ಬಾಲಿವುಡ್ ನಟರಾದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಮಾಡ್ರನ್ ಫ್ಯಾಮಿಲಿ ಲವ್ ಸ್ಟೋರಿ ಥಿಯೇಟರ್ಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಕರಣ್ ಜೋಹರ್ ಚಿತ್ರ ಯಶಸ್ವಿಯಾಗಿದೆ. ಕಲೆಕ್ಷನ್ ವಿಚಾರದಲ್ಲೂ ವೇಗದ ಓಟ ಮುಂದುವರೆಸಿದೆ. ಈ ಚಿತ್ರ ಜುಲೈ 28 ರಂದು (ಶುಕ್ರವಾರ) ತೆರೆಗೆ ಅಪ್ಪಳಿಸಿತ್ತು.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರವು ಆರನೇ ದಿನ 6.90 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಬಿಡುಗಡೆಯಾದ ಆರು ದಿನಗಳಲ್ಲಿ ಒಟ್ಟು 67.12 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೊದಲ ದಿನ 11.1 ಕೋಟಿ ರೂ., ಎರಡನೇ ದಿನ 16.5 ಕೋಟಿ ರೂ., ಮೂರನೇ ದಿನ 19 ಕೋಟಿ ರೂ, ನಾಲ್ಕನೇ ದಿನ 7.50 ಕೋಟಿ ರೂ. ಮತ್ತು ಐದನೇ ದಿನ 7.25 ಕೋಟಿ ರೂ. ಗಳಿಸಿತ್ತು. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಮಂಗಳವಾರ 100 ಕೋಟಿ ಗಳಿಸಿದೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾಗೆ ಕಾಂಪಿಟೇಶನ್ ಕೊಡಲು ಯಾವುದೇ ಹಿಂದಿ ಸಿನಿಮಾಗಳು ಸದ್ಯ ಬಿಡುಗಡೆ ಕಂಡಿಲ್ಲ. ಆದರೆ ಹಾಲಿವುಡ್ ಸಿನಿಮಾಗಳಾದ ಓಪನ್ಹೈಮರ್ ಮತ್ತು ಬಾರ್ಬಿಯೊಂದಿಗೆ ಜನರನ್ನು ಸೆಳೆಯಲು ಕರಣ್ ಜೋಹರ್ ಚಿತ್ರ ಹೆಚ್ಚು ಪ್ರಯತ್ನಿಸುತ್ತಿದೆ. ವರದಿಗಳ ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ 178 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡಿದೆ. 2300 ಪರದೆಗಳಲ್ಲಿ (2000 ಭಾರತ ಮತ್ತು 300 ವಿದೇಶ) ಶುಕ್ರವಾರ ಬಿಡುಗಡೆಯಾಗಿತ್ತು.
ಇದನ್ನೂ ಓದಿ: ಬಾಕ್ಸ್ ಆಫೀಸ್.. ಐದನೇ ದಿನಕ್ಕೆ 100 ಕೋಟಿಯ ಕ್ಲಬ್ ಸೇರಿದ ರಣವೀರ್ - ಆಲಿಯಾ ಚಿತ್ರ
ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ರೋಮ್ಯಾಂಟಿಕ್ ಡ್ರಾಮಾ ಜೊತೆಗೆ ಕೌಟುಂಬಿಕ ಮನೋರಂಜನೆ ನೀಡುವ ಚಿತ್ರ ಇದಾಗಿದೆ. ನಟಿ ಆಲಿಯಾ ಭಟ್ ತಾಯ್ತನದ ಬಳಿಕ ಬಿಡುಗಡೆಯಾದ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅವರು ತಮ್ಮ ಸೂಪರ್ ಹಿಟ್ ಪೇರ್ ಎಂದೇ ಗುರುತಿಸಿಕೊಂಡಿರುವ ನಟ ರಣ್ವೀರ್ ಸಿಂಗ್ ಜೊತೆ ರೋಮ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರ ಹೊರತಾಗಿ ಚಿತ್ರದಲ್ಲಿ ಅದ್ಧೂರಿ ತಾರಾಗಣ ಇದೆ. ನಟಿ ಜಯಾ ಬಚ್ಚನ್, ಶಾಬಾನಾ ಅಜ್ಮಿ, ಧರ್ಮೇಂದ್ರ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಕರಣ್ ಜೋಹರ್ 2016 ರಲ್ಲಿ ಕೊನೆಯದಾಗಿ 'ಏ ದಿಲ್ ಹೈ ಮುಷ್ಕಿಲ್' ಸಿನಿಮಾ ನಿರ್ದೇಶಿಸಿದ್ದರು. ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದು, ಕಥೆ ಮತ್ತು ನಿರ್ದೇಶನ ಶೈಲಿಯನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚಿದ್ದಾರೆ.
ಇದನ್ನೂ ಓದಿ: 93ರ ಅಜ್ಜನೊಂದಿಗೆ ಡ್ಯಾನ್ಸ್ ಮಾಡಿದ ರಣ್ವೀರ್ ಸಿಂಗ್.. ಆನ್ಲೈನ್ಲ್ಲಿ ಜುಮ್ಕಾ ಸಾಂಗ್ ಸದ್ದು