ETV Bharat / entertainment

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್​​: ತೆರೆ ಮೇಲಿನ ರಣ್​​ವೀರ್-ಆಲಿಯಾ ಪ್ರೇಮಕಥೆ ವೀಕ್ಷಿಸಲು ಅಭಿಮಾನಿಗಳ ಕುತೂಹಲ - ರಣ್​​ವೀರ್ ಸಿಂಗ್

ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್ ಅನಾವರಣಗೊಂಡಿದೆ.

Rocky Aur Rani Kii Prem Kahani trailer
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್
author img

By

Published : Jul 4, 2023, 3:30 PM IST

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜುಲೈ 28ರಂದು ತೆರೆಕಾಣಲು ಸಜ್ಜಾಗಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯ ಟ್ರೇಲರ್​ ಅನ್ನು ಚಿತ್ರ ನಿರ್ಮಾಪಕರು ಇಂದು ಅನಾವರಣಗೊಳಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್, ಹಾಡು, ಪೋಸ್ಟರ್ ಅನಾವರಣಗೊಂಡಿದ್ದು, ಇಂದು ಬಿಡುಗಡೆ ಆಗಿರುವ ಟ್ರೇಲರ್​ ಕುರಿತು ಸಿನಿಪ್ರಿಯರು ಪ್ರತಿಕ್ರಿಯೆ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.

ಜು. 28ರಂದು ಸಿನಿಮಾ ಬಿಡುಗಡೆ: ನಿರ್ದೇಶಕ ಕರಣ್ ಜೋಹರ್ ಬಹು ಸಮಯದ ನಂತರ ಡೈರೆಕ್ಟರ್​ ಕ್ಯಾಪ್​ ತೊಟ್ಟಿದ್ದು, ಇಂದು ಬಹುನಿರೀಕ್ಷಿತ ಚಿತ್ರದ ಟ್ರೇಲರ್​ ಅನ್ನು ಅನಾವರಣಗೊಳಿಸಿದ್ದಾರೆ. ಟ್ರೇಲರ್​ ವೀಕ್ಷಿಸಿದ ಅಭಿಮಾನಿಗಳು, ಸಿನಿಮಾ ವೀಕ್ಷಿಸುವ ಕುರಿತು ತಮ್ಮ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ರಣ್​ವೀರ್​, ಆಲಿಯಾ ಹೊರತಾಗಿ, ಹಿರಿಯ ಕಲಾವಿದರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರು ಈ ಚಲನಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹು ತಾರಾಗಣ ಹೊಂದಿರುವ ಬಿಗ್​ ಬಜೆಟ್​ ಸಿನಿಮಾ ಜುಲೈ 28 ರಂದು ಬಿಡುಗಡೆ ಆಗಲಿದೆ.

  • " class="align-text-top noRightClick twitterSection" data="">

ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ: 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ನಿರ್ದೇಶಕ ಕರಣ್ ಜೋಹರ್ ಅವರ ಕಥೆ ಹೇಳುವ ಶೈಲಿ, ಬಿಗ್​ ಸ್ಟಾರ್ ಕಾಸ್ಟ್, ಅದ್ಧೂರಿ ಸೆಟ್‌, ಭಾವಪೂರ್ಣ ಸಂಗೀತದೊಂದಿಗೆ ಬರಲಿರುವ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾದಂತೆ ತೋರುತ್ತಿದೆ. ಸದ್ಯ ಅನಾವರಣಗೊಂಡಿರುವ ಟ್ರೇಲರ್​, ಟೀಸರ್​, ಹಾಡುಗಳಲ್ಲಿ ಚಿತ್ರದ ಪ್ರಮುಖ ನಟರಾದ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿಯ ಜಗಳ, ಪ್ರೇಮ, ಹಬ್ಬದ ವಾತಾವರಣ ಮತ್ತು ಮದುವೆಯ ಸಮಯದಲ್ಲಿ ಕುಟುಂಬದ ಆಚರಣೆಗಳುಳ್ಳ ಹಲವಾರು ದೃಶ್ಯಗಳಿವೆ.

ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಆಲಿಯಾ, ರಣ್​ವೀರ್​ ಲುಕ್ ಇಷ್ಟವಾಯ್ತಾ?​

ಆರು ವರ್ಷಗಳ ಬಳಿಕ ಸಿನಿಮಾ ನಿರ್ದೇಶನ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್ ಅನ್ನು ಧರ್ಮ ಪ್ರೊಡಕ್ಷನ್ಸ್‌ನ ಅಧಿಕೃತ ಚಾನೆಲ್ ಅಡಿಯಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಟ್ರೇಲರ್ ಶೇರ್ ಮಾಡಿರುವ ಕರಣ್​ ಜೋಹರ್​, ''ಪ್ರೀತಿಯ ಶಕ್ತಿ ಮತ್ತು ಕುಟುಂಬಗಳ ಶಕ್ತಿ - ಎರಡೂ ಅಜೇಯ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್ ಅನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆ. ಮುಂದೆ ನಡೆಯಲಿರುವ ಅದ್ಧೂರಿ ಆಚರಣೆಯ ಒಂದು ಝಲಕ್ ನಿಮಗಾಗಿ. ಜುಲೈ 28 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ'' ಎಂದು ಬರೆದುಕೊಂಡಿದ್ದಾರೆ. ಕರಣ್ ಜೋಹರ್ ಆರು ವರ್ಷಗಳ ಬಳಿಕ ಸಿನಿಮಾವೊಂದನ್ನು ನಿರ್ದೇಶಿಸಿದ್ದು, ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ: Mouni Roy: ಸೀರೆಯುಟ್ಟು ಮೈ ಬಳುಕಿಸಿದ ಮೌನಿ ಸೌಂದರ್ಯದ ಖನಿ! - Photos ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.