ETV Bharat / entertainment

'ಮಾನಾಡು' ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಾ ಮಾಸ್​ ಮಹಾರಾಜ? - ಈಟಿವಿ ಭಾರತ ಕನ್ನಡ

ಟಾಲಿವುಡ್​ ನಟ ರವಿತೇಜ ಅವರು 'ಮಾನಾಡು' ಹಿಂದಿ ರಿಮೇಕ್‌ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Ravi Teja
ಟಾಲಿವುಡ್​ ನಟ ರವಿತೇಜ
author img

By

Published : Apr 8, 2023, 5:41 PM IST

ಟಾಲಿವುಡ್​ ನಟ ರವಿತೇಜ ಅವರು ಇತ್ತೀಚೆಗೆ ಬಿಡುಗಡೆಯಾದ ವಾಲ್ಟೇರ್ ವೀರಯ್ಯ ಮತ್ತು ಧಮಾಕಾ ಸೇರಿದಂತೆ ಇತರ ಚಿತ್ರಗಳ ಯಶಸ್ಸಿನ ಖುಷಿಯಲ್ಲಿದ್ದಾರೆ. ಅವರ ಬ್ಲಾಕ್‌ಬಸ್ಟರ್ ಚಿತ್ರದಿಂದಾಗಿ ನಟ ಉತ್ತರ ಭಾರತದಲ್ಲಿಯೂ ಮನ್ನಣೆ ಗಳಿಸಿದ್ದಾರೆ. ಹೀಗಾಗಿಯೇ ಅವರ ಅಭಿಮಾನಿಗಳು ರವಿತೇಜ ಅವರನ್ನು ಬಾಲಿವುಡ್ ಚಿತ್ರಗಳಲ್ಲಿ ವೀಕ್ಷಿಸಲು ಬಯಸುತ್ತಿದ್ದಾರೆ. ಸದ್ಯದ ವರದಿಗಳ ಪ್ರಕಾರ, ನಟ 'ಮಾನಾಡು' ಹಿಂದಿ ರಿಮೇಕ್‌ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಈ ಚಿತ್ರವು ಹಿಂದಿ ಮತ್ತು ತೆಲುಗು ಎರಡು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ರವಿತೇಜಾ ಅವರು ಈ ಸಿನಿಮಾದಲ್ಲಿ ವಿಲನ್​ ಪಾತ್ರ ನಿರ್ವಹಿಸಲಿದ್ದಾರಂತೆ. ಈ ಚಿತ್ರಕ್ಕಾಗಿ ನಟ ವರುಣ್ ಧವನ್ ಅವರನ್ನೂ ಸಂಪರ್ಕಿಸಲಾಗಿದೆ. ಒರಿಜಿನಲ್​​ 'ಮಾನಾಡು' ಚಲನಚಿತ್ರವು 2021 ರಲ್ಲಿ ಭಾರಿ ಯಶಸ್ಸನ್ನು ಕಂಡಿತು ಮತ್ತು ಅದರ ವಿಶಿಷ್ಟ ಪರಿಕಲ್ಪನೆಗಾಗಿ ಪ್ರಶಂಸೆಯನ್ನು ಪಡೆಯಿತು. ಹೀಗಾಗಿ ಈ ತಮಿಳು ಸಿನಿಮಾವನ್ನು ಇದೀಗ ಹಿಂದಿ ಮತ್ತು ತೆಲುಗು ಭಾಷೆಗೆ ರಿಮೇಕ್​ ಮಾಡಲು ಚಿಂತಿಸಲಾಗಿದೆ.

