ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್, ಈಗ ಇಂಡಸ್ಟ್ರಿಯಲ್ಲಿ ರೇಸ್ನಲ್ಲಿರುವ ಓಡುವ ಕುದುರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ಕಲೆಕ್ಷನ್ ಮಾಡುವ ಮೂಲಕ ಯಶ್ ಸ್ಟಾರ್ಡಮ್ ಆಕಾಶದೆತ್ತರಕ್ಕೇರಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ದೊಡ್ಡ ಮಟ್ಟದ ಸಕ್ಸಸ್ನಿಂದ ಯಶ್ ಮುಂದಿನ ಸಿನಿಮಾ ಯಾವುದು? ಯಶ್ ಸಿನಿಮಾ ಮಾಡಿದರೆ ಕನ್ನಡದಲ್ಲೇ ಮಾಡ್ತಾರಾ ಅಥವಾ ಹಿಂದಿ ಅಥವಾ ತೆಲುಗಿನಲ್ಲಿ ಮಾಡ್ತಾರಾ? ಯಾವ ನಿರ್ದೇಶಕನ ಜೊತೆ ಯಶ್ ಮುಂದಿನ ಚಿತ್ರ? ಎಂಬೆಲ್ಲಾ ಕುತೂಹಲಗಳಿದ್ದವು. ಅಷ್ಟೇ ಅಲ್ಲಾ, ಗಾಂಧಿನಗರದಲ್ಲಿ ಸಿನಿಮಾ ಪಂಡಿತರು ಹೇಳುವ ಪ್ರಕಾರ, ಯಶ್ ಓರ್ವ ಕನ್ನಡದ ನಿರ್ದೇಶಕರ ಜೊತೆ ಸಿನಿಮಾ ಮಾಡುವ ಮಾತುಕಥೆ ಆಗಿತ್ತು. ಅದರಂತೆ ಕನ್ನಡದಲ್ಲಿ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿರೋ, ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಜೊತೆ ರಾಕಿ ಬಾಯ್ ಸಿನಿಮಾ ಮಾಡೋದು ಪಕ್ಕಾ ಅಂತಾ ಹೇಳಲಾಗ್ತಿದೆ.
ದೀಪಾವಳಿ ಹಬ್ಬದ ಅಂಗವಾಗಿ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗುವ ಸಾಧ್ಯತೆ ಇದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಜೊತೆಗೆ ಲವ್ ಸ್ಟೋರಿ ಸಿನಿಮಾವಂತೆ. ಯಶ್ ಕಥೆ ಕೇಳಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ನರ್ತನ್ ನಿರ್ದೇಶನ, ಕೆವಿಎನ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಯಶ್ 19ನೇ ಸಿನಿಮಾ ಬರುವುದು ಖಚಿತ ಅಂತಾ ಗಾಂಧಿ ನಗರದ ಮೂಲಗಳು ಹೇಳುತ್ತಿವೆ. ಒಟ್ಟಾರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಆದ್ಮಲೇ ಯಶ್, ಯಾವ ನಿರ್ದೇಶಕನ ಜೊತೆ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು.
(ಓದಿ: ದಾಖಲೆಗಳೆಲ್ಲ ಧೂಳಿಪಟ.. ಕಾಂತಾರ - ಕರ್ನಾಟಕದಲ್ಲಿ ಅತೀ ಹೆಚ್ಚು ಜನ ವೀಕ್ಷಿಸಲ್ಪಟ್ಟ ಚಿತ್ರ)