ETV Bharat / entertainment

'ಕೆಡಿ' ಆ್ಯಕ್ಷನ್ ಪ್ರಿನ್ಸ್ ರಾಣಿಯಾಗಿ ರೀಷ್ಮಾ ನಾಣಯ್ಯ; ಫಸ್ಟ್ ಲುಕ್ ಔಟ್​ - ಈಟಿವಿ ಭಾರತ ಕನ್ನಡ

ಕೆಡಿ ಸಿನಿಮಾದ ನಾಯಕಿಯಾಗಿ ರೀಷ್ಮಾ ನಾಣಯ್ಯ ಫೈನಲ್ ಆಗಿದ್ದು, ನಿರ್ದೇಶಕ ಜೋಗಿ ಪ್ರೇಮ್​ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.

reeshma
ರೀಷ್ಮಾ ನಾಣಯ್ಯ
author img

By

Published : Apr 28, 2023, 12:36 PM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರೇಜ್​ ಹುಟ್ಟಿಸಿರುವ ಚಿತ್ರ 'ಕೆಡಿ'. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಟೈಟಲ್​ ಮತ್ತು ಟೀಸರ್​ನಲ್ಲಿ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಸದ್ದಿಲ್ಲದೇ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಈಗಾಗಲೇ ಕೆಡಿ ಸಿನಿಮಾ ಶೂಟಿಂಗ್ ಅಡ್ಡಕ್ಕೆ ಬಾಲಿವುಡ್ ನಟ ಸಂಜಯ್ ದತ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಕಾಲಿಟ್ಟಿದ್ದು ಸಿನಿಮಾದ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಿದೆ.

ಈ ಮಧ್ಯೆ ಕ್ರೇಜಿಸ್ಟಾರ್ ರವಿಚಂದ್ರನ್ ಲುಕ್ ರಿವೀಲ್ ಮಾಡಿರೋ ನಿರ್ದೇಶಕ ಜೋಗಿ ಪ್ರೇಮ್ ಚಿತ್ರದ ಬಗ್ಗೆ ಹೊಸ ವಿಷಯ ಅನೌನ್ಸ್​ ಮಾಡುವ ಮೂಲಕ ದಿನೇ‌ ದಿನೆ ಸಿನಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚು ಮಾಡುತ್ತಿದ್ದಾರೆ. ಇದಲ್ಲದೇ ಕೆಡಿ ಆ್ಯಕ್ಷನ್ ಪ್ರಿನ್ಸ್ ರಾಣಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ? ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಕನ್ನಡದ ನಟಿಯರ ಜೊತೆ ಪರಭಾಷೆಯ ನಾಯಕಿಯನ್ನು ಕರೆ ತರುತ್ತಾರೆ ಅಂತ ಹೇಳಲಾಗಿತ್ತು. ಇದೆಲ್ಲಾ ಗೊಂದಲಕ್ಕೂ ಸದ್ಯ ನಿರ್ದೇಶಕ ಜೋಗಿ ಪ್ರೇಮ್ ತೆರೆ ಎಳೆದಿದ್ದಾರೆ.

ಇದೀಗ ಕೊನೆಗೂ ಕೆಡಿ ಸಿನಿಮಾದ ಹೀರೋಯಿನ್ ಫೈನಲ್ ಆಗಿದ್ದು, ನಾಯಕಿಯ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಏಕ್ ಲವ್ ಯಾ ಮತ್ತು ಬಾನದಾರಿಯಲ್ಲಿ ಸಿನಿಮಾದ ಮೂಲಕ ಗಮನ ಸೆಳೆದಿರುವ ರೀಷ್ಮಾ ನಾಣಯ್ಯ ಕೆಡಿ ಸಿನಿಮಾಗೆ ಹೀರೋಯಿನ್​ ಆಗಿ ಸೆಲೆಕ್ಟ್​ ಆಗಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್​ನಲ್ಲಿ ರೀಷ್ಮಾ ನಾಣಯ್ಯ ಟ್ರೆಂಡಿ ಕಾಸ್ಟ್ಯೂಮ್​ನಲ್ಲಿ ಗಂಡು ಬೀರಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಸಿ ಮುದ್ದೆ‌ ಜೊತೆ ಮೂಳೆ ಕಡಿಯುವ ಮೂಲಕ ಹೇಗಿದೆ‌ ನನ್ನ‌‌ ಖದರ್ ಅಂತಿದ್ದಾರೆ.

ಇದನ್ನೂ ಓದಿ: ಕನ್ನಡದ ಬಹುನಿರೀಕ್ಷಿತ ಪ್ರಯೋಗಾತ್ಮಕ ಸಿನಿಮಾಗಳು ಇಂದು ರಿಲೀಸ್

ಈ ಚಿತ್ರದಲ್ಲಿ ಬರುವ ಕಥೆ ಯಾವ ಕಾಲಘಟ್ಟದ್ದು ಅನ್ನೋ ಕುತೂಹಲ ಪ್ರೇಕ್ಷಕರಿಗಿದೆ. ಅದರ ಬಗ್ಗೆ ಹೇಳೋದಾದ್ರೆ, ಇಡೀ ಸಿನಿಮಾ ರೆಟ್ರೋ ಕಾಲಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. 1968 ರಿಂದ 1978 ಕಾಲಘಟ್ಟದಲ್ಲಿಯೇ ಸಿನಿಮಾದ ಕಥೆ ನಡೆಯುತ್ತದೆ. ನಿರ್ದೇಶಕ ಜೋಗಿ ಪ್ರೇಮ್ ಯಾವ ಡಾನ್ ಕಥೆಯನ್ನು ಹೇಳ್ತಿದ್ದಾರೆ ಅನ್ನೋದು ಮಾತ್ರ ರಿವೀಲ್ ಆಗಿಲ್ಲ.

ಆದರೆ ಚಿತ್ರದ ಟೀಸರ್​ನಲ್ಲಿ ಮಾತ್ರ ಭಯಂಕರ 'ಕೆಡಿ'ಯ ಕಥೆಯನ್ನು ಜೋಗಿ ಪ್ರೇಮ್ ಹೇಳ್ತಿದ್ದಾರೆ ಅನ್ನೋದು ಗೊತ್ತಾಗಿದೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್ ಮಾಡಲಿದ್ದು, ಕೆ.ವಿ ಎನ್‌ ಪ್ರೊಡಕ್ಷನ್ ಸಂಸ್ಥೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹು ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್‌ ಕಾಂಬಿನೇಷನ್ ಸಿನಿಮಾ ಎಷ್ಟರ ಮಟ್ಟಿಗೆ ಹಿಟ್​ ಆಗಲಿದೆ ಎಂಬುದು ಚಿತ್ರ ತೆರೆಗೆ ಬಂದ‌ ಬಳಿಕವಷ್ಟೇ ಗೊತ್ತಾಗಲಿದೆ.

ಇದನ್ನೂ ಓದಿ: ಫಿಲ್ಮ್‌ಫೇರ್ ಅವಾರ್ಡ್ಸ್ 2023: ಬರೋಬ್ಬರಿ ಹತ್ತು ಪ್ರಶಸ್ತಿ ಬಾಚಿಕೊಂಡ 'ಗಂಗೂಬಾಯಿ ಕಥಿಯಾವಾಡಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.