ETV Bharat / entertainment

'ಯಶ್​ ಸಿನಿಮಾ ಅಪ್​ಡೇಟ್​ ನೀಡಿಲ್ಲಾಂದ್ರೆ ಸ್ಟ್ರೈಕ್​': ರಾಧಿಕಾಗೆ ಫ್ಯಾನ್ಸ್​ ಆವಾಜ್​ - ಈಟಿವಿ ಭಾರತ ಕನ್ನಡ

ರಾಧಿಕಾ ಪಂಡಿತ್​ ಫೋಟೋಗೆ ಯಶ್​ ಅಭಿಮಾನಿಯೊಬ್ಬರು ಮಾಡಿರುವ ಕಮೆಂಟ್​ ಸಖತ್​ ವೈರಲ್​ ಆಗುತ್ತಿದೆ.

movie
ರಾಧಿಕಾ ಪಂಡಿತ್
author img

By

Published : Apr 1, 2023, 4:05 PM IST

ಚಂದನವನದ ಎವರ್​ಗ್ರೀನ್​ ಬ್ಯೂಟಿಫುಲ್​ ನಟಿ ರಾಧಿಕಾ ಪಂಡಿತ್​ ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತಾರೆ. ಹೊಸ ಫೋಟೋಗಳನ್ನು ಶೇರ್​ ಮಾಡುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಮಾರ್ಚ್​ ಮೊದಲ ವಾರದಲ್ಲಿ ರಾಧಿಕಾ ಹುಟ್ಟುಹಬ್ಬವಿದ್ದು, ಅವರು ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ಹಾರಿದ್ದರು. ಅಲ್ಲೇ ತಮ್ಮ ಬರ್ತ್​ಡೇಯನ್ನು ಆಚರಿಸಿಕೊಂಡಿದ್ದರು. ಇದೀಗ ಫಾರಿನ್​ ಟ್ರಿಪ್​ ಫೋಟೋವನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ರಾಕಿ ಬಾಯ್​ ಫ್ಯಾನ್ಸ್​ ಮಾಡಿರೋ ಕಮೆಂಟ್​ಗಳು ಸಖತ್​ ವೈರಲ್​ ಆಗಿವೆ.

ಮಾರ್ಚ್ 7ರಂದು ರಾಧಿಕಾ ಪಂಡಿತ್​ ಬರ್ತ್​ಡೇ ಇತ್ತು. ಆ ದಿನದಂದು ಪತಿ ಯಶ್​, ಮಕ್ಕಳು ಮತ್ತು ಕುಟುಂಬದವರ ಜೊತೆ ನಟಿ ಟ್ರಿಪ್​ಗೆಂದು ವಿದೇಶಕ್ಕೆ ತೆರಳಿದ್ದರು. ಅಂದು ಅಲ್ಲಿ ಕ್ಲಿಕ್ಕಿಸಿದ ಚಂದನೆಯ ಫೋಟೋವನ್ನು ಇಂದು ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಫೋನ್​ ಹಿಡಿದು ಪೋಸ್​ ಕೊಟ್ಟಿರುವ ನಟಿಯ ಬ್ಯೂಟಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಮೂರೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್​ಗಳು ಬಂದಿವೆ. ಅಲ್ಲದೇ ಹೊಗಳಿಕೆಯ ಕಮೆಂಟ್​ ಕೂಡ ಸಿಕ್ಕಿದೆ. ಆದರೆ ಫೋಟೋಗೆ ಯಶ್​ ಅಭಿಮಾನಿಯೊಬ್ಬರು ಮಾಡಿರೋ ಕಮೆಂಟ್​ಗಳು​ ವೈರಲ್​ ಆಗಿವೆ.

