ETV Bharat / entertainment

ಕನ್ನಡದ ರಾಕಿ ಭಾಯ್ ಯಶ್​ ನಂಬರ್​ ಒನ್​ ನಟ: ಶಾಹಿದ್ ಕಪೂರ್ - Bollywood actor shahid kapoor

ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ ರಾಕಿ ಭಾಯ್ ಯಶ್ ನಂಬರ್​ ಒನ್​ ನಟ ಎಂದು ಶಾಹಿದ್ ಕಪೂರ್ ಗುಣಗಾನ ಮಾಡಿದ್ದಾರೆ.

shahid kapoor on Rocky Bhai Yash
ಶಾಹಿದ್ ಕಪೂರ್ - ಯಶ್
author img

By

Published : Aug 26, 2022, 2:15 PM IST

ನಿರೂಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ ರಾಕಿಂಗ್​​ ಸ್ಟಾರ್​ ಹೆಸರು ಸದ್ದು ಮಾಡಿದೆ. ಹೌದು, ಬಾಲಿವುಡ್​ ನಟ ಶಾಹಿದ್ ಕಪೂರ್ ಕನ್ನಡ ಚಿತ್ರರಂಗದ ರಾಕಿ ಭಾಯ್ ಯಶ್ ಅವರ ಗುಣಗಾನ ಮಾಡಿದ್ದಾರೆ. ​

ಕಾಫಿ ವಿತ್ ಕರಣ್ ಶೋನಲ್ಲಿ ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಬಂದು ಕರಣ್​ ಅವರೊಂದಿಗೆ ವಿವಿಧ ವಿಚಾರವಾಗಿ ಮಾತನಾಡುತ್ತಾರೆ. ಹಿಂದಿನ ಸಂಚಿಕೆಯಲ್ಲಿ ಬಾಲಿವುಡ್​​ ನಟ ಶಾಹಿದ್ ಕಪೂರ್ ಮತ್ತು ನಟಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ಈ ಶೋನ ಕೆಲವು ಕ್ಲಿಪ್​ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಇದನ್ನೂ ಓದಿ: ಭಾವಪೂರ್ಣ ಸಿನಿಮಾ ನಿರ್ದೇಶಿಸಲಿದ್ದಾರೆ ಚೇತನ್ ಮುಂಡಾಡಿ.. ಭಾವನೆಗಳೇ ಇಲ್ಲಿನ ಪಾತ್ರಗಳು

ಶೋನಲ್ಲಿ, ಕರಣ್ ಜೋಹರ್ ಅವರು ಶಾಹಿದ್​​ರಲ್ಲಿ ನಂಬರ್​ ಒನ್​ ನಟ ಮತ್ತು ನಟಿ ಯಾರೆಂದು ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಗೆ ನಟಿ ಕಿಯಾರಾ ಅಡ್ವಾನಿ ನಂಬರ್​ ಒನ್​ ಆ್ಯಕ್ಟ್ರೆಸ್​ ಎಂದು ಉತ್ತರಿಸುತ್ತಾರೆ. ಬಳಿಕ ನಂಬರ್​ ಒನ್​ ಆ್ಯಕ್ಟರ್​ ಬಗ್ಗೆ ನಾವು ಚರ್ಚೆ ನಡೆಸಬಹುದು. ಸದ್ಯಕ್ಕೆ ರಾಕಿ ಭಾಯ್ ಯಶ್​ ಎಂದು ಉತ್ತರಿಸಿದ್ದಾರೆ. ಬಾಲಿವುಡ್​ ನಟ ಕನ್ನಡ ಚಿತ್ರರಂಗದ ಮತ್ತು ಯಶ್ ಹೆಸರು ಉಲ್ಲೇಖಿಸಿರುವುದು ಹೆಮ್ಮೆಯ ವಿಷಯ. ಈ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.