'ಮಾನಾಡು' ತಮಿಳು ಸಿನಿಮಾವಾಗಿದ್ದು, ವೆಂಕಟೇಶ್​ ಪ್ರಭು ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲು ಸಿಲಂಬರಸನ್​, ಎಸ್​ಜೆ ಸೂರ್ಯ ಮತ್ತು ಕಲ್ಯಾಣಿ ಪ್ರಿಯದರ್ಶನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಎಸ್​ಎ ಚಂದ್ರಶೇಖರ್​, ಪ್ರೇಮ್ಗಿ ಅಮರೇನ್​, ಅರವಿಂದ್​ ಆಕಾಶ್​, ವೈ ಜಿ ಮಹೇಂದ್ರನ್​, ಕರುಣಾಕರನ್​ ಮತ್ತು ಅಂಜೆನಾ ಕೀರ್ತಿ ಸಹ ಇದ್ದಾರೆ. ಇನ್ನೂ ರವಿತೇಜ ಅವರ ಸಿನಿಮಾ ವಿಚಾರವಾಗಿ ಹೇಳುವುದಾದರೆ, ಸೂಪರ್​ ಹಿಟ್​ ವಾಲ್ಟೇರ್​ ವೀರದಲ್ಲಿ ಕಾಣಿಸಿಕೊಂಡರು. ಬಳಿಕ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗುತ್ತಿರುವ ಧಮಾಕಾ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 'ಪುಷ್ಪಾ2' ಪೋಸ್ಟರ್​​​ ಬಿಡುಗಡೆ:​ ಅಲ್ಲು ಅರ್ಜುನ್​ ಸೀರೆ ಲುಕ್​ಗೆ ಸಮಂತಾ ಕಾಮೆಂಟ್​ ಹೀಗಿತ್ತು..

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ: ತೆಲುಗು ಚಿತ್ರರಂಗದಲ್ಲಿ ಸೂಪರ್​ ಹಿಟ್​ ಸಿನಿಮಾಗಳನ್ನು ಮಾಡಿ ರವಿತೇಜ ಅವರು ಮಾಸ್​ ಮಹಾರಾಜನೆಂದೇ ಖ್ಯಾತಿ ಪಡೆದಿದ್ದಾರೆ. ಇನ್ನೂ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ರವಿತೇಜ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಂದರ ಹಿಂದೆ ಇನ್ನೊಂದರಂತೆ ಎರಡು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ನಟ ಇದೀಗ 'ರಾವಣಾಸುರ'ನಾಗಿ ಅಬ್ಬರಿಸಿದ್ದಾರೆ. ನಿನ್ನೆಯಷ್ಟೇ ಈ ಸಿನಿಮಾ ತೆರೆ ಕಂಡಿದೆ. ಇದರಲ್ಲಿ ರವಿತೇಜ ಜೊತೆ ಸುಶಾಂತ್​, ಜಯರಾಮ್​, ಅನು ಇಮ್ಯಾನುಯೆಲ್​, ಮೇಘಾ ಆಕಾಶ್​, ದಕ್ಷಾ ನಗರ್ಕರ್​, ಮುರಳಿ ಶರ್ಮಾ ಮತ್ತು ಪೂಜಿತಾ ಪೊನ್ನಡ ಕೂಡ ಕಾಣಿಸಿಕೊಂಡಿದ್ದಾರೆ.

ಈ ಮಧ್ಯೆ 'ಟೈಗರ್​​ ನಾಗೇಶ್ವರ ರಾವ್​' ಚಿತ್ರದ ಬಿಡುಗಡೆಗೂ ಡೇಟ್​ ಫಿಕ್ಸ್​ ಆಗಿದೆ. ವಂಶಿ ನಿರ್ದೇಶನದ ಈ ಸಿನಿಮಾ ಅಕ್ಟೋಬರ್​ 20 ರಂದು ತೆರೆ ಕಾಣಲಿದೆ. 70 ರ ಕಾಲಘಟ್ಟದ ಹೈದರಾಬಾದ್​ನ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ರವಿತೇಜ ಅವರ ಗೆಟಪ್​ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಭಿನ್ನವಾಗಿರಲಿದೆ. 'ಟೈಗರ್​ ನಾಗೇಶ್ವರ ರಾವ್' ಸಿನಿಮಾದಲ್ಲಿ ಬಾಲಿವುಡ್​ ನಟ ಅನುಪಮ್​ ಖೇರ್​ ನಟಿಸಿದ್ದಾರೆ.

ಇದನ್ನೂ ಓದಿ: 41ನೇ ವಸಂತಕ್ಕೆ ಕಾಲಿಟ್ಟ 'ಸ್ಟೈಲಿಶ್​ ಪುಷ್ಪರಾಜ್​'; ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.