"ಅತ್ತಿಗೆ, ಯಶ್​ ಅವರ 19ನೇ ಸಿನಿಮಾದ ಬಗ್ಗೆ ಅಪ್​ಡೇಟ್​ ನೀಡಿ. ಇಲ್ಲಂದ್ರೆ ಸ್ಟ್ರೈಕ್​ ಮಾಡ್ತೀವಿ" ಅಂತಾ ಫ್ಯಾನ್ಸ್ ಒಬ್ಬರು​ ಹೇಳಿದ್ದಾರೆ. ಕೆಜಿಎಫ್​ನಂತಹ ಸೂಪರ್​ ಹಿಟ್​ ಸಿನಿಮಾಗಳನ್ನು ಮಾಡಿರುವ ಯಶ್​ ಆ ಬಳಿಕ ಯಾವುದೇ ಚಿತ್ರಗಳನ್ನೂ ಅನೌನ್ಸ್ ಮಾಡಿಲ್ಲ. ಹೀಗಾಗಿ ಫ್ಯಾನ್ಸ್​ ಅವರ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಅಲ್ಲದೇ ಈ ಬಾರಿ ಯಶ್​ ತಮ್ಮ ಹುಟ್ಟುಹಬ್ಬಕ್ಕೂ ಫ್ಯಾನ್ಸ್​ಗೆ ಸಿಕ್ಕಿರಲಿಲ್ಲ. ಜೊತೆಗೆ ತಮ್ಮ ಮುಂದಿನ​ ಫಿಲ್ಮ್​ ಬಗ್ಗೆನೂ ಮಾಹಿತಿ ನೀಡುತ್ತಿಲ್ಲ. ಹೀಗಾಗಿಯೇ ಅಭಿಮಾನಿಗಳಿಗೆ ಯಶ್​ ಮೇಲೆ ಕೊಂಚ ಅಸಮಾಧಾನವಿದ್ದು, ಇದೀಗ ರಾಧಿಕಾ ಬಳಿ ಕೇಳುತ್ತಿದ್ದಾರೆ.

ಇದನ್ನೂ ಓದಿ: 'ದಿ ಫಾಲನ್​' ಆಗಿ ಬಂದ್ರು ಅನುಪಮಾ ಗೌಡ: ಇಂದು ಟ್ರೇಲರ್​ ರಿಲೀಸ್​

ಯಶ್​ ಕೊನೆಯ ಸೂಪರ್​ ಹಿಟ್ ಚಿತ್ರ ಕೆಜಿಎಫ್​ 2 ರಿಲೀಸ್​ ಆಗಿ 11 ತಿಂಗಳು ಕಳೆದುಹೋಗಿದೆ. ಆದರೆ ಯಶ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವಿಲ್ಲ. ಶಂಕರ್ ಜೊತೆ ಸಿನಿಮಾ ಮಾಡ್ತಾರೆ, ಹೊಂಬಾಳೆಯಲ್ಲಿ ನೀಲ್ ಜೊತೆ ಕೆಜಿಫ್ 3 ಮಾಡ್ತಾರೆ ಎಂದು ಅಂದಾಜಿಸಲಾಗಿತ್ತು. ಟಾಲಿವುಡ್, ಮಾಲಿವುಡ್ ನಿರ್ದೇಶಕರ ಹೆಸರು ಯಶ್ 19ನೇ ಸಿನಿಮಾ ಜೊತೆ ಕೇಳಿಬಂದಿತ್ತು. ಆದ್ರೆ ಯಾವುದರ ಬಗ್ಗೆಯೂ ಅಧಿಕೃತ ಘೋಷಣೆ ಅಗಿಲ್ಲ. ಹೀಗಾಗಿಯೇ ಪ್ಯಾನ್ ಇಂಡಿಯಾ ಸ್ಟಾರ್​ನ ಮುಂದಿನ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

ಇದಲ್ಲದೇ ಕೋಟಿ ಕೋಟಿ ಸಂಭಾವನೆ ಸಿಗುವ ಇಂಟರ್​ನ್ಯಾಷನಲ್ ಜಾಹೀರಾತಿ​ನಲ್ಲಿ ನಟ ಯಶ್​ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ರೊಮ್ಯಾನ್ಸ್ ಮಾಡಿದ್ದ ಯಶ್ ಇದೀಗ ವಿಶ್ವದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರೋ ಪೆಪ್ಸಿ ಕೂಲ್ ಡ್ರಿಂಕ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ‌. ಸ್ಟೈಲಿಶ್ ಲುಕ್‌ನಲ್ಲಿ ಪೆಪ್ಸಿ ಬಾಟಲ್ ಹಿಡಿದು ಪೋಸ್ ಕೊಟ್ಟಿದ್ದಾರೆ. ರಾಕಿ ಬಾಯ್ ನಯಾ ಅವತಾರಕ್ಕೆ ಅಭಿಮಾನಿಗಳು ಕೂಡ‌‌ ಫಿದಾ ಆಗಿದ್ದಾರೆ.

ಇದನ್ನೂ ಓದಿ: NMACC ಸಮಾರಂಭದಲ್ಲಿ ನೀತಾ ಅಂಬಾನಿ ನೃತ್ಯ: ಸೊಸೆಯ ಬೇಬಿ ಬಂಪ್ ಫೋಟೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.