ETV Bharat / entertainment

'ಕನಸೊಂದು ಸಿನಿಮಾ ಆಗಿ ತೆರೆಮೇಲೆ ಮೂಡಿದ ಆ ದಿನಕ್ಕೆ 5 ವರ್ಷ': ರಿಷಬ್​ ಶೆಟ್ಟಿ ಸ್ಪೆಷಲ್​ ಪೋಸ್ಟ್

Rishab Shetty special post: ನಟ ರಿಷಬ್​ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

Rishab Shetty
ನಟ ರಿಷಬ್​ ಶೆಟ್ಟಿ
author img

By ETV Bharat Karnataka Team

Published : Aug 23, 2023, 4:12 PM IST

ನಟ, ನಿರ್ಮಾಪಕ ಹಾಗು ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವವರು ರಿಷಬ್​ ಶೆಟ್ಟಿ. ಇವರ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ನಟನ ಪ್ರತಿಭೆಗೆ 'ಕಾಂತಾರ' ಎಂಬ ಒಂದು ಹೆಸರು ಸಾಕಲ್ಲವೇ?. ಇಡೀ ವಿಶ್ವಾದ್ಯಂತ ಸದ್ದು ಮಾಡಿದ ಸಿನಿಮಾ ಇದು. ಕನ್ನಡ ಚಿತ್ರರಂಗದ ಖ್ಯಾತಿಯನ್ನು ಜಗದಗಲ ಪಸರಿಸಿದ ಕೀರ್ತಿ ರಿಷಬ್​ ಶೆಟ್ಟಿ ಅವರಿಗೆ ಸಲ್ಲುತ್ತದೆ. ನಟನ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರಿಗೂ ಅಪಾರ ನಿರೀಕ್ಷೆಯಿದೆ. ಇಂಥ ಸಮಯದಲ್ಲಿ ಡಿವೈನ್​ ಸ್ಟಾರ್​ ಆಕರ್ಷಕ​ ವಿಡಿಯೋ ಶೇರ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲೊಂದು. ಕನ್ನಡ ಶಾಲೆ ಉಳಿಸುವ ಸಂದೇಶ ಸಾರುವ ಚಿತ್ರವಿದು. ಸಾಮಾಜಿಕ ಕಳಕಳಿ ಹೊಂದಿದ ಕಥೆಯನ್ನು ಸಿನಿಪ್ರಿಯರು ಮೆಚ್ಚಿಕೊಂಡು ಚಿತ್ರತಂಡವನ್ನು ಕೊಂಡಾಡಿದ್ದರು. ಈ ಚಿತ್ರ ತೆರೆಕಂಡು ನಾಳೆಗೆ 5 ವರ್ಷವಾಗುತ್ತಿದೆ. 2018ರ ಆಗಸ್ಟ್ 24ರಂದು ಸಿನಿಮಾ ಸಿಲ್ವರ್‌ ಸ್ಕ್ರೀನ್‌ನಲ್ಲಿ ಬಿಡುಗಡೆಯಾಗಿತ್ತು.

5 ವರ್ಷ!: ಕಥೆ, ಚಿತ್ರಕಥೆ, ನಿರ್ದೇಶನ ಹಾಗು ನಿರ್ಮಾಣದ ಜವಾಬ್ದಾರಿಯನ್ನು ರಿಷಬ್​ ಶೆಟ್ಟಿಯವರೇ ನಿರ್ವಹಿಸಿದ್ದರು. ಹಿರಿಯ ನಟ ಅನಂತ್​ ನಾಗ್​ ಸೇರಿ ಹಲವರು ಬಣ್ಣ ಹಚ್ಚಿದ್ದರು. 2 ಕೋಟಿ ರೂ ಬಂಡವಾಳದಲ್ಲಿ ರೆಡಿಯಾದ ಸಿನಿಮಾ 20 ಕೋಟಿಗೂ ಅಧಿಕ ಹಣ ಸಂಪಾದಿಸುವಲ್ಲಿ ಯಶಸ್ವಿ ಆಗಿತ್ತು. ಚಿತ್ರ ತೆರೆಕಂಡು 5 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಿಷಬ್​ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಿಷಬ್​ ಶೆಟ್ಟಿ ಪೋಸ್ಟ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಸ್ಪೆಷಲ್​ ವಿಡಿಯೋ ಶೇರ್ ಮಾಡಿರುವ ನಟ, 'ಕನಸು ಕಂಡ ಭಾಷೆಯಲ್ಲಿ ಮಗುವಿಗೆ ಶಿಕ್ಷಣ ಸಿಗಬೇಕೆಂಬ ಆಶಯ, ಕನಸು ಕಂಡ ಕಥೆಯನ್ನು ಜಗಕ್ಕೆ ಹೇಳಬೇಕೆಂಬ ಆಕಾಂಕ್ಷೆ, ಇದೆರಡೂ ಒಂದಾಗಿ ಕನಸೊಂದು ಸಿನಿಮಾವಾಗಿ ತೆರೆ ಮೇಲೆ ಮೂಡಿದ ಆ ದಿನಕ್ಕಿಂದು ಐದು ವರ್ಷ!' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಶಿವಣ್ಣ, ರಿಷಬ್​ ಶೆಟ್ಟಿ, ಯೋಗರಾಜ್​ ಭಟ್​ ಸೇರಿ ಸಿನಿ ಗಣ್ಯರಿಂದ ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಕೆ

ನೆಟ್ಟಿಗರು ಹೀಗಂದ್ರು: ಪೋಸ್ಟ್ ಶೇರ್ ಆಗುತ್ತಿದ್ದಂತೆ ಅಭಿಮಾನಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಎಷ್ಟು ಸಲ ನೋಡಿದರೂ ಮತ್ತೆ ನೋಡಬೇಕೆನ್ನುವ ಅರ್ಥಪೂರ್ಣ ಚಿತ್ರ' ಎಂದು ಮೆಚ್ಚಿದ್ದಾರೆ. ಮತ್ತೋರ್ವರು ಕಾಮೆಂಟ್​ ಮಾಡಿ, 'ಎಂಥ ಅದ್ಭುತ ಯೋಚನೆ ನಿಮ್ಮದು. ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ಕೃತಜ್ಞತೆಗಳು' ಎಂದು ಕೊಂಡಾಡಿದ್ದಾರೆ. 'ನನ್ನ ಮೆಚ್ಚಿನ ಚಿತ್ರಗಳಲ್ಲೊಂದು' ಎಂದು ಅಭಿಮಾನಿಯೋರ್ವರು ಖುಷಿಪಟ್ಟಿದ್ದಾರೆ. ಉಳಿದಂತೆ, ಈ ಸಿನಿಮಾ ಬಗ್ಗೆ ಮತ್ತು ರಿಷಬ್​ ಶೆಟ್ಟಿ ಅವರ ಸಿನಿಮಾ ಕಡೆಗಿನ ಒಲವಿನ ಕುರಿತು ನೆಟ್ಟಿಗರು ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ! ಸ್ಯಾಂಡಲ್​ವುಡ್​ ಜನಪ್ರಿಯ ನಟ ಡಾಲಿ ಧನಂಜಯ್​ ಸಿನಿಪಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.