ETV Bharat / entertainment

ರಾಕಿ ರಾಣಿ ಲವ್​ ಸ್ಟೋರಿ: ಆಲಿಯಾಗೆ ಸಪೋರ್ಟ್ ಮಾಡಲು ಬಂದ ರಣ್​ಬೀರ್​-ರಣ್​ವೀರ್ ಜೊತೆ ದೀಪಿಕಾ ಇರಬೇಕಿತ್ತೆಂದ ಫ್ಯಾನ್ಸ್ - ರಣ್​ಬೀರ್​ ಕಪೂರ್​

ಮುಂಬೈನಲ್ಲಿ ಮಂಗಳವಾರ ಸಂಜೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪ್ರೀಮಿಯರ್​ ಶೋ ನಡೆದಿದ್ದು, ಬಾಲಿವುಡ್​ ಗಣ್ಯರು ಆಗಮಿಸಿದ್ದರು.

Rocky Aur Rani Kii Prem Kahaani
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
author img

By

Published : Jul 26, 2023, 1:49 PM IST

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' 2023ರ ಬಹುನಿರೀಕ್ಷಿತ ಸಿನಿಮಾ. ಕರಣ್​ ಜೋಹರ್​ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಇದೇ ಶುಕ್ರವಾರ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.

ರಣ್​ವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯ ಪ್ರೀಮಿಯರ್​ ಶೋ ಮುಂಬೈನಲ್ಲಿ ಮಂಗಳವಾರ ಸಂಜೆ ನಡೆಯಿತು. ಸ್ಪೆಷಲ್​ ಈವೆಂಟ್​ಗೆ ಬಾಲಿವುಡ್​ ಸ್ಟಾರ್ಸ್ ಸಾಕ್ಷಿಯಾಗಿದ್ದರು.

ಪ್ರೆಗ್ನೆನ್ಸಿ, ಡೆಲಿವರಿ, ಮಗುವಿನ ಆರೈಕೆ ಎಂದು ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದಿದ್ದ ಆಲಿಯಾ ಭಟ್​​ ಈ ಚಿತ್ರದ ಮೂಲಕ ಮತ್ತೆ ಮಿಂಚಲು ರೆಡಿಯಾಗಿದ್ದಾರೆ. ಪತ್ನಿ ಆಲಿಯಾ ಅವರ ಮುಂಬರುವ ಸಿನಿಮಾಗೆ ಸಪೋರ್ಟ್ ಕೊಡುವ ಉದ್ದೇಶದೊಂದಿಗೆ ಪತಿ, ಸ್ಟಾರ್ ನಟ ರಣ್​ಬೀರ್​ ಕಪೂರ್​ ಈವೆಂಟ್​ಗೆ ಆಗಮಿಸಿದ್ದರು. ಸದಾ ಮಾದರಿ ದಂಪತಿಯಂತೆ ರಣ್​ವೀರ್​ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಗುರುತಿಸಿಕೊಳ್ಳುತ್ತಾರೆ. ಆದ್ರೆ ಪತಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾಗೆ ದೀಪಿಕಾ ಪಡುಕೋಣೆ ಆಗಮಿಸಿಲ್ಲ. ಹೀಗಾಗಿ ಹಲವರು ಸೋಷಿಯಲ್​ ಮೀಡಿಯಾದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಆಲಿಯಾ ಮತ್ತು ರಣ್​​ಬೀರ್ ದಂಪತಿ 'ಟೀಮ್ ರಾಕಿ ಔರ್ ರಾಣಿ' ಎಂದು ಬರೆಯಲಾದ ಕಪ್ಪು ಟಿ-ಶರ್ಟ್‌ ಧರಿಸಿ ಕಾರ್ಯಕ್ರಮಕ್ಕೆ ಒಟ್ಟಿಗೆ ಆಗಮಿಸಿದ್ದಾರೆ. ಆಲಿಯಾ ಬ್ಲ್ಯಾಕ್​ ಟಿ-ಶರ್ಟ್, ಫೇಡೆಡ್ ಜೀನ್ಸ್ ಮತ್ತು ಬ್ಲ್ಯಾಕ್​ ಶೂಸ್ ಧರಿಸಿದ್ದರೆ, ರಣ್​​ಬೀರ್ ಕಪೂರ್​ ಬ್ಲ್ಯಾಕ್​ ಟಿ-ಶರ್ಟ್, ಪ್ಯಾಂಟ್ ಮತ್ತು ವೈಟ್ ಶೂಸ್​ ಆರಿಸಿಕೊಂಡಿದ್ದರು. ಆಲಿಯಾಗೆ ಜೋಡಿಯಾಗಿ ನಟಿಸಿರುವ ರಣ್​​ವೀರ್ ಸಿಂಗ್ ಮಾತ್ರ​​ ಪ್ರೀಮಿಯರ್‌ನಲ್ಲಿ ಎಂದಿನಂತೆ ತಮ್ಮ ಢಿಪ್ರೆಂಟ್​ ಅವತಾರದಲ್ಲಿ ಕಾಣಿಸಿಕೊಂಡರು. ವೈಟ್​ ಟಿ-ಶರ್ಟ್, ಬಹುಬಣ್ಣದ ಪ್ಯಾಂಟ್​​, ಎಲ್ಲೋ ಶೂ ಧರಿಸಿದ್ದರು.

ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ.. ರಾಷ್ಟ್ರಾದ್ಯಂತ ಭರ್ಜರಿ ಪ್ರಚಾರ - ಪ್ರೇಮದಲೆಯಲ್ಲಿ ಮಿಂದೆದ್ದ ರಣ್​​ವೀರ್, ಆಲಿಯಾ

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಪ್ರೀಮಿಯರ್‌ನಲ್ಲಿ ದೀಪಿಕಾ ಪಡುಕೋಣೆ ಆಬ್ಸೆನ್ಸ್ ಅನ್ನು ಹಲವರಿಗೆ ಅರಗಿಸಿಕೊಳ್ಲಲು ಸಾಧ್ಯವಾಗಿಲ್ಲ. "ದೀಪಿಕಾ ಪತಿಯನ್ನು ಬೆಂಬಲಿಸಲು ಬಂದಿಲ್ಲವೇ?" ಎಂದು ಓರ್ವ ಸೋಷಿಯಲ್​ ಮೀಡಿಯಾ ಬಳಕೆದಾರ ಬರೆದರೆ, ಮತ್ತೊಬ್ಬರು, "ದೀಪಿಕಾ ಎಲ್ಲಿದ್ದಾರೆ? ಏನೂ ಸಮಸ್ಯೆ ಇಲ್ಲವಲ್ಲ??" ಎಂದು ಕಾಮೆಂಟ್​ ಮಾಡಿದ್ದಾರೆ. ಉಳಿದಂತೆ ಈ ಜೋಡಿಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಬೆಂಬಲಕ್ಕೆ ಬಂದಿದ್ದಾರೆ. ನಟಿ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರಬಹುದು ಎಂದು ತಿಳಿಸಿದ್ದಾರೆ. ಜೊತೆಗೆ, ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರೆ ಚೆನ್ನಾಗಿರೋದು ಎಂದು ಸಹ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಫ್ರೆಂಟ್​ ಸ್ಟೈಲ್​ನಲ್ಲಿ ರಣ್​​ವೀರ್​ ಆಲಿಯಾ ಮೋಡಿ: ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಡೀಟೆಲ್ಸ್ ನಿಮಗಾಗಿ

ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು ಸದ್ಯ ಅವರು ಮುಂಬೈನಲ್ಲಿ ಇಲ್ಲ ಎಂದು ಊಹಿಸಲಾಗಿದೆ. ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಶ್ವೇತಾ ಬಚ್ಚನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಮಲೈಕಾ ಅರೋರಾ, ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಸೇರಿದಂತೆ ಇತರೆ ಸೆಲೆಬ್ರಿಟಿಗಳು ಈ ಪ್ರೀಮಿಯರ್‌ಗೆ ಹಾಜರಾಗಿದ್ದರು. ಜು. 28ರಂದು ಸಿನಿಮಾ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.