ETV Bharat / entertainment

'ಕಾಂತಾರ'ಗೆ ಮತ್ತೆರಡು ಗರಿ: 'ಗೇಮ್​ ಚೇಂಜರ್​' ರಿಷಬ್​, 'ರೈಸಿಂಗ್​ ಸ್ಟಾರ್' ಸಪ್ತಮಿ - ಈಟಿವಿ ಭಾರತ ಕನ್ನಡ

'ಒಟಿಟಿ ಚೇಂಜ್​ ಮೇಕರ್ಸ್​' ಕಾರ್ಯಕ್ರಮದಲ್ಲಿ ರಿಷಬ್​ ಶೆಟ್ಟಿಗೆ 'ಗೇಮ್​ ಚೇಂಜರ್​' ಮತ್ತು ಸಪ್ತಮಿ ಗೌಡಗೆ 'ರೈಸಿಂಗ್​ ಸ್ಟಾರ್​ ಆಫ್​ ದಿ ಇಯರ್​' ಪ್ರಶಸ್ತಿ ಲಭಿಸಿದೆ.

kantara
ಕಾಂತಾರ
author img

By

Published : Mar 27, 2023, 8:03 PM IST

ಚಂದನವನದಲ್ಲಿ 'ಕಾಂತಾರ' ಸಿನಿಮಾ ದೊಡ್ಡ ಮಟ್ಟದಲ್ಲೇ ಇತಿಹಾಸ ಸೃಷ್ಟಿಸಿದೆ. ಸಾಲು ಸಾಲು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕಾಂತಾರ ಸಿನಿಮಾಗೆ ಮತ್ತೆರಡು ಪ್ರಶಸ್ತಿಗಳು ಸಂದಿವೆ. ನಟ ರಿಷಬ್​ ಶೆಟ್ಟಿ 'ಒಟಿಟಿ ಚೇಂಜ್​ ಮೇಕರ್ಸ್​' ಕಾರ್ಯಕ್ರಮದಲ್ಲಿ 'ಗೇಮ್​ ಚೇಂಜರ್​' ಅವಾರ್ಡ್​ ಪಡೆದುಕೊಂಡಿದ್ದಾರೆ. ಕಾಂತಾರ ನಾಯಕಿ ಸಪ್ತಮಿ ಗೌಡಗೆ 'ರೈಸಿಂಗ್​ ಸ್ಟಾರ್​ ಆಫ್​ ದಿ ಇಯರ್​' ಪ್ರಶಸ್ತಿ ಲಭಿಸಿದೆ.

ವೇದಿಕೆಯಲ್ಲಿ ಅವಾರ್ಡ್​ ಸ್ವೀಕರಿಸಿ ಮಾತನಾಡಿರುವ ರಿಷಬ್​ ಶೆಟ್ಟಿ, ಪ್ರೇಕ್ಷಕರು ನನ್ನ ಪಾಲಿನ ಗೇಮ್ ಚೇಂಜರ್​ ಎಂದು ಹೇಳಿದ್ದಾರೆ. ಜೊತೆಗೆ ಪ್ರಶಸ್ತಿ ಪಡೆದ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟ, "ಕನ್ನಡಿಗರ ಆಶೀರ್ವಾದ ಮತ್ತು ಬೆಂಬಲಕ್ಕೆ ನಾನು ಸದಾ ಚಿರಋಣಿ" ಎಂದು ಬರೆದುಕೊಂಡಿದ್ದಾರೆ. ಇನ್ನು ಸಪ್ತಮಿ ಗೌಡ ಕೂಡ ಪ್ರಶಸ್ತಿ ಹಿಡಿದ ಫೋಟೋವನ್ನು ಶೇರ್​ ಮಾಡಿಕೊಂಡು, "ನನಗೆ ರೈಸಿಂಗ್​ ಸ್ಟಾರ್​ ಆಫ್​ ದಿ ಇಯರ್​ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಚೇಂಜ್​ ಮೇಕರ್ಸ್​ಗೆ ನನ್ನ ಧನ್ಯವಾದ. ಸ್ಪೆಷಲ್​ ಥ್ಯಾಂಕ್ಸು ಟು ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್​ ಮತ್ತು ಇಡೀ ಕಾಂತಾರ ತಂಡಕ್ಕೆ" ಎಂದು ಕ್ಯಾಪ್ಶನ್​ ಹಾಕಿಕೊಂಡಿದ್ದಾರೆ.

