲೆಂಡ್​​ಗೆ ಭೇಟಿ ಕೊಟ್ಟಿರುವುದು ಯಶ್​ ಪ್ಯಾನ್​ ವರ್ಲ್ಡ್​ ಸಿನಿಮಾ ಮಾಡುತ್ತಾರೆ ಎನ್ನುವುದಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ.

Yash return from Thailand
ಥೈಲ್ಯಾಂಡ್​ನಿಂದ ಹಿಂತಿರುಗಿದ ನಟ ಯಶ್​
author img

By

Published : Jan 16, 2023, 5:20 PM IST

ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಮೇಲೆ ರಾಕಿಭಾಯ್ ಸೈಲೆಂಟ್ ಆಗಿದ್ರು. ರಾಕಿ ಎಲ್ಲೇ ಹೋದರು ಅವರ ಅಭಿಮಾನಿಗಳು ಮುಂದಿನ‌ ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಕೇಳ್ತಾನೆ ಇದ್ರು. ಇದಕ್ಕೆ ನಗುತ್ತಲೆ ಸುಮ್ಮನಾಗ್ತಿದ್ದ ರಾಕಿಂಗ್ ಸ್ಟಾರ್ ಹೊಸ ವರ್ಷದ ಆರಂಭದಲ್ಲೇ ಹೈಪರ್ ಆಕ್ಟೀವ್ ಆಗಿದ್ದಾರೆ. ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ದುಬೈಗೆ ಹಾರಿದ್ದ ರಾಕಿ. ಇದೀಗ ಸದ್ದಿಲ್ಲದೆ ಥಾಯ್ಲೆಂಡ್​ಗೆ ಹೋಗಿ ಬಂದಿದ್ದಾರೆ. ಅಷ್ಟಕ್ಕೂ ರಾಕಿಭಾಯ್ ಥಾಯ್ಲೆಂಡ್​ಗೆ ಹೋಗಿದ್ಯಾಕೆ? ಇಲ್ಲಿದೆ ನಿಮ್ಮ ಕುತೂಹಲಗಳಿಗೆ ಉತ್ತರ.

Actor Yash
ನಟ ಯಶ್​

ರಾಮಾಚಾರಿ 37ನೇ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಿಸಿ, ಜನ್ಮದಿನದಂದೇ ತಮ್ಮ 19 ಚಿತ್ರದ ಅಪ್ಡೇಟ್ ಕೊಡ್ತಾರೆ ಅಂತ ರಾಕಿಭಾಯ್​ ಅಭಿಮಾನಿಗಳು ರಾಕಿ ಉತ್ಸವ ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಅಭಿಮಾನಿಗಳ ಆಸೆಯನ್ನು ನಿರಾಸೆ ಮಾಡಿದ್ದ ರಾಕಿ ತಮ್ಮ ಹುಟ್ಟುಹಬ್ಬವನ್ನು ಈ ವರ್ಷವೂ ಆಚರಿಸ್ತಿಲ್ಲ. ಜೊತೆಗೆ ವಿಭಿನ್ನವಾದ ಪ್ರಯತ್ನದ ಮೂಲಕ ನಿಮ್ಮ ಮುಂದೆ ಬರ್ತೀನಿ. ನನಗೆ ಸ್ವಲ್ಪ ಸಮಯ ಕೊಡಿ ಎಂದು ಅಭಿಮಾನಿ ದೇವರುಗಳಿಗೆ ಪ್ರೀತಿಯ ಪತ್ರ ಬರೆದು, ಬರ್ತ್ ಡೇ ಸೆಲಬ್ರೇಶನ್​ಗಾಗಿ ಫ್ಯಾಮಿಲಿ ಮತ್ತು ಕಷ್ಟದಲ್ಲಿ ಜೊತೆಗಿದ್ದ ಸ್ನೇಹಿತರ ಜೊತೆ ದುಬೈಗೆ ಹಾರಿದ್ದರು.

Actor Yash
ನಟ ಯಶ್​

ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದ ರಾಕಿ, ಒಂದೆರಡು ದಿನ ದುಬೈನಲ್ಲಿ ಕಾಲ ಕಳೆದು ಪತ್ನಿ ಮತ್ತು ಮಕ್ಕಳನ್ನು ದುಬೈನಿಂದ ಇಂಡಿಯಾಗೆ ಕಳಿಸಿ ನೇರವಾಗಿ ಚಾರ್ಟೆಡ್ ಫ್ಲೈಟ್​ನಲ್ಲಿ ರಾಕಿಭಾಯ್ ಥಾಯ್ಲೆಂಡ್​ಗೆ ಹಾರಿದ್ದಾರೆ. ಇನ್ನು ರಾಕಿ ಥಾಯ್ಲೆಂಡ್​​​​​​ ಕಡೆ‌ ಹಾರಿದ್ದು, ಗುಟ್ಟಾಗಿಯೇ ಇತ್ತು. ಆದರೆ ಆ ಗುಟ್ಟು ಯಶ್ ಮತ್ತೆ ಭಾರತಕ್ಕೆ ವಾಪಸ್ ಬಂದ್ಮೇಲೆ ರಟ್ಟಾಗಿದೆ. ಯಾವಾಗ ರಾಕಿ ಏಕಾಂಗಿಯಾಗಿ ಚಾರ್ಟೆಡ್ ಪ್ಲೈಟ್​ನಲ್ಲಿ ವಾಪಸ್ ಕರ್ನಾಟಕಕ್ಕೆ ಬಂದ್ರೊ ಆಗಿನಿಂದ ಅವರ ಅಭಿಮಾನಿ ಮಂದಿಗೆ ಒಂದು ಹೊಸ ಕುತೂಹಲ ಶುರುವಾಗಿದೆ. ಹುಟ್ಟು ಹಬ್ಬಕ್ಕೆ ದುಬೈಗೆ ಹಾರಿದ್ದ ರಾಕಿ ಥಾಯ್ಲೆಂಡ್​​ಗೆ ಏಕೆ ಹೋಗಿರಬಹುದು ಎಂದು ತಲೆ ಕೆಡಿಸಿಕೊಂಡು ರಾಕಿ ನಡೆಯನ್ನು ಗಮನಿಸ್ತಿದ್ದಾರೆ.

ಅಭಿಮಾನಿಗಳ ಬಯಕೆ ಈಡೇರಿಸಲು ಕಣ್ಮರೆಯಾಗುತ್ತಿದ್ದಾರೆ ಮಾಸ್ಟರ್​ಪೀಸ್​: ಇನ್ನು ಹೊಸ ವರ್ಷದ ಆರಂಭದಲ್ಲೇ ರಾಕಿ ನಡೆ ನಿಗೂಢವಾಗಿದೆ. ಏಕೆಂದರೆ ಕೆಜಿಎಫ್ ಬಂದು ಈಗಾಗಲೇ 8 ತಿಂಗಳು ಕಳೆದೋಗಿದ್ದರೂ ಇನ್ನೂ ಯಶ್ ತಮ್ಮ 19ನೇ ಚಿತ್ರದ ಚಿಕ್ಕ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಯಶ್ ಮುಂದಿನ ಚಿತ್ರವನ್ನು ನರ್ತನ್, ಶಂಕರ್, ಪುರಿ ಜಗನ್ನಾಥ್ ಡೈರೆಕ್ಷನ್ ಮಾಡ್ತಾರೆ. ಎನ್ನುವ ಮಾತುಗಳು ಒಂದಾದ ಮೇಲೆ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಅವುಗಳು ವೈರಲ್​ಗಷ್ಟೆ ಸೀಮಿತವಾಯ್ತು ವಿನಃ ಯಶ್ ಇದುವರೆಗೂ ತಮ್ಮ ಮುಂದಿನ‌ ಚಿತ್ರ ಯಾವುದು? ಆ ಚಿತ್ರಕ್ಕೆ ನಿರ್ಮಾಪಕ‌ ಯಾರು..? ನಿರ್ದೇಶಕ ಯಾರು ಅನ್ನೋದರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅಲ್ಲದೇ ನನ್ನ ಮುಂದಿನ ಚಿತ್ರ ಯಾವ ರೀತಿ ಇರಬೇಕು ಅಂತ ನನ್ನ ಅಭಿಮಾನಿಗಳೇ ಡಿಸೈಡ್ ಮಾಡ್ತಾರೆ. ಅಷ್ಟೆ ಯಾಕೆ ನಾನು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡಬೇಕು ಅನ್ನೋದು ನನ್ನ ಪ್ರೀತಿಸೋ ಹೃದಯಗಳ ಬಯಕೆ. ಅದನ್ನು ಈಡೇರಿಸಲು ಮಾಸ್ಟರ್ ಪೀಸ್ ರೆಡಿಯಾಗುತ್ತಿದ್ದಾರೆ.

ಇದರ ಬೆನ್ನಲ್ಲೆ ರಾಕಿ ತಮ್ಮ ಮುಂದಿನ ಚಿತ್ರಕ್ಕೆ ದೊಡ್ಡ ಮಟ್ಡದ ತಯಾರಿ ಮಾಡ್ತಿದ್ದು, ಯಶ್ 19 ಚಿತ್ರಕ್ಕೆ ಹಾಲಿವುಡ್ ನಿರ್ದೇಶಕ, ಹಾಲಿವುಡ್ ಸ್ಟಂಟ್ ಮಾಸ್ಟರ್, ಹಾಲಿವುಡ್ ಕ್ಯಾಮರಾ ಮ್ಯಾನ್​ಗಳನ್ನು ಇಂಡಿಯಾಗೆ ಕರೆತರಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಈಟಿವಿ ಭಾರತಕ್ಕೆ ಸಿಕ್ಕಿದೆ. ಹೌದು ರಾಕಿ ಸದ್ದಿಲ್ಲದೇ ಥಾಯ್ಲೆಂಡ್​ಗೆ ಹೋಗಿ ಬಂದಿರೋದು ಈಗ ರಾಕಿ ಪ್ಯಾನ್ ವರ್ಲ್ಡ್ ಚಿತ್ರ ಮಾಡುತ್ತಾರೆ ಎನ್ನುವ ಸುದ್ದಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.

ರಾಕಿ ಜೆಜೆ ಪೇರಿ ಭೇಟಿ ನಂತರ ಹಾಲಿವುಡ್ ಮಂದಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಥಾಯ್ಲೆಂಡ್​​ಗೆ ಭೇಟಿಯೂ ಇದೇ ಉದ್ದೇಶ ಇರಬೇಕು ಎನ್ನುವ ಮಾತು ಈಗ ಕೇಳಿ ಬರ್ತಿದೆ. ಕೆಲವು ದಿನಗಳ ಹಿಂದೆ ರಾಕಿ ಹಾಲಿವುಡ್ ಸ್ಟಾರ್‌ ಸ್ಟಂಟ್ ಮಾಸ್ಟರ್ ಜೆಜೆ ಪೇರಿ ಜೊತೆ ಕಾಣಿಸಿದ್ದರು. ಈಗ ಸದ್ದಿಲ್ಲದೇ ಥಾಯ್ಲೆಂಡ್​ಗೆ ಹೋಗಿ ಬಂದಿದ್ದು, ರಾಕಿ ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್ ತಂತ್ರಜ್ಞರ ಜೊತೆ ಪ್ಲ್ಯಾನ್​ ಮಾಡ್ತಿದ್ದಾರಾ ಎನ್ನುವ ಕುತೂಹಲಕ್ಕೆ ಮತ್ತಷ್ಟು ಜೀವ ತುಂಬಿದೆ.

ಅದೇನೆ ಇರಲಿ ರಾಕಿ ಕೆಜಿಎಫ್ ಚಿತ್ರದ ನಂತರ ತಮ್ಮ ಕೆರಿಯರ್ ಹಾಗೂ ಕನ್ನಡ‌ ಚಿತ್ರರಂಗದ ಅಯಾಮವನ್ನು ಬದಲಿಸಿದ್ದು, ಈಗ ಮತ್ತೆ ತಮ್ಮ 19ನೇ ಚಿತ್ರಕ್ಕೆ ಹಾಲಿವುಡ್ ಮಂದಿಯ ಕರೆತರುವ ಸಾಹಸ ಮಾಡಿದ್ದೆ ಆದರೆ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯೋದು ಪಕ್ಕಾ ಎನ್ನಲಾಗಿದೆ.

ಇದನ್ನೂ ಓದಿ: ದುಬೈನಲ್ಲಿ ಜನ್ಮದಿನ ಆಚರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.