ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೋಳಿ ಆಚರಣೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಪುರುಷರ ಗುಂಪೊಂದು ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ. ವಿಡಿಯೋವನ್ನು ಹಂಚಿಕೊಂಡ ನಟಿ "ಈ ಪುರುಷರನ್ನು ಬಂಧಿಸಿ" ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ವಿಡಿಯೋವನ್ನು ಶೇರ್ ಮಾಡಿದ ರಿಚಾ ಆ ವ್ಯಕ್ತಿಗಳನ್ನು ಬಂಧಿಸುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸುವ ವಿಡಿಯೋಗೆ ಜನರಿಂದ ಬೆಂಬಲ ವ್ಯಕ್ತವಾಗಿದೆ.
-
Arrest these men https://t.co/zgC1bDh1kB
— RichaChadha (@RichaChadha) March 10, 2023 " class="align-text-top noRightClick twitterSection" data="
">Arrest these men https://t.co/zgC1bDh1kB
— RichaChadha (@RichaChadha) March 10, 2023Arrest these men https://t.co/zgC1bDh1kB
— RichaChadha (@RichaChadha) March 10, 2023
ವೀಡಿಯೊದಲ್ಲಿ ವಿದೇಶಿ ಪ್ರವಾಸಿಗರಿಗೆ ತೊಂದರೆ ನೀಡುತ್ತಿರುವ ವ್ಯಕ್ತಿಗಳನ್ನು ಬಂಧಿಸಲು ರಿಚಾ ಅವರ ವಿನಂತಿಯನ್ನು ಜನರು ಬೆಂಬಲಿಸಿದ್ದಾರೆ. "ಇದು ಪುರುಷರಿಗೆ ನಾಚಿಕೆಗೇಡು. ಇದು ಹಿಂದೂ ಸಂಸ್ಕೃತಿಯೇ? ಇಂತಹ ಜನರ ವಿರುದ್ಧ ಧ್ವನಿ ಎತ್ತುವ ಅವಶ್ಯಕತೆ ಇದೆ. ಇದು ಎಂದಿಗೂ ನಮ್ಮ ಸಂಸ್ಕೃತಿ ಆಗಲಾರದು" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಜೊತೆಗೆ ಅನೇಕ ಟ್ವಿಟರ್ ಬಳಕೆದಾರರು ಇದೇ ರೀತಿಯಾಗಿ ಟ್ವೀಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾಂತಾರ ಸ್ಟಾರ್ ಪುತ್ರಿ ರಾದ್ಯ ಬರ್ತ್ ಡೇ ಪಾರ್ಟಿಗೆ ಸಾಕ್ಷಿಯಾದ ಸೆಲೆಬ್ರಿಟಿಗಳು
ಈ ವಿಡಿಯೋ ತುಣುಕನ್ನು ಮೊದಲಿಗೆ ರಾಮ್ ಸುಬ್ರಮಣಿಯನ್ ಎಂಬವರು ಶೇರ್ ಮಾಡಿದ್ದರು. ಅಲ್ಲದೇ, "ನಿಮ್ಮ ಸಹೋದರಿ, ತಾಯಿ ಅಥವಾ ಹೆಂಡತಿಯನ್ನು ಈ ಜಾಗದಲ್ಲಿ ಕಲ್ಪಿಸಿಕೊಳ್ಳಿ? ಬಹುಶಃ ನಿಮಗೆ ಆಗ ಅರ್ಥವಾಗಬಹುದು" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಕೈಬಿಟ್ಟ ತಕ್ಷಣ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗಕ್ಕೆ ತೆಗೆದುಕೊಂಡು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ನಟಿ ರಿಚಾ ಚಡ್ಡಾ ವಿಡಿಯೋ ಶೇರ್ ಮಾಡಿ ಅಂತಹ ವ್ಯಕ್ತಿಗಳನ್ನು ಅರೆಸ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ತೇಜ್ರಾನ್ ಬ್ರೇಕ್ ಅಪ್ ವದಂತಿಗೆ ಫುಲ್ ಸ್ಟಾಪ್ ಇಟ್ಟ ನಟಿ ತೇಜಸ್ವಿ ಪ್ರಕಾಶ್
ಮಹಿಳೆ ಪರ ಧ್ವನಿ ಎತ್ತುವ ನಟಿ: ಫುಕ್ರೆ ನಟಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದರಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಮಹಿಳಾ ಸಬಲೀಕರಣ ವಿಷಯವಾಗಿ ಪದೇ ಪದೆ ಅವರು ಧ್ವನಿ ಎತ್ತುತ್ತಿರುತ್ತಾರೆ. ಇನ್ನು ಅವರ ಸಿನಿಮಾ ವಿಚಾರಕ್ಕೆ ಬಂದರೆ, ರಿಚಾ ಚಡ್ಡಾ ಹೀರಾಮಂಡಿ ಸೀರೀಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನ ವೆಬ್ ಸರಣಿಯಾಗಿದೆ. ಸಂಜಯ್ ಲೀಲಾ ಬನ್ಸಾಲಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಸೋನಾಕ್ಷಿ ಸಿನ್ಹಾ, ಮನಿಶಾ ಕೊಯಿರಾಲಾ, ಫರ್ದೀನ್ ಖಾನ್, ಅದಿತಿ ರಾವ್ ಹೈದರಿ ಮತ್ತು ಪರೇಶ್ ಪಹುಜಾ ನಟಿಸಿದ್ದಾರೆ.
ದೇಶಾದ್ಯಂತ ಹೋಳಿ ಹಬ್ಬವನ್ನು ಪ್ರತಿ ವರ್ಷ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಜೊತೆಯಾಗಿ ಸೇರಿ ಬಣ್ಣದ ಓಕುಳಿಯಲ್ಲಿ ಮಿಂದೇಳುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿ ಹೋಳಿಯನ್ನು ಸಂಭ್ರಮಿಸುತ್ತಾರೆ. ಇಂತಹ ಶುಭ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸ್ವರಾ ಫಹಾದ್ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