ಸಾಂಪ್ರದಾಯಿಕ ಲುಕ್​ನಲ್ಲಿ ಕಾಂತಾರ ಸ್ಟಾರ್​​: ನಟ ರಿಷಬ್​ ಶೆಟ್ಟಿ ಅಭಿಮಾನಿಗಳ ಮನಸ್ಸು ಗೆದ್ದದ್ದು ಪ್ರಶಸ್ತಿಯಿಂದಲ್ಲ. ಬದಲಾಗಿ ಅವರ ಸಾಂಪ್ರದಾಯಿಕ ಲುಕ್​, ಭಾಷಣ ವಿಶೇಷವಾಗಿ ಕನ್ನಡಿಗರನ್ನು ಸೆಳೆದಿದೆ. ಬಿಳಿ ಬಣ್ಣದ ಪಂಚೆ ಮತ್ತು ಶರ್ಟ್​ ಧರಿಸಿ ಟ್ರೆಡಿಷನಲ್​ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕರು ಇಂಗ್ಲಿಷ್​ನಲ್ಲಿ ಪ್ರಶ್ನೆ ಕೇಳಿದರೂ ಅವರು ಹಿಂದಿಯಲ್ಲೇ ಉತ್ತರಿಸಿ ಶೈನ್​ ಆಗಿದ್ದಾರೆ. ಈ ಹಿನ್ನೆಲೆ ಇನ್​ಸ್ಟಾಗ್ರಾಮ್​ನಲ್ಲಿ ನಟನಿಗೆ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದೆ.

ಇದನ್ನೂ ಓದಿ: 39ನೇ ವರ್ಷಕ್ಕೆ ಕಾಲಿಟ್ಟ 'ಆಸ್ಕರ್‌' ವಿಜೇತ ಗ್ಲೋಬಲ್‌ ಸ್ಟಾರ್ ರಾಮ್ ಚರಣ್

ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, "ದಕ್ಷಿಣ ಭಾರತದ ಜನರು ಎಂದಿಗೂ ತಮ್ಮ ಸಂಪ್ರದಾಯವನ್ನು ಮರೆಯುವುದಿಲ್ಲ. ಅವರು ಎಂದಿಗೂ ಹೆಮ್ಮೆಯಿಂದ ಟ್ರೆಡಿಷನಲ್​ ಡ್ರೆಸ್​ಗಳನ್ನೇ ಧರಿಸುತ್ತಾರೆ. ಮಹಿಳೆಯರು ಹೆಚ್ಚಾಗಿ ಸೀರೆಯನ್ನೇ ಉಡುತ್ತಾರೆ. ಸಂಪ್ರದಾಯಗಳೇ ನಮ್ಮ ಬೇರು ಎಂಬುದನ್ನು ಇಂತಹವರಿಂದಲೇ ಕಲಿಯಬೇಕು" ಎಂದು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು, "ನೀವು ಲುಂಗಿ ಧರಿಸಿದ್ದು ನಮಗೆ ಹೆಮ್ಮೆಯಾಗಿದೆ" ಎಂದು ಬರೆದಿದ್ದಾರೆ. "ನಾವು ಕನ್ನಡಿಗರು ಇತರೆ ಭಾಷೆಗಳನ್ನು ಪ್ರಪಂಚದ ಇತರರಿಗಿಂತ ಹೆಚ್ಚಾಗಿ ಗೌರವಿಸುತ್ತೇವೆ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಲೈಫ್​ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್​ ಶೆಟ್ಟಿ ಅತ್ಯುತ್ತಮ ನಟ

'ಕಾಂತಾರ'ಗೆ ಬಾಲಿವುಡ್​ ಲೈಫ್​ ಅವಾರ್ಡ್ಸ್: ಕಾಂತಾರ ಸಿನಿಮಾಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಸಿಕ್ಕಿವೆ. ನಿನ್ನೆಯಷ್ಟೇ ಬಾಲಿವುಡ್​ ಲೈಫ್​ ಅವಾರ್ಡ್ಸ್​ನ ದಕ್ಷಿಣ ಸಿನಿಮಾ ವಿಭಾಗದಲ್ಲಿ ಕಾಂತಾರ ಸಿನಿಮಾಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ರಿಷಬ್​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಕಾಂತಾರ- 2 ಕಥೆಯ ಬರವಣಿಗೆ ಪ್ರಾರಂಭಿಸಿರುವ ಶೆಟ್ರಿಗೆ ಈ ಪ್ರಶಸ್ತಿಗಳು ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಬರ್ತ್​ಡೇ ದಿನ ರಾಮ್​ ಚರಣ್ 'ಗೇಮ್​ ಚೇಂಜರ್'​; ಫಸ್ಟ್​ ಲುಕ್ ನೋಡಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.