ETV Bharat / entertainment

ವಿಭಿನ್ನ ಪೋಸ್ಟರ್​ನಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರಿಯಲ್​ ಸ್ಟಾರ್​! - ರಿಯಲ್​ ಸ್ಟಾರ್ ಉಪೇಂದ್ರ ಹೊಸ ಸಿನೆಮಾ ಪೋಸ್ಟರ್​

ಕುದುರೆಯ ಮುಖದ ಆಕಾರದ ಶೈಲಿಯ ಸಿನಿಮಾ ಪೋಸ್ಟರ್ ಇದಾಗಿದೆ. ಈ ಪೋಸ್ಟರ್​ನಲ್ಲಿ ಸಾಕಷ್ಟು ಸೂಕ್ಷ್ಮ ವಿಷಯಗಳಿವೆ. ಕುದುರೆಯ ಮುಖದ ಮೇಲೆ ಉಪೇಂದ್ರ ಗಾಬರಿಯಿಂದ ನೋಡುತ್ತಿರುವ ಚಿತ್ರ, ಹಳೆ ಕಾಲದ ರೈಲಿನ ಚಿತ್ರವಿದೆ.

real-star-upendra-released-new-movie-poster
ವಿಭಿನ್ನ ಪೋಸ್ಟರ್​ನಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರಿಯಲ್​ ಸ್ಟಾರ್​!
author img

By

Published : Jun 2, 2022, 10:48 PM IST

Updated : Jun 2, 2022, 10:59 PM IST

ಕನ್ನಡ ಚಿತ್ರರಂಗದ ಬುದ್ಧಿವಂತ ನಿರ್ದೇಶಕ ಹಾಗೂ ನಟ ಅಂತಾ ಸಾಬೀತುಪಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ. ಸದ್ಯ 'ಕಬ್ಜ' ಸಿನಿಮಾ ನಡುವೆಯೇ ತಾವು ನಟಿಸಿ, ನಿರ್ದೇಶಿಸುತ್ತಿರುವ ಹೊಸ ಚಿತ್ರದ ವಿಚಿತ್ರ ಪೋಸ್ಟರ್​​ ಬಿಡುಗಡೆ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

ಈ ಹಿಂದೆ 'ಶ್', 'ಎ', 'ಸೂಪರ್', 'ಉಪ್ಪಿ 2' ಚಿತ್ರಗಳು ವಿಭಿನ್ನತೆ ಜೊತೆಗೆ ಸಿಕ್ಕಾಪಟ್ಟೆ ಸದ್ದು ಮಾಡಿದ ಶೀರ್ಷಿಕೆ ಹೊಂದಿದ್ದವು. ಇದೀಗ ಮತ್ತೆ ಅದೇ ಸೂತ್ರ ಬಳಸುವ ಮೂಲಕ ಉಪೇಂದ್ರ ನಾನು ವಿಭಿನ್ನ ಅಂತಾ ತೋರಿಸಿದ್ದಾರೆ. ಹೌದು, ಕುದುರೆಯ ಮುಖದ ಆಕಾರದ ಶೈಲಿಯ ಸಿನಿಮಾ ಪೋಸ್ಟರ್ ಇದಾಗಿದೆ.

ಈ ಪೋಸ್ಟರ್​ನಲ್ಲಿ ಸಾಕಷ್ಟು ಸೂಕ್ಷ್ಮ ವಿಷಯಗಳಿವೆ. ಕುದುರೆಯ ಮುಖದ ಮೇಲೆ ಉಪೇಂದ್ರ ಗಾಬರಿಯಿಂದ ನೋಡುತ್ತಿರುವ ಚಿತ್ರ, ಹಳೆ ಕಾಲದ ರೈಲಿನ ಚಿತ್ರವಿದೆ. ಅಷ್ಟೇ ಅಲ್ಲ ಬೆತ್ತಲಾಗಿರುವ ಹೆಣ್ಣಿನ ಚಿತ್ರವೊಂದು ಸಮಾಜಕ್ಕೆ ಕನ್ನಡಿಯಂತೆ ತೋರಿಸುತ್ತಿದೆ.

ಈ ಬೆತ್ತಲೆ ಹೆಣ್ಣಿನ ಕೈ ಹಿಡಿದಿರುವ ಆಸೆ ಪಡುವ ವ್ಯಕ್ತಿಯ ಚಿತ್ರಣ ಕೂಡ ಇದರಲ್ಲಿದ್ದು, ಪೋಸ್ಟರ್ ನೋಡಿದರೆ ಉಪೇಂದ್ರ ಬೆತ್ತಲೆ ಸಮಾಜದ ಬಗ್ಗೆ ಸಿನಿಮಾ ಮಾಡೋದಕ್ಕೆ ಹೊರಟಂತಿದೆ‌. ಈ ಪೋಸ್ಟರ್‌ ಜೊತೆಗೆ ಬುದ್ಧಿಯ ಬಿರುಗಾಳಿ ಎಂಬ ಟ್ಯಾಗ್‌ ಲೈನ್ ಸಹ ಇದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಇದು ಸಿನೆಮಾ ಅಲ್ಲ ಸಿನಾಮ ಅಂತಾ ಹೇಳಲಾಗುತ್ತಿದೆ. ಈ ಚಿತ್ರದ ಮುಹೂರ್ತ ಚಾಮರಾಜಪೇಟೆಯಲ್ಲಿರೋ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ. ಚಿತ್ರಕ್ಕೆ ಶಿವರಾಜ್ ಕುಮಾರ್, ಸುದೀಪ್, ಡಾಲಿ ಧನಂಜಯ್, ದುನಿಯಾ ವಿಜಯ್ ಸಾಥ್ ನೀಡುತ್ತಿದ್ದಾರೆ. ಟಗರು ಸಿನಿಮಾ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಜಿ ಮನೋಹರನ್ ನಿರ್ಮಾಣ ಮಾಡುತ್ತಿದ್ದಾರೆ. ಉಪೇಂದ್ರ ಅಭಿನಯಿಸಿ ನಿರ್ದೇಶನ ಮಾಡುತ್ತಿರೋದು ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದೆ.

ಇದನ್ನೂ ಓದಿ: ರಾಜ್ ಕುಮಾರ್ ಅವರಿಂದ ನಾನು ಸರಳತೆ ಕಲಿತೆ: ನಟ ಕಮಲ್ ಹಾಸನ್

Last Updated : Jun 2, 2022, